ಕ್ಷೌರಿಕ ನಿಂದ ಕೊಲೆಗೀಡಾದ ದಲಿತ ವ್ಯಕ್ತಿ ಯಮನೂರಪ್ಪ ಈರಪ್ಪ ಬಂಡಿಹಾಳ ಕುಟುಂಬಕ್ಕೆ ಪರಿಹಾರ ನೀಡುವ ಹಾಗೂ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಕುರಿತು ಖಂಡಿಸಿ – ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ.
ಮುದ್ದೇಬಿಹಾಳ ಆ.23

ಭೀಮ್ ಆರ್ಮಿ ಕರ್ನಾಟಕ ಎಕ್ತಾ ಮಿಷನ್ ಸದಸ್ಯರು ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಸಲ್ಲಿಸಿದರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಗನಾಳದಲ್ಲಿ ಕ್ಷೌರ ಮಾಡಿಸಿ ಕೊಳ್ಳಲು ಹೋಗಿದ್ದ ದಲಿತ ಜನಾಂಗದ ಅಮಾಯಕ ವ್ಯಕ್ತಿ ಯಮನೂರಪ್ಪ ಈರಪ್ಪ ಬಂಡಿಹಾಳ ಅವರನ್ನು ಕ್ಷೌರಿಕ ಮುದಕಪ್ಪ ಅಂದಪ್ಪ ಹಡಪದ ಎಂಬಾತ ಕತ್ತರಿಯಿಂದ ಇರಿದು ಕೊಲೆ ಗೈದಿದ್ದಾನೆ.ಬಸವಣ್ಣನವರ ಆಪ್ತ ಕಾರ್ಯದರ್ಶಿಗಳ ಕುಲದಲ್ಲಿ ಹುಟ್ಟಿದ ಮುದಕಪ್ಪ ಹಡಪದ ಇಂತಹ ಅಮಾನವೀಯವಾಗಿ ವರ್ತಿಸಿರುವುದು ನಿಜಕ್ಕೂ ಆಘಾತಕಾರಿಯಾದ ಸಂಗತಿಯಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಯತೆಯನ್ನು ಇನ್ನೂ ಜೀವಂತ ವಾಗಿರಿಸುವಲ್ಲಿ ಇಂತಹ ಘಟನೆಗಳು ಸಾಕ್ಷಿಯಾಗುತ್ತಿವೆ.ದಲಿತ ಎನ್ನುವ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಣೆ ಮಾಡುವ ಅತ್ಯಂತ ಹೇಯ ಮನಸ್ಥಿತಿ ಅವರಲ್ಲಿ ಬಂದಿರುವುದು ತೀವ್ರ ಕಳವಳ ಕಾರಿಯಾದದ್ದು. ಕ್ಷೌರ ಮಾಡಿಸಿ ಕೊಳ್ಳಲು ಹೋಗಿ ಜೀವ ತೆತ್ತಿರುವ ದಲಿತ ವ್ಯಕ್ತಿ ಯಮನೂರಪ್ಪ ಬಂಡಿಹಾಳ ಕುಟುಂಬ ಈಗ ಕಣ್ಣೀರಲ್ಲಿ ಕೈ ತೊಳೆಯು ವಂತಾಗಿದೆ.

ರಾಜ್ಯ ಸರ್ಕಾರ ದಿಂದ ಸಾವನ್ನಪ್ಪಿರುವ ವ್ಯಕ್ತಿ ಬಂಡಿಹಾಳ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಬೇಕು. ಆರೋಪಿ ಮುದಕಪ್ಪ ಹಡಪದ ಮೇಲೆ ಜಾತಿ ನಿಂದನೆ ಹಾಗೂ ಅಸ್ಪೃಶ್ಯತೆ ಆಚರಣೆ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರ ಬಯಸುತ್ತೇವೆ. ಎಂದು ಮನವಿ ಸಲ್ಲಿಸಿದರು . ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಉಪಾಧ್ಯಕ್ಷರು ಕಯ್ಯುಮ್ ಚೌದರಿ , ಅರುಣ್ ಕುಮಾರ್, ಆರ್ಮಿ ತಾಲೂಕ ಅಧ್ಯಕ್ಷರು ಸಂಗಮೇಶ ವಡ್ಡರ ತಾಲೂಕು ಉಪಾಧ್ಯಕ್ಷರು ವಿರೇಶ್ ವಡ್ಡರ ಸಂಚಾಲಕರು ಸದ್ಯಸರು ಎಂ ಎಸ್ ಛಲವಾದಿ ಎಂ ಎಚ್ ಛಲವಾದಿ ಪ್ರಶಾಂತ್ ಛಲವಾದಿ ಮತಿತರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ