ಯಲಗೋಡದಲ್ಲಿ ಪ್ರತಿಭಾ ಕಾರಂಜಿ ಆಚರಣೆ.
ಯಲಗೋಡ ಆ.13

ಸಿಂದಗಿ ತಾಲೂಕಿನ ಸಮೂಹ ಸಂಪನ್ಮೂಲ ಕೇಂದ್ರ ಯಲಗೋಡ ವ್ಯಾಪ್ತಿಯ 2024-25 ನೇ. ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡದಲ್ಲಿ ಇಂದು ದಿನಾಂಕ 13-08-2024 ರಂದು ಜರುಗಿದವು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳಿಯ ಎಂ.ಪಿ.ಎಸ್ ಯಲಗೋಡ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಮಹಾಂತೇಶ ಕೂಟನೂರ, ಮುಖ್ಯ ಅತಿಥಿಯಾಗಿ ಸಿಂದಗಿ ವಲಯದ ಬಿ.ಆರ್.ಪಿ ರವರಾದ ಶ್ರೀಮತಿ ಶ್ರೀದೇವಿ ರಬಿನಾಳ ಗುರು ಮಾತೆಯರು, ಅತಿಥಿಗಳಾಗಿ ಶ್ರೀ ಹುಸೇನಿ ತಳ್ಳೊಳ್ಳಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀ ಸಂತೋಷ್ ಹಚ್ಯಾಳ ಪ್ರಥಮ ದರ್ಜೆ ಗುತ್ತಿಗೆದಾರರು ಯಲಗೋಡ, ಶ್ರೀ ಸಾಹೇಬಣ್ಣ ಬಾಗೇವಾಡಿ ದೇವರ ಹಿಪ್ಪರಗಿ ತಾಲೂಕ ಜೆಡಿಎಸ್ ಅಧ್ಯಕ್ಷರು, ಶ್ರೀ ಶೇಖಪ್ಪ ಪೂಜಾರಿ ಗ್ರಾಮ ಪಂಚಾಯಿತಿ ಸದಸ್ಯರು, ಬಾಬು ಬಾಗೇವಾಡಿ ಗ್ರಾಮದ ಪ್ರಮುಖರು, ಶ್ರೀ ವಿ.ಎಮ್. ಕರಕಳ್ಳಿಮಠ ಸಿ ಆರ್.ಪಿ.ಯಲಗೋಡ, ಉಳಿದಂತೆ ಎಲ್ಲಾ ಎಸ್.ಡಿ.ಎಂ.ಸಿ ಸದಸ್ಯರು ಗ್ರಾಮದ ಪ್ರಮುಖರು ಭಾಗವಹಿಸಿದ್ದರು..ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದಂತಹ ಶ್ರೀಮತಿ ಶ್ರೀದೇವಿ ರಬಿನಾಳ ಬಿ.ಆರ್.ಪಿ ರವರು ಪ್ರತಿಭಾ ಕಾರಂಜಿ ಕಾರ್ಯಕ್ರಮವು ಮಕ್ಕಳಲ್ಲಿರುವ ಪ್ರತಿಭೆಯನ್ನು ಕಲೆಯನ್ನು ಹೊರ ಹಾಕಲು ಇದು ಉತ್ತಮ ವೇದಿಕೆ ಯಾಗಿದ್ದು.

ಈ ವೇದಿಕೆಯನ್ನು ಸದ್ಬಳಕೆ ಮಾಡಿ ಕೊಳ್ಳಬೇಕು ಹಾಗೂ ಮಕ್ಕಳು ಸಹಕಾರಿ ಶಾಲೆಗಳಿಗೆ ಹಾಜರಾಗಿ ಸರ್ಕಾರಿ ಶಾಲೆಯ ಉತ್ತಮ ಶಿಕ್ಷಣವನ್ನು ತಾವು ಪಡೆದು ಕೊಳ್ಳಲು ಹಾಗೂ ಇದಕ್ಕೆ ಪಾಲಕರು ಕೂಡ ಸಹಕಾರಿಯಾಗ ಬೇಕೆಂದು ಹೇಳಿದರು. ಸಾಯಬಣ್ಣ ಬಾಗೇವಾಡಿ ಜೆಡಿಎಸ್ ಅಧ್ಯಕ್ಷರು ಮಾತನಾಡಿ ಪ್ರತಿಭಾ ಕಾರಂಜಿ ಎಂಬುದು ಮಕ್ಕಳ ಪ್ರತಿಭೆಯನ್ನು ಹೊರ ಹಾಕುವ ಉತ್ತಮ ಕಾರ್ಯಕ್ರಮವಾಗಿದ್ದು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯವಾಗಿದ್ದು ಎಲ್ಲಾ ಮಕ್ಕಳು ಶಿಕ್ಷಕರು ಪ್ರಾಮಾಣಿಕತೆ ಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸ ಬೇಕೆಂದು ಹಾಗೂ ಸರಕಾರಿ ಶಾಲೆಯ ಶಿಕ್ಷಕರು ಯಾವುದರಲ್ಲೂ ಕಡಿಮೆ ಇಲ್ಲ ತಾವೆಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಎಂದು ಹೇಳಿದರು. ನಂತರದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿ.ಎಮ್ ಕರಕಳ್ಳಿಮಠ ರವರು ಮಾತನಾಡಿ 2024-25 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸುಗಮವಾಗಿ ಜರುಗಲು ಕಾರಣಕರ್ತರಾದ ಧಾನಿಗಳನ್ನು ನೆನೆಸಿ ಕೊಂಡು . ಪ್ರತಿ ಮಗು ಕಲಿಕೆಯಲ್ಲಿ ತೊಡಗುವುದ ರೊಂದಿಗೆ ಕಲಿಕೆ ತರ ಚಟುವಟಿಕೆಗಳಲ್ಲಿ ಭಾಗವಹಿಸಿ ಅಂತಹ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸಲು ಈ ಪ್ರತಿಭಾ ಕಾರಂಜಿ ಒಂದು ಉತ್ತಮ ವೇದಿಕೆಯಾಗಿದ್ದು. ಎಲ್ಲ ಶಿಕ್ಷಕರು ಮಕ್ಕಳು ಯಾವುದೇ ಭೇದಭಾವ ಮಾಡದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರ್ಣಾಯಕರು ಎಲ್ಲ ಮಕ್ಕಳು ನಮ್ಮವೇ ಎಂದು ನೈಜ ಪ್ರತಿಭೆಯನ್ನು ಗುರುತಿಸಿ ನಿರ್ಣಯವನ್ನು ನೀಡ ಬೇಕೆಂದು ಸೂಚಿಸಿದರು. ಎಲ್ಲಾ ಸ್ಪರ್ಧೆಗಳು ಅಚ್ಚು ಕಟ್ಟಾಗಿ ನೆರವೇರಿದವು ಮಕ್ಕಳಿಗೆ ಮಧ್ಯಾಹ್ನದಲ್ಲಿ ಒಳ್ಳೆಯ ಊಟವನ್ನು ತಯಾರಿಸಲಾಗಿತ್ತು ಕೊನೆಗೆ ಎಲ್ಲ ಸ್ಪರ್ಧೆಗಳು ಮುಗಿದ ನಂತರ ಸಾಯಂಕಾಲ 4-30 ಕ್ಕೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಮಾಡಿ ಸ್ಪರ್ಧೆಗಳಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದಂತಹ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಿ ಪ್ರಥಮ ಬಂದ ವಿದ್ಯಾರ್ಥಿಗಳು ತಾಲೂಕ ಹಂತದ ಕಾರ್ಯಕ್ರಮಕ್ಕೆ ತಯಾರಿ ಮಾಡಿ ಕೊಳ್ಳುವಂತೆ ಸೂಚಿಸಿ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.

