“ಟೆಕ್ವಾಂಡೋ ಗರ್ಲ್” ಸಮರ ಕಲೆ ಚಿತ್ರ ಶೀಘ್ರದಲ್ಲೇ ಬಿಡುಗಡೆ.

ಬೆಂಗಳೂರು ಆ.07

ಆತ್ರೇಯ ಕ್ರಿಯೇಶನ್ಸ್ ಅವರ ಡಾ. ಸುಮಿತಾ ಪ್ರವೀಣ್ ಚೊಚ್ಚಲ ನಿರ್ಮಾಣದ “ಟೆಕ್ವಾಂಡೋ ಗರ್ಲ್’ ಸೌತ್ ಕೋರಿಯಾದ ಸಮರ ಕಲೆ ಚಿತ್ರ ಶೀಘ್ರದಲ್ಲೇ ರಾಜ್ಯಾದ್ಯಂತ ಚಿತ್ರ ಮಂದರಿಗಳಲ್ಲಿ ಬೆಳ್ಳಿ ತೆರೆಯ ಮೇಲೆ ರಂಜಿಸಲು ಬರುತ್ತಿದೆ. ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹೆಣ್ಣು ಮಕ್ಕಳು ತಮಗೆ ತಾವೇ ಹೇಗೆ ರಕ್ಷಿಸಿ ಕೊಳ್ಳಬೇಕು ಎಂಬುದರ ಮಹತ್ತರ ಸಂದೇಶವಿದೆ. ಸುಮಾರು 200 ಮಕ್ಕಳಿಗೆ ಅವಕಾಶ ಕಲ್ಪಿಸಿದ ಸಾಮಾಜಿಕ ಕಳಕಳಿ ಇರುವ ಈ ಚಿತ್ರವನ್ನ ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೂ ತೋರಿಸ ಬೇಕು ಎಂಬುದು ನಿರ್ಮಾಪಕರ ಮನದಾಳದ ಮಾತು . ಮಗಳು ಋತು ಸ್ಪರ್ಶ ಸುಮಾರು ಎಂಟು ವರ್ಷಗಳಿಂದ ಟೆಕ್ವಾಂಡೋ ಸಮರ ಕಲೆಯನ್ನ ಕಲಿತು ನಾಲ್ಕು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದಿದ್ದಾಳೆ. ಜೊತೆಯಲ್ಲಿ ಅಂತಾರಾಷ್ಟ್ರೀಯ ನೃತ್ಯಗಾರ್ತಿಯು ಆಗಿರುವ ಈ ಅಪ್ಪಟ ದೇಸಿ ಕಲಾ ಪ್ರತಿಭೆಯ ಮೊದಲ ಚಿತ್ರ ಇದಾಗಿದ್ದರೂ ಬಿಡುಗಡೆಗೆ ವಿಳಂಬವಾಗಿ ಇದೀಗ ಸಿದ್ದವಾಗಿದೆ. ಈಗಾಗಲೇ ಕನ್ನಡದ ಬಾಲ್ಯ, ಗಂಗೆ ಗೌರಿ ತಾರಕೇಶ್ವರ ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ.

ತಾರಕೇಶ್ವರ ಚಿತ್ರದಲ್ಲಿ ಬಾಲಸುಬ್ರಹ್ಮಣ್ಯನಾಗಿ ಬಾಲಕನ ಪಾತ್ರದಲ್ಲಿ ಅಭಿನಯಿಸಿದ್ದಾಳೆ. 30 ದಿನಗಳ ಕಾಲ ನಡೆದಿರುವ ಈ ಚಿತ್ರೀಕರಣದಲ್ಲಿ ಸಮರ ಕಲಿಯನ್ನು ಹೇಳಿ ಕೊಟ್ಟವರು ಮಾಸ್ಟರ್ ವಿಫ ರವಿ. ಎರಡು ಹಾಡುಗಳು ಚಿತ್ರದಲ್ಲಿವೆ ಎಂದು ನಿರ್ಮಾಪಕಿ ಡಾ.ಸುಮಿತ ಪ್ರವೀಣ ತಿಳಿಸಿದ್ದಾರೆ. ತಾರಾಬಳಗದಲ್ಲಿ ಋತು ಸ್ಪರ್ಶ, ಡಾ. ಸುಮಿತ ಪ್ರವೀಣ್ , ಪ್ರವೀಣ್ ಸಿ ಭಾನು , ಪಲ್ಲವಿ ರಾವ್, ಸಹನ ಶ್ರೀ , ವಿಫ ರವಿ ,ಸ್ವಾತಿ ಶಿವಮೊಗ್ಗ ,ರೇಖಾ ಕೂಡ್ಲಗಿ ಮೊದಲಾದವರು ಅಭಿನಯಿಸಿದ್ದು ,ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಪ್ರಮೋದ್ ಭಾರತೀಯ, ಸಾಹಿತ್ಯ ಮನೋಜ ಕುಮಾರ , ಸಂಗೀತ ಎಂ ಎಸ್ ತ್ಯಾಗರಾಜ, ಸಾಹಸ ವಿಫ ರವಿ , ಸಂಕಲನ ರವಿಚಂದನ್ ಸಿ, ಧ್ವನಿ ಗ್ರಹಣ ಕೃಸ್ಣಮೂರ್ತಿ, ಪ್ರಸಾಧನ ವೆಂಕಟೇಶ, ಕಲೆ ಚೇತನ್, ಪಿ.ಆರ್.ಓ ಆರ್.ರಜನಿಕಾಂತ್, ಪತ್ರಿಕಾ ಸಂಪರ್ಕ ವೀರೇಂದ್ರ ಬೆಳ್ಳಿಚುಕ್ಕಿ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ , ಸಹ ನಿರ್ದೇಶನ ಅನಿಲ್, ಯುವಸೂರ್ಯ, ಸೂರಿ, ರಚನೆ ನಿರ್ದೇಶನ ರವೀಂದ್ರ ವಂಶಿ ಅವರದಿದ್ದು ಈ ಚಿತ್ರದ ಸಹ ನಿರ್ಮಾಪಕರು ಪ್ರವೀಣ್ ಸಿ ಭಾನು , ನಿರ್ಮಾಪಕರು ಡಾ. ಸುಮಿತ ಪ್ರವೀಣ್ ಅವರಾಗಿದ್ದಾರೆ.

*****

ವರದಿ:-ಡಾ.ಪ್ರಭು ಗಂಜಿಹಾಳ

ಮೊ : ೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button