“ಭಾಷೆಗಳ ಸುಮನ ಭಾವ ಕನ್ನಡ ಚೆನ್ನುಡಿ”…..

ಜನನದಿ ಅಳುವೇ ಪ್ರಥಮ ನುಡಿ
ಬಾಲ್ಯದಿ ತೊದಲು ಮಾತೃ ನುಡಿ
ಹಿರಿ ಆಸೆ ನುಡಿ ಜೀವನಸಿರಿ
ತಂದೆ ಕೋಪದಿ ಗದರಿಸುವ ನುಡಿ ಬಾಳು
ಬೆಳಕ ಸಿರಿ ನುಡಿ
ಸ್ನೇಹ ಬಾಂಧವರ ಸವಿ ನುಡಿ
ಎರವಲು ನುಡಿ ಕಿವಿಗೆ ಹಿತನುಡಿ
ದ್ವೇಷ ರೋಸ ಕಿಚ್ಚು ಚುಚ್ಚುವ ನುಡಿ
ಅನುಭವ ಅಮೃತ ಸವಿ ನುಡಿ
ಖುಷಿ ಹಂಚುವ ನುಡಿ ಮುತ್ತು ರತ್ನ
ಮಗು ಮುಖ ಭಾವದಿ ತೋರುವ ನಗು
ಆನಂದದ ಶ್ರೇಷ್ಠ ನುಡಿ
ಸುಮನದಿ ಭಾವ ಹರುಷ ನುಡಿ
ಹಾಲು ಜೇನು ಸವಿನುಡಿ ಭಾಷೆಗಳ ಸುಮನ
ಭಾವ ಕನ್ನಡ ಚೆನ್ನುಡಿ
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ವಿಶ್ವ ಆರೋಗ್ಯ ಸಂಜೀವಿನಿ
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ.