ಮಾನಸಿಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಸಲಹೆ ಅಗತ್ಯ – ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ.
ಗುಂಡನಪಲ್ಲೆ ಆ.28

ಬೆನಕಟ್ಟಿ ಗುಂಡನಪಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹ ಯೋಗದಲ್ಲಿ ಉಪಕೇಂದ್ರ ಬೆನಕಟ್ಟಿ ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದಲ್ಲಿ,”ಮಾನಸಿಕ ಕಾಯಿಲೆಗಳ ನಿವಾರಣೆಗೆ ಆರೋಗ್ಯ ಅರಿವು ಜನ ಜಾಗೃತಿ” ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಎಲ್ಲರಿಗೂ ಮಾನಸಿಕ ಆರೋಗ್ಯ, ಎಲ್ಲೆಡೆಯೂ ಮಾನಸಿಕ ಆರೋಗ್ಯ ಎಂಬ ಘೋಷಣೆಯೊಂದಿಗೆ, ಆತಂಕ, ಚಿತ್ತ ಚಂಚಲತೆ ಖಿನ್ನತೆ ಬುದ್ಧಿ ಮಾಂದ್ಯತೆ ನಿರ್ಲಕ್ಷ್ಯ ಬೇಡ, ಮೂಢ ನಂಬಿಕೆ ನಂಬಬೇಡಿ, ಮಾನಸಿಕ ಕಾಯಿಲೆಗಳಿಗೆ ವೈಜ್ಞಾನಿಕ ಮಾಹಿತಿ ಚಿಕಿತ್ಸೆ ಸೌಲಭ್ಯಗಳಿವೆ. ಮೂಢ ನಂಬಿಕೆ ,ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಮಾನವ ವಿವಿಧ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಮಾನಸಿಕ ಕಾಯಿಲೆ ಯಾರಿಗೆ ಬೇಕಾದರೂ ಬರಬಹುದು, ಭಯ ಬೇಡ ಎಚ್ಚರಿಕೆ ಇರಲಿ. ಆತಂಕ, ಸ್ಕಿಜೋಫ್ರೀನಿಯಾ,ಮಧ್ಯಪಾನ, ಮೇನಿಯಾ, ಮೂರ್ಛೆ, ಆತ್ಮಹತ್ಯೆ, ಗೀಳು ರೋಗ, ಖಿನ್ನತೆ, ಬುದ್ಧಿ ಮಾಂದ್ಯತೆ, ಮೂರ್ಛೆ ಬೀಳುವುದು, ಅತಿಸಂಶಯ, ಅತಿ ದುಃಖ ಅತೀ ಸಂತೋಷ / ಜಂಭ ಕೊಚ್ಚವುದು, ಬೇರೆಯವರಿಗೆ ಕಾಣಿಸದ ಕೇಳಿಸದ ದೃಶ್ಯ ಧ್ವನಿ ಕಾಣಿಸುವುದು, ಮುಂದಾಗುವುದು ವಿಚಿತ್ರ ವರ್ತನೆ, ಆತ್ಮ ಹತ್ಯೆಯ ಆಲೋಚನೆ ರೋಗ ಲಕ್ಷಣಗಳ ಅನುಸಾರ ವಿಶೇಷ ಮನೋತಜ್ಞ ವೈದ್ಯರ ಸಲಹೆ ಚಿಕಿತ್ಸೆ ಅಗತ್ಯವಿರುತ್ತದೆ ಮದ್ಯಪಾನ ಧೂಮಪಾನ ದುಶ್ಚಟಗಳು ಸೇರಿ ಮಾನವನನ್ನು ನರಕ ಕೂಪಕ್ಕೆ ತಳ್ಳುತ್ತವೆ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಘನ ಸರ್ಕಾರ ಜಿಲ್ಲಾ ಆಸ್ಪತ್ರೆಯಲ್ಲಿ ಮನೋತಜ್ಞ ವೈದ್ಯರ ಸಲಹೆ ಚಿಕಿತ್ಸೆ ಉಚಿತವಾಗಿರುತ್ತದೆ. ಮಾನಸಿಕ ಕಾಯಿಲೆಗಳಿಂದ ಬಳಲುವ ವ್ಯಕ್ತಿಯನ್ನು ಕುಟುಂಬ ಸದಸ್ಯರು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ ಸೌಲಭ್ಯ ಸದುಪಯೋಗ ಪಡೆದು ಕೊಳ್ಳಬೇಕು.104 ಟೋಲ್ ಪ್ರೀ ನಂಬರಿಗೆ ಕರೆ ಮಾಡಿ ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಸಲಹೆ ಸೂಚನೆ ನಡೆಯಬೇಕು. ಮಾನಸಿಕ ಆರೋಗ್ಯ ಸ್ವಾಸ್ಥ್ಯ ಸಮಾಜ ಕಟ್ಟೋಣ ಎಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಮಾನಸಿಕ ಆರೋಗ್ಯ ಕಾಯಿಲೆಗಳ ಆರೋಗ್ಯ ಅರಿವು ಜನ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳು, ಗ್ರಾಮದ ಹಸನಪ್ಪ ಮೇಲಿನಮನಿ, ಬಸಪ್ಪ ಮಾದರ, ಗದಿಗೆಪ್ಪ ಮಾದರ, ಶಿವಪ್ಪ ಮಾದರ ಗ್ರಾಮದ ಮುಖಂಡರು ಯುವಕರು ಭಾಗವಹಿಸಿದ್ದರು.