ಎನ್.ಹೆಚ್.ಎಂ ಒಳಗುತ್ತಿಗೆ ನೌಕರರನ್ನು ಖಾಯಂಗಾಗಿ ಆಗ್ರಹಿಸಿ – ಕಪ್ಪು ಪಟ್ಟಿಯೊಂದಿಗೆ ಮುಷ್ಕರ.
ಕಲಕೇರಿ ಆ.17

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಇಂದು ಸಮುದಾಯ ಆರೋಗ್ಯ ಕೇಂದ್ರ ಕಲಕೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಪ್ರಯೋಗಶಾಲೆ ಸಿಬ್ಬಂದಿ, ಆಪ್ತ ಸಮಾಲೋಚಕರು, ಶ್ರುಶೂಷಕರು, ಹಾಗೂ ಇತರೆ ಸಿಬ್ಬಂದಿಗಳು “ಸೇವೆ ಖಾಯಂ ಮಾಡುವಂತೆ ಆಗ್ರಹಿಸಿ” ಕಪ್ಪುಪಟ್ಟಿ ಕಟ್ಟಿಕೊಂಡು ಶನಿವಾರ ಮುಷ್ಕರ ನಡೆಸಿದರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಎನ್.ಹೆಚ್.ಎಮ್ ಒಳಗುತ್ತಿಗೆ ನೌಕರರನ್ನು ಖಾಯಂ ಗೊಳಿಸುವ ಭರವಸೆ ನೀಡಿದರು. ನಮಗೆ ಸೇವಾ ಭದ್ರತೆ ಇಲ್ಲವಾಗಿದ್ದು. ಇದರಿಂದ ನಮಗೆ ತೊಂದರೆ ಯಾಗಿದೆ. ರಾಜ್ಯದಲ್ಲಿ ಸುಮಾರು 28256 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಲಕೇರಿಯಲ್ಲಿ 15 ಜನ ಸಿಬ್ಬಂದಿ ಒಳಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಸುಮಾರು ವರ್ಷಗಳಿಂದ ನಮ್ಮ ಏಕೈಕ ಬೇಡಿಕೆ ಎನ್.ಹೆಚ್.ಎಂ ನೌಕರರನ್ನು ಖಾಯಂ ಮಾಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ಅಪ್ಪಸಾಬ ಮಾಂಗ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಶಿವಕುಮಾರ್ ತುಗ್ಗಣಿ, ಆಸೀಫ್ ನದಾಫ್, ಸಂಗೀತಾ ಪಾಸೋಡಿ, ಭಾಗ್ಯಶ್ರೀ ಬೂದಿಹಾಳ, ಲಕ್ಷ್ಮೀ ಮಾಂಗ್, ಅನ್ನಮ್ಮ ನ್ಯಾಕೋಡಿ, ಸುಶ್ಮಿತಾ, ಅನಿತಾ, ಆರತಿ ಮತ್ತು ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ