ಕೇಂದ್ರ ಸ್ಥಾನದಲ್ಲಿರದ ಡಮ್ಮಿ ಸಮಾಜ ಕಲ್ಯಾಣ ಇಲಾಖೆ – ಅಧಿಕಾರಿ ನಟರಾಜ.
ಮಾನ್ವಿ ಜ.23

ತಾಲೂಕ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರ ಬೇಕು ಎಂದು ಸರಕಾರ ಸೂಚನೆ ಹೊರಡಿಸಿದ್ದರು. ಸಹ ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ನಟರಾಜ ಕೇಂದ್ರ ಸ್ಥಾನದಲ್ಲಿರದೆ ಇರುವುದು ಬೆಳಕಿಗೆ ಬಂದಿದೆ.
ಮಾನ್ವಿಯಲ್ಲಿ ಹಾಸ್ಟೇಲ್ ಸಮಸ್ಯೆಗಳು ಸಾಕಷ್ಟಿವೆ. ಆದರೆ ಸಮಾಜ ಕಲ್ಯಾಣ ತಾಲೂಕ ಅಧಿಕಾರಿ ಅದ್ಯಾವಾಗ ಬರುತ್ತಾರೆಂದು ತಿಳಿಯದಾಗಿದೆ. ಸರಕಾರದ ಸಂಬಳ ನಟರಾಜ ತಿನ್ನುತ್ತಿದ್ದರು ಅದರ ಪ್ರಕಾರವಾಗಿ ಸೇವೆ ಮಾಡದೆ ಒಂದು ರೀತಿಯಲ್ಲಿ ಸರಕಾರಕ್ಕೆ ಮೋಸ ಮಾಡಿ ಈತ ಯಾವಾಗ ಸಹಿ ಮಾಡಿದ್ದಾನೆಂದು ಬಯೋಮೆಟ್ರಿಕ್ ಹಾಜರಾತಿ ಯಿಂದಲೇ ಬ್ರಹ್ಮಾಂಡ ಬಯಲಾಗೋದು ಸತ್ಯ.ಸರಕಾರದ ಕಾರು ಕೆಲಸಕ್ಕಾಗಿ ಬಳಸಬೇಕು. ಆದರೆ ನಟರಾಜ ಎಂಬ ಪೆಡಂಬೂತ ನಾನು ತಾಲೂಕ ಅಧಿಕಾರಿ ಇದ್ದೇನೆ ಯಾವಾಗಾದರು ಬರುತ್ತೇನೆ ಮತ್ತು ಯಾವಾಗಾದರು ಹೋಗುತ್ತೇನೆಂದು ಒಂದು ರೀತಿಯಲ್ಲಿ ಗೂಂಡಾ ವರ್ತನೆ ಮಾಡುವ ಚಾಳಿ ಈತನಲ್ಲಿದೆ. ಸರಕಾರದ ಕಾರು ತೆಗೆದುಕೊಂಡು ನಿತ್ಯ ಮಸ್ಕಿಗೆ ತೆಗೆದುಕೊಂಡು ಹೋಗುತ್ತಾನೆ.
ಸರಕಾರದ ಕಾರು ಬಾಡಿಗೆ ಪಡೆದಾಗ ಕೆಲಸ ಮುಗಿದ ನಂತರ ಮಾನ್ವಿಯಲ್ಲಿ ಬಿಡಬೇಕು. ಆದರೆ ನಟರಾಜ ನಾನು ಕಾರು ತೆಗೆದುಕೊಂಡು ಹೋಗುತ್ತೇನೆ ಸರಕಾರದ ಕಾರು ನಾನು ಅಧಿಕಾರಿಯಾಗಿ ಬಳಕೆ ಮಾಡುತ್ತೇನೆ, ಸರಕಾರಕ್ಕೆ ಏನಾದರು ಲೆಕ್ಕ ಕೊಡುತ್ತೇನೆಂದು ಈತನ ಚಾಳಿಯಾಗಿದೆ. ಸರಕಾರದ ಅಧಿಕಾರಿ ನಟರಾಜ ಹತ್ತಿರದ ಹಾಸ್ಟೇಲ್ ವಿದ್ಯಾರ್ಥಿಗಳು ನಮ್ಮ ಸಮಸ್ಯೆ ಈಡೇರಿಸಿ ಎಂದು ನಿತ್ಯ ಕಚೇರಿಗೆ ಅಲೆದರು ಈತನಿಗೆ ಅದ್ಯಾವುದು ಲೆಕ್ಕಕ್ಕಿಲ್ಲವಾಗಿದೆ ಎಂದು ಹೋರಾಟಗಾರರ ಆರೋಪವಾಗಿದೆ.
ಕೋಟ್:- ಮಾನ್ವಿ ಸಮಾಜ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ನಟರಾಜು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ.ಹಾಗೆಯೇ ಇವರು ಯಾವಾಗ ಬರುತ್ತಾರೆಂದು ತಿಳಿಯದಾಗಿದೆ. ರಾಯಚೂರು ಜಿಲ್ಲಾಧಿಕಾರಿ ಅವರು ಇಂತಹ ಅಧಿಕಾರಿ ನಟರಾಜ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬುದು ನಮ್ಮ ಒತ್ತಾಯ.
-ಹುಸೇನಪ್ಪ ಆಲ್ದಾಳ್, ದಲಿತ ಸಂಘರ್ಷ ಸಮಿತಿ ಮುಖಂಡರು ಮಾನ್ವಿ.
ಕೋಟ್:- ಸರಕಾರದ ನಿಯಮಗಳನ್ನೇ ಗಾಳಿಗೆ ತೂರಿ ಕೇಂದ್ರ ಸ್ಥಾನದಲ್ಲಿರದೆ ಸರ್ವಾಧಿಕಾರಿಯಂತೆ ಮಾನ್ವಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ ವರ್ತನೆ ತೋರುತ್ತನೆ. ಯಾರಾದರು ದೂರು ಕೊಟ್ಟರೆ ಗೂಂಡಾವರ್ತನೆ ತೋರುತ್ತಾನೆ. ಇಂತಹ ಅಧಿಕಾರಿ ವಿರುದ್ಧ ಸರಕಾರ ಕ್ರಮ ಜರುಗಿಸಬೇಕು.
-ಶಿವರಾಜ ಡೋಣಮರಡಿ, ದಲಿತ ಮುಖಂಡರು ಮಾನ್ವಿ.
ಕೋಟ್:- ಮಾನ್ವಿ ಸಮಾಜ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ನಟರಾಜ ಅವರು ಕೇಂದ್ರ ಸ್ಥಾನದಲ್ಲಿರದೆ ಸರಕಾರದ ಕಾರು ಸ್ವಂತಕ್ಕೆ ಬಳಕೆ ಮಾಡಿ ಕೊಂಡಿದ್ದರೆ ಪರಿಶೀಲನೆ ಮಾಡಿ ಕ್ರಮ ಜರುಗಿಸುತ್ತೇನೆ.
ಚಿದಾನಂದ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ರಾಯಚೂರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ