ಹಾಲು ಅಮೃತ, ಕಲ್ಲು ಮಣ್ಣಿಗೆ ಎರೆದು – ಹಾಳು ಮಾಡದಿರಿ.
ಕಂದಗಲ್ಲ ಆ.09

ಹಾಲು ಅಮೃತವಿದ್ದಂತೆ ಅದು ಸತ್ವಯುತವಾದ ಪರಿ ಪೂರ್ಣವಾದ ಪೌಸ್ಟಿಕ ಆಹಾರ ಅದನ್ನು ಕಲ್ಲು ಮಣ್ಣಿಗೆ ಹಾಕಿ ಹಾಳು ಮಾಡದಿರಿ ಎಂದು ಸ್ಥಳೀಯ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಏರ್ಪಡಿಸಿದ ಹಾಲು ಕುಡಿಯುವ ಹಬ್ಬ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಂಸ್ತಾಪಕರಾದ ಡಾ ಸಂತೋಷ ಪೂಜಾರ ರವರು ಹೇಳಿದರು.ರಾಜ್ಯದಲ್ಲಿ ಪ್ರತಿ ವರ್ಷ 40 ಸಾವಿರಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆ ಯಿಂದ ಸಾವಿಗೀಡಾವುದಾಗಿ ಸಮೀಕ್ಷೆಯಲ್ಲಿ ತಿಳಿಸಲಾಗಿದೆ ನಾಗರ ಪಂಚಮಿ ಯೆಂದು ಲಕ್ಷಾಂತರ ಲೀಟರ್ ಹಾಲು ಕಲ್ಲು ಮಣ್ಣಿನ ನಾಗರ್ ಮೂರ್ತಿಗಳಿಗೆ ಎರೆದು ಹಾಳು ಮಾಡುವುದು ಬೇಡ ಬದಲಿಗೆ ಬಡ ಮಕ್ಕಳು ರೋಗಿಗಳಿಗೆ ವಿತರಿಸಿ ವೈಚಾರಿಕತೆ ಯಿಂದ ನಾಗರ್ ಪಂಚಮಿ ಹಬ್ಬ ಆಚರಿಸ ಬೇಕು ಎಂದರು. ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೀರೇಶ ಶಿಂಪಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹಾಲು ಕುಡಿಯುವ ಹಬ್ಬವನ್ನು ಮೊದಲು ಇಲಕಲ್ಲ ಚಿತ್ತರಗಿ ಮಠದ ಲಿo ಡಾ ಮಹಾಂತ ಶ್ರೀಗಳು ಸಮಾಜದ ಮೌಡ್ಯತೆ ದೂರ ಮಾಡುವಲ್ಲಿ ಹಗಲಿರುಳು ಎನ್ನದೆ ಶ್ರಮಿಸಿದ ಮಹಾತ್ಮರು ಅವರ ಆಶಯದಂತೆ ಪೌಷ್ಠಿಕ ಆಹಾರವಾದ ಹಾಲನ್ನು ಕಳೆದ ಆರೆಳು ವರ್ಷಗಳಿಂದ ನಮ್ಮ ನಿಹಾರಿಕಾ ಗ್ರಾಮೀಣಾಭಿವೃದ್ದಿ ಸಂಘ ದಿಂದ ನಾಗರ ಪಂಚಮಿ ದಿನ ದಂದು ಈ ಹಬ್ಬವನ್ನು ಆಚರಿಸುತ್ತಿದ್ದೆವೆ ಎಂದರು. ಕಾರ್ಯಕ್ರಮದಲ್ಲಿ ಮಂಜುನಾಥ ತೋಟದ ಸ್ವಾಮಿಮಠ, ಗುರು ಸಜ್ಜನ,ರಮೇಶ ಕುಂಬಾರ,ಯಂಕಣ್ಣ ಮಳ್ಳಿ ಲಿಂಗರಾಜ ಶಿರಗುಂಪಿ, ಚಂದ್ರಶೇಖರ ಬಸರಗಿಡದ, ಉಪಸ್ಥಿತರಿದ್ದರು ರಾಜೇಸಾಬ ಪರಾಸರ ಸ್ವಾಗತಿಸಿ ವಂದಿಸಿದರು ಸಂಸ್ಥೆಯ ಪ್ರಶಾಂತ ಬನ್ನಿಗೋಳ ನಿರೂಪಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ