ಕೊಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಖಂಡಿಸಿ – ಸೂಕ್ತ ಭದ್ರತೆಗಾಗಿ ಮನವಿ.
ಲಿಂಗಸಗೂರು ಆ.19

ಕಲ್ಕತ್ತಾ ವೈದ್ಯಕೀಯ ಟ್ರೈನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿರುವ ಅಪರಾಧಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹಟ್ಟಿ ಪ್ರಗತಿಪರ ಜಂಟಿ ಸಂಘಟನೆಗಳು ಪ್ರತಿಭಟಿಸಿದರು.ಲಿಂಗಸಗೂರು ತಾಲ್ಲೂಕಿನ ಹಟ್ಟಿ ಪಟ್ಟಣದ ಪಾಮನ ಕಲ್ಲೂರು ಕ್ರಾಸ್ ನಿಂದ, ಬಸ್ ನಿಲ್ದಾಣ, ಕೊಠಾ ಕ್ರಾಸ್, ಮೂಲಕ ಪೊಲೀಸ್ ಠಾಣೆವರಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮುಖಂಡರಾದ ಮೀನಾಕ್ಷಿ ಬಾಳೆ ವೈದ್ಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ವೈದ್ಯ ಮೇಲೆ ಆದ ಕೃತ್ಯವನ್ನು ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.ಟ್ರೈನಿ ವೈದ್ಯೆಯ ಮೃತ ದೇಹವು ಶುಕ್ರವಾರ ಬೆಳಿಗ್ಗೆ ಕಾಲೇಜಿನ ಮೂರನೇ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುತ್ತಿಗೆ ಮೂಳೆ ಮುರಿದು, ಕಣ್ಣು, ಬಾಯಿ, ಖಾಸಗಿ ಅಂಗದಲ್ಲೂ ರಕ್ತಸ್ರಾವ ಆಗುವಷ್ಟು ಭೀಕರವಾದ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ವರದಿಯಾಗಿದೆ. ಇದು ದೇಶದ ನಾಗರಿಕರಲ್ಲಿ ತೀವ್ರವಾದ ಆತಂಕ, ಗಾಬರಿ ಮತ್ತು ಆಘಾತವನ್ನು ಉಂಟು ಮಾಡಿದೆ. ಜನರ ಜೀವವನ್ನು ರಕ್ಷಿಸ ಬೇಕಾದ ವೈದ್ಯರಿಗೇ ರಕ್ಷಣೆ ಇಲ್ಲದಂತಾಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಇಂತಹ ಘೋರವಾದ ಘಟನೆ ನಡೆಯುವ ಸಂದರ್ಭದಲ್ಲಿ ಅಲ್ಲಿರುವ ಸಿಬ್ಬಂದಿ ವರ್ಗ ಎಲ್ಲಿತ್ತು. ಆಡಳಿತ ವ್ಯವಸ್ಥೆಯು ಇಂದು ಸಂಪೂರ್ಣವಾಗಿ ಕಲುಷಿತವಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯ ಸ್ಥಳದಲ್ಲಿ ಏಕಾಏಕಿ ಗುಂಪು ಗೂಡಿ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದ ತಪ್ಪಿತಸ್ಥರನ್ನು ಶಿಕ್ಷೆ ವಿಧಿಸಬೇಕು ಹಾಗೂ ಜಸ್ಟಿಸ್ ವರ್ಮಾ ಆಯೋಗ ಶಿಫಾರಸು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ನಿರ್ಭಯ ಹತ್ಯೆಯಾದಾಗ ಇಡೀ ದೇಶದಲ್ಲಿ ಪ್ರತಿಭಟನೆಗಳು ಪಂಜಿನ ಮೆರವಣಿಗೆ, ಹೋರಾಟಗಳು ಹಾಗೂ ಅಪರಾಧಿಗೆ ಶಿಕ್ಷೆಯಾದರು ಮಹಿಳೆಯರ ಮೇಲೆ ದೌರ್ಜನ್ಯ ,ಕೊಲೆ ನಡೆದಿವೆ ಈ ದೇಶ ಯಾರಿಗೂ ಸುರಕ್ಷಿತವಾಗಿಲ್ಲ ನಿರ್ಭಯಾ ನಿಧಿ ಸದ್ಬಳಕೆ ಯಾಗಬೇಕು ಎಂದರು. ಬಿಲ್ಕಿಸ್ ಬಾನು ಮೇಲೆ ಹತ್ಯೆಯಾದಾಗ ಅಪರಾಧಿಗಳನ್ನು ಬಿಡುಗಡೆ ಗೊಳಿಸಿ ಸನ್ಮಾನಿಸಿ ಸಿಹಿ ತಿನ್ನಿಸಿ ಸ್ವಾಗತ ಮಾಡುತ್ತಾರೆ ಎಂದರೆ. ಎತ್ತ ಕಡೆ ದೇಶ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಹಿಳೆಯರ ಬಟ್ಟೆ , ಉಡುಪು ತೋಡುಪು ,ಊಟ ಆಚಾರ ವಿಚಾರ ಬಗ್ಗೆ ಮಾತನಾಡುತ್ತಾರೆ. ಮಹಿಳೆ ಬಟ್ಟೆ ಮುಚ್ಚಿದರು ಸಮಸ್ಯೆ, ಬಿಚ್ಚಿದರು ಒಂದು ಸಮಸ್ಯೆ, ಮುಚ್ಚಬೇಕಾ ಬಿಚ್ಚಬೇಕಾ ಎಂದು ಪ್ರಶ್ನಿಸಿದರು .ಈ ವೇಳೆ ಎಸ್.ಎಫ್.ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷ ಕೆ.ಎಸ್ ಲಕ್ಷ್ಮೀ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ರಾಜ್ಯ ಉಪಾಧ್ಯಕ್ಷ ದಾವಲ್.ಸಾಬ್.ನದಾಫ್, ವರಲಕ್ಷ್ಮೀ ವೈದ್ಯರಾದ ಸಾಜಿದಾ, ವಸಂತ ಕುಮಾರ್, ಕುಟ್ಟಿಮ್ಮ, ಪೆಂಚಲಮ್ಮ, ಅಲ್ಲಾಬಕ್ಷ, ಚಂದ್ರಶೇಖರ್, ಚನ್ನಬಸವ, ನಜೀರ್, ದಾವುದ್, ರಿಯಾಜ್, ವಿನಾಯಕ ವಿದ್ಯಾ ಸಂಸ್ಥೆ ಪ್ರಾಂಶುಪಾಲರು ನರಸಪ್ಪ ಯಾದವ್, ಕಟ್ಟಡ ಕಾರ್ಮಿಕ ಮುಖಂಡ ನಿಂಗಪ್ಪ ಎಮ್, ವಿನಯ, ಆನೀಫ್, ಮೌನೇಶ್ ತೊಪ್ಪಲದೊಡ್ಡಿ.ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಹ ಸಂಚಾಲಕ ಲಾಲಪೀರ್ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ. ಇಲಕಲ್ಲ.