ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ರಾಜ್ಯ ಮಟ್ಟದ “ಅಭಿರುಚಿ ಮಾಧ್ಯಮ ರತ್ನ” ಪ್ರಶಸ್ತಿ ಪ್ರಧಾನ ಮಾಡಿದರು.
ಮೈಸೂರು ಆ.12

ಅಭಿರುಚಿ ಬಳಗ (ರಿ) ಎನ್ ವಿ ರಮೇಶ್ ಕಲಾ ಬಳಗ, ಆಸಕ್ತಿ ಪ್ರಕಾಶನ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನೀಡುವ ರಾಜ್ಯಮಟ್ಟದ “ಅಭಿರುಚಿ ಮಾಧ್ಯಮ ರತ್ನ” ಪ್ರಶಸ್ತಿಯನ್ನು ಪತ್ರಕರ್ತ, ಸಂಪದ ಸಾಲು ಪತ್ರಿಕೆ ಸಂಪಾದಕ, ವೆಂಕಟೇಶ ಎಸ್ ಸಂಪ ಅವರಿಗೆ ಆಗಸ್ಟ್ 11 ರಂದು ಮೈಸೂರಿನ ನಮನ ಕಲಾ ಮಂಟಪದಲ್ಲಿ ಪ್ರಧಾನ ಮಾಡಲಾಯಿತು.ವೆಂಕಟೇಶ ಸಂಪ ಅವರು ಕಳೆದ 17 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದು, ಇವರ ಸಾವಿರಾರು ಕತೆ, ಕವನ, ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟ ಗೊಂಡಿವೆ. ಹಾಗೂ ಟಿ ವಿ,ರೇಡಿಯೋಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದು, ಹಲವಾರು ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.ರಕ್ತದಾನ, ನೇತ್ರದಾನ, ಪರಿಸರ ಜಾಗೃತಿ ಅಭಿಯಾನ, ನೀರು ಉಳಿಸಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ವೆಂಕಟೇಶ ಸಂಪ ಅವರು, ಸಾವಯವ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ.

ಈ ಕಾರ್ಯಕ್ರಮವನ್ನು ಸಮಾಜ ಸೇವಕರಾದ ಶ್ರೀ ಡಾ ರಘುರಾಮ್ ವಾಜಪೇಯಿ ಉದ್ಘಾಟಿಸಿದರು. ಅಭಿರುಚಿ ಬಳಗದ ಮುಖ್ಯಸ್ಥರಾದ ಶ್ರೀ ಎನ್ ವಿ ರಮೇಶ್,ಲತಾ ಮೋಹನ್,ಕೇರೋಡಿ ಲೋಲಾಕ್ಷಿ, ಎನ್ ವಿ ರಮೇಶ್,ಗಿರಿಜಾ ಮಾಲಿಪಾಟೀಲ್,ಸುಜಾತ ರವೀಶ್,ಸುಮಾ ಪಂಚವಳ್ಳಿ,ಮಡ್ಡಿಗೆರೆ ಗೋಪಾಲ್, ಉಮಾ ರಮೇಶ್ ಭಾಗವಹಿಸಿದ್ದರು.ಕಾವ್ಯ ಗಂಗೆ ಸಮಗ್ರ ಕಾವ್ಯ ಸಾಹಿತ್ಯ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನೆರವೇರಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.