ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯ ಕರ್ತೆಯರಿಂದ ಪ್ರತಿಭಟನೆ.
ಹುನಗುಂದ ಡಿಸೆಂಬರ್. 20

ಕೇಂದ್ರ ಸರ್ಕಾರ ದುಡಿಯುವ ಮತ್ತು ಕೆಳ ವರ್ಗದ ಜನರಿಗೆ ಅಚ್ಚೆ ದಿನ ಆಯೇಗಾ ಬರುತ್ತದೆ ನಾವು ತಂದೇ ತರುತ್ತೇವೆ ಎಂದು ಹೇಳಿ ಅಧಿಕಾರವನ್ನು ಪಡೆದು ಸಧ್ಯ ದುಡಿಯುವ ವರ್ಗದ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ತಳುತ್ತಿದ್ದು ಮತ್ತು ಆರೋಗ್ಯ ಇಲಾಖೆಯಲ್ಲಿ ಪ್ರಮಾಣೀಕ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯ ಕರ್ತೆಯರ ಬಹು ದಿನಗಳ ವಿವಿಧ ಬೇಡಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯುನಿಯನ್ ಸೆಂಟರ್ ತಾಲೂಕ ಘಟಕದಿಂದ ಪ್ರತಿಭಟನೆ ನಡೆಸಿ ತಃಸೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿತು. ಈ ವೇಳೆ ಆಶಾ ಕಾರ್ಯ ಕರ್ತೆಯರ ಜಿಲ್ಲಾ ಕಾರ್ಯದರ್ಶಿ ಶೈನಜಾ ಜಂಗಿ ಮಾತನಾಡಿ ಜೀವನದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವ ಸಾಮಾನ್ಯ ಜನರ ಬದುಕೆ ಕತ್ತಲಾಗಿದೆ.ಬಡವರ ಹಕ್ಕು ಮಾಯವಾಗುತ್ತಿವೆ.ದಿನೆ ದಿನೇ ಖಾಯಂ ಉದ್ಯೋಗಗಳು ಕಡಿತ ಗೊಳ್ಳಿತ್ತಿವೆ.ಬಹುತೇಕ ಉದ್ಯೋಗಗಳು ಖಾಸಗೀಕರಣ ಗೊಳ್ಳುತ್ತಿವೆ.ಸಿಗುವ ವೇತನ ಜೀವನ ವೆಚ್ಚಕ್ಕೆ ಸಾಕಾಗುತ್ತಿಲ್ಲ.ವಿದ್ಯುತ್ ಪ್ರೀಪೇಯ್ಡ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ನಿಲ್ಲಿಸಬೇಕು,ಎಲ್ಲಾ ಪಿಂಚಣ ದಾರರಿಗೆ ಬೆಲೆ ಸೂಚ್ಯಂಕದ ಮೇಲೆ ಪಿಂಚಣೆ ನಿಗಧಿ ಗೊಳಿಸಬೇಕು ಮತ್ತು ಕನಿಷ್ಠ ೧೦ ಸಾವಿರ ಪಿಂಚಣೆಯನ್ನು ನೀಡಬೇಕು,ಪಿಂಚಣೆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಅಳವಡಿಸುವುದ್ದನ್ನು ನಿಲ್ಲಿಸಬೇಕು, ರಾಷ್ಟ್ರೀಯ ಕನಿಷ್ಠ ವೇತನ ೨೦ ಸಾವಿರ ನೀಡಬೇಕು,ಎಲ್ಪಿಜಿ ಸಿಲೇಂಡರ್ ಬೆಲೆಯ ಏರಿಕೆಯನ್ನು ನಿಲ್ಲಿಸಬೇಕು,ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಎಲ್ಲ ಕಾರ್ಮಿಕರನ್ನು ಖಾಯಂ ಗೊಳಿಸಬೇಕು,ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸುವ ಮೂಲಕ ದೇಶದ ಅಪಾರ ಸಂಪತ್ತನ್ನು ಸೃಷ್ಟಿಸುವ ಬೃಹತ್ ಉದ್ದಿಮೆಗಳನ್ನು ಖಾಸಗೀಕರಣ ಗೊಳಿಸುವುದನ್ನು ನಿಲ್ಲಿಸಬೇಕು ಎಂದರು. ತಾಲೂಕ ಅಧ್ಯಕ್ಷೆ ಅಂಬಿಕಾ ಡೊಳ್ಳಿನ ಮಾತನಾಡಿ.ಎಲ್ಲರಿಗೂ ಆಹಾರ,ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಕಾನೂನು ಜಾರಿಗೊಳಿಸಿ,ತೋಟದ ಕಾರ್ಮಿಕರಿಗೆ ಕನಿಷ್ಠ ವೇತನ ಸಾಮಾಜಿಕ ಭದ್ರತೆ ಸೌಲಭ್ಯ ಒದಗಿಸಿ,ಅಸಂಘಟಿತ ಕಾರ್ಮಿಕರ ಸೇರಿದಂತೆ ಎಲ್ಲಾ ಬಗೆಯ ಕಾರ್ಮಿಕರಿಗೆ ವಿಮಾ ರಕ್ಷಣೆ ಮತ್ತು ಇಎಸ್‌ಐ ಪಿಎಫ್ ಸೌಲಭ್ಯವನ್ನು ಒದಗಿಸ ಬೇಕೆಂದು ಆಗ್ರಹಿಸಿದರು. ಗೌರಿ ಸಾನು ಮಾತನಾಡಿ ವಿವಿಧ ಬಗೆಯ ೨೪ ಬೇಡಿಕೆಗಳನ್ನು ಇಡೇರಿಸುವಂತೆ ಹಕ್ಕೊತ್ತಾಯ ದೊಂದಿಗೆ ತಹಶೀಲ್ದಾರ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಈ ಬೇಡಿಕೆಗಳನ್ನು ಇಡೇರಿಸಲೇಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಂಗಮ್ಮ ಕುಂಟೋಜಿ, ಪ್ರೇಮಾ ಗಾಣಗೇರ, ಸೈರಾಬಾನು ತೆಗ್ಗಿನಮನಿ, ಮಾಲಾ ಕಳಸಾಮಠ, ಯೋಗವ್ವ ನಾಯಕ, ರೇಣುಕಾ ಹಡಪದ ಸೇರಿದಂತೆ ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ