ಪಿಡಿಓ ಲತಾಬಾಯಿ ವರ್ಗಾವಣೆ ಮಾಡುವಂತೆ ಮನವಿ.
ಕಾಳಾಪುರ ಜನೇವರಿ.12

ಕಾಳಾಪುರ ಗ್ರಾಮ ಪಂಚಾಯಿತಿಯ ಪಿಡಿಒ ಲತಾಬಾಯಿ ಅವರನ್ನು ವರ್ಗಾವಣೆ ಮಾಡುವಂತೆ ಅಧ್ಯಕ್ಷರು ಮತ್ತು ಸದಸ್ಯರ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಶುಕ್ರವಾರ ರಂದು ಲಿಖಿತ ಪತ್ರ ನೀಡುವುದರ ಮೂಲಕ ಮನವಿ ಸಲ್ಲಿಸಿದರು. ಕಾಳಾಪುರ ಗ್ರಾಮ ಪಂಚಾಯತಿ ಪಿಡಿಒ ಸರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಸಾರ್ವಜನಿಕರಿಗೆ ಸ್ಪಂದಿಸುವುದಿಲ್ಲ ತಮ್ಮ ಇಚ್ಛೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತಾರೆ. ಜನರ ಕೆಲಸ ಯಾವುದು ಮಾಡುತ್ತಿಲ್ಲ.ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಗೌರವ ಕೊಡುತ್ತಿಲ್ಲ. ಹೀಗಾದರೆ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳೇ ಈ ರೀತಿ ನಡೆದು ಕೊಂಡರೆ ಗ್ರಾಮ ಮತ್ತು ಸಾರ್ವಜನಿಕರ ಅಭಿವೃದ್ಧಿ ಹೇಗೆ ಸಾಧ್ಯ! ಆದಕಾರಣ ಈ ಪಿಡಿಓ ರವರನ್ನು ವರ್ಗಾವಣೆ ಮಾಡಿ ಸಮಗ್ರ ಅಭಿವೃದ್ಧಿ ಪಡಿಸುವಂತಹ ಪಿಡಿಒ ರವರನ್ನು ನೇಮಿಸಿ ಕೊಡಿ ಎಂದು ಮನವಿ ಮಾಡಿ ಕೊಂಡರು. ಈ ಸಂದರ್ಭದಲ್ಲಿ ಬಿ ಸುರೇಶ್ ಅಧ್ಯಕ್ಷರು ಗ್ರಾಮ ಪಂಚಾಯತಿ ಮತ್ತು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು