“ಶ್ರಾವಣ ಬಂತು ಹರುಷ ತಂತು”…..

ಶ್ರಾವಣ ಬಂತು ಹರುಷ ತಂತು
ವರ್ಷಾ ಧಾರೆ ಆಗ ಈಗ
ಹೊಸ ಹಬ್ಬ ಮನವು ಹುರುಪು
ಶ್ರಾವಣ ಶಿವನ ಪ್ರಿಯ ಮಾಸ
ಶ್ರಾವಣ ಮಾಸ ಮಂಗಳ ಶುಭಕರ
ಮಂಗಳಗೌರಿ ವ್ರತ ಸೌಭಾಗ್ಯದ ವರ
ಶ್ರಾವಣ ಶುಕ್ರವಾರ ಅಷ್ಟಲಕ್ಷ್ಮೀ ಸಿರಿ
ಶ್ರಾವಣ ಸೋಮ ಶಿವನ ವರ
ಅರ್ಧನಾರೀಶ್ವರ ಭಕ್ತರ ಜಪ
ಉಪವಾಸ ಪಾವನ ಯೋಗ
ಆಧ್ಯಾತ್ಮಿಕ ಪ್ರವಚನ ಸ್ವರ್ಗ ಸುಖ
ಶ್ರಾವಣ ಮಂಗಳ ಆನಂದ ಚೇತನ
ಶ್ರಾವಣ ಮಾಸ ಮಳೆ ಹನಿ
ಸರ್ವ ಮನ ಇಂಪು ಕಂಪು
ನಾಗ ಪೂಜೆ ಅಣ್ಣ ತಂಗಿ
ಗಟ್ಟಿತನ ಸುರಕ್ಷತೆ ದಾರ ಧೈರ್ಯ
ಸುಂದರ ಮೆರುಗು ಅಳ್ಳು ಲಡ್ಡು
ಸವಿ ಹಂಚಿ ನೆರೆ ಹೊರೆ
ಸಂತಸ ಕ್ಷಣ ಮನ ಉಯ್ಯಾಲೆ
ಉತ್ಸಾಹ ತೇಲುವ ಶ್ರಾವಣ ಮಾಸ
ಹರಿಹರ ಸ್ಮರಣೆ ಅಮೃತ ಘಳಿಗೆ
ಶುಭ ತರುವದು ಶ್ರಾವಣ ಮಾಸ
-ದೇಶಂಸು.
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ ಆರೋಗ್ಯ
ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ
