78 ನೇ. ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಮಾತೃ ಭಾಷೆ ಕನ್ನಡವನ್ನು ಶ್ರೀ ಮಂತ ಗೊಳಿಸಿ – ದ.ಸಾ.ಪ ಜಿಲ್ಲಾಧ್ಯಕ್ಷ ಟಿ. ಶಿವಮೂರ್ತಿ ಅಭಿಮತ.
ಚಿತ್ರದುರ್ಗ ಆ .13

ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ನಮ್ಮ ಭಾರತೀಯ ಪರಂಪರೆಯ ನಾಡ ಹಬ್ಬಗಳ ಆಚರಣೆಗಳಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೇರೆ ಅನ್ಯ ಭಾಷೆಯ ಹಿಂದಿ ತಮಿಳು ತೆಲುಗು ಮಲಯಾಳಂ ಇಂಗ್ಲಿಷ್ ನೃತ್ಯಗಳಿಗೆ ಹೆಚ್ಚು ಹೆಚ್ಚು ಅವಕಾಶಗಳು ನೀಡುತ್ತಿರುವುದು ತುಂಬಾ ವಿಷಾದನೀಯ ಸಂಗತಿ, ನಮ್ಮ ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿ ಗೆ ಸಂಬಂಧಪಟ್ಟ ಸ್ವತಂತ್ರ ಹೋರಾಟಗಾರರ ಹಾಡು ಮತ್ತು ನೃತ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಏಕೆಂದರೆ ನಮ್ಮ ಕನ್ನಡ ಭಾಷೆಗೆ ಎರಡು ಸಾವಿರದ ಐದುನೂರು ವರ್ಷಗಳ ಇತಿಹಾಸವಿದೆ ಬೇರೆ ಯಾವ ಭಾಷೆಗಳಿಗೆ ನಮ್ಮ ಕನ್ನಡ ಭಾಷೆ ಸಾಹಿತ್ಯ ಕಡಿಮೆ ಇಲ್ಲ ಅಷ್ಟು ಶ್ರೀಮಂತಿಕೆಯನ್ನು ಹೊಂದಿರುವ ಏಕೈಕ ಭಾಷೆಯಾಗಿದೆ, ಇಂತಹ ನಮ್ಮ ಕನ್ನಡ ಭಾಷೆಯನ್ನು ಉಳಿಸುವುದು ಹಾಗೂ ಅನ್ಯ ಭಾಷೆಯ ನೃತ್ಯಗಳಿಗೆ ಕಡಿವಾಣ ಹಾಕುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಈ ಬಗ್ಗೆ ಕನ್ನಡಪರ ಸಂಘಟನೆಗಳು, ಕ.ರ.ವೇ, ಮತ್ತು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಹೆಚ್ಚು ಗಮನ ಹರಿಸುವುದು ಅವಶ್ಯಕ ಎಂದು ಚಿತ್ರದುರ್ಗ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಆದ ಕೋಡಿಹಳ್ಳಿ ಟಿ.ಶಿವಮೂರ್ತಿ ಮನವಿ ಮಾಡಿದ್ದಾರೆ.