ಅಧ್ಯಕ್ಷರಾಗಿ ಕೆಲವೇ ಕ್ಷಣದಲ್ಲಿ ಸಂಸದರಾದ ಈ ತುಕಾರಾಂ, ಅವರಿಗೆ ಪಟ್ಟಣದ ಅಭಿವೃದ್ಧಿಗೆ ಬೇಡಿಕೆಯನ್ನು ಇಟ್ಟ – ನೂತನ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ.
ಕೂಡ್ಲಿಗಿ ಆ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಎರಡನೇ ಅವಧಿಗೆ ಅಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಸ್ಥಾನ ಇದ್ದು. ಈ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಕಾಂಗ್ರೆಸ್ ನ ಸದಸ್ಯರಾದ ಕಾವಲಿ ಶಿವಪ್ಪ ನಾಯಕ ರವರು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಯಾದರು. ಚುನಾವಣಾ ಪ್ರಕಟಣೆಯನ್ನು ತಾಲೂಕಾ ತಹಶೀಲ್ದಾರ್ರಾದ ಎಂ.ರೇಣುಕಾ ರವರು ಮಾಧ್ಯಮದ ಮೂಲಕ ಪ್ರಕಟಣೆ ನೀಡಿದ ನಂತರ ಮಾನ್ಯ ಶಾಸಕರಾದ ಎನ್.ಟಿ ಶ್ರೀನಿವಾಸ್ ಹಾಗೂ ವಿಜಯನಗರ ಹಾಗೂ ಅಖಂಡ ಬಳ್ಳಾರಿ ಜಿಲ್ಲೆಯ ಸಂಸದರಾದ ಇ.ತುಕಾರಾಂ ರವರು ಹಾಜರಿದ್ದ. ಸಂದರ್ಭದಲ್ಲಿ ನೂತನ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಆಯ್ಕೆಯಾದಂತಹ ಸಂದರ್ಭದಲ್ಲಿ ನೂತನ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕರವರು ಮಾನ್ಯ ಸಂಸದರಿಗೆ ಪಟ್ಟಣದ ಪಟ್ಟಣ ಪಂಚಾಯತಿಯ ಎಲ್ಲಾ ಸದಸ್ಯರ ಪರವಾಗಿ ಹಾಗೂ ಶಾಸಕರ ಪರವಾಗಿ ಅಭಿವೃದ್ಧಿಯ ದೃಷ್ಟಿಯನ್ನು ಇಟ್ಟು ಕೊಂಡು ಪ್ರಮುಖ ರಸ್ತೆಗಳ ಅಭಿವೃದ್ಧಿಯ ವಿಷಯವನ್ನು ಅರಿತು ಉದ್ದೇಶಿಸಿ ಬೇಡಿಕೆಗಳನ್ನಿಟ್ಟು ಮಾತನಾಡಿದರು. ಹಾಗೂ ಈ ಸಂದರ್ಭದಲ್ಲಿ ಸಂಸದರಾದ ಈ ತುಕಾರಾಮರ ವರಿಗೂ ಹಾಗೂ ಎನ್. ಟಿ ಶ್ರೀನಿವಾಸ್ ಶಾಸಕರು ರವರಿಗೂ ಹಾಗೂ ಎಲ್ಲಾ ಕಾಂಗ್ರೆಸ್ಸಿನ ಎಲ್ಲಾ ಮುಖಂಡರಿಗೂ ಹಾಗೂ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರಿಗೂ ಅಭಿಮಾನಿಗಳಿಗೂ ಅಭಿನಂದನೆಗಳು ತಿಳಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ