ನೂಲಿ ಚಂದಯ್ಯ ಅವರು ಶ್ರೇಷ್ಠ ಕಾಯಕ ಜೀವಿ.
ದೇವದುರ್ಗ ಆ.22

ನುಡಿದಂತೆ ನಡೆದ ನೂಲಿ ಚಂದಯ್ಯ ಅವರು ಶ್ರೇಷ್ಠ ಕಾಯಕ ಜೀವಿ. ಇವರ ಜೀವನಾದರ್ಶಗಳನ್ನು ನಮ್ಮ ಬದುಕಲ್ಲಿ ಪಾಲಿಸಬೇಕು ಎಂದು ಶಿಕ್ಷಕರಾದ ರವಿ ಎಸ್ ಚುಕನಟ್ಟಿ ರವರು ಹೇಳಿದರು.ತಾಲೂಕಿನ ಜಾಲಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಯಕ ಯೋಗಿ ಶಿವ ಶರಣ ನೂಲಿ ಚಂದಯ್ಯನವರ ದಿನಾಚರಣೆ ಕಾರ್ಯಕ್ರಮ ಮಾತನಾಡಿನೂಲಿ ಚಂದಯ್ಯ ಅವರ 48 ವಚನಗಳು ಸಿಕ್ಕಿವೆ. ಇವರ ವಚನಗಳಲ್ಲಿ ಸಮ ಸಮಾಜ ನಿರ್ಮಾಣದ ತಾತ್ವಿಕ ಚಿಂತನೆಗಳು ಅಡಗಿವೆ. ಕಾಯಕದಿಂದಲೇ ದೇವರನ್ನು ಕಂಡ ಈ ಮಹಾನ್ ಶರಣರ ಬದುಕು ನಮಗೆ ಆದರ್ಶವಾಗಬೇಕು ಎಂದರು.ಈ ವೇಳೆ,ಮುಖ್ಯ ಗುರುಗಳಾದ ಶಿವಪುತ್ರಪ್ಪ ಜಾಲಹಳ್ಳಿ ರವಿ ಎಸ್ ಚುಕನಟ್ಟಿ ವಿಜಯಲಕ್ಷ್ಮಿ ಸೇರಿದಂತೆ ಇನ್ನುಳಿದ ಶಿಕ್ಷಕ ವೃಂದ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.