ನೂತನ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳು – ಅಧಿಕಾರ ಸ್ವೀಕಾರ.
ಮಸ್ಕಿ ಆ.30

ತಾಲೂಕಾ ಪಂಚಾಯತಿಯ ನೂತನ ಕಾರ್ಯ ನಿರ್ವಾಹಕ ಅಧಿಕಾರಿಗಳಾಗಿ ಅಮರೇಶ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ನಂತರ ದಲಿತ ಮುಖಂಡರಾದ ರಮೇಶ್ ಉಸ್ಕಿಹಾಳ, ಖಾಸಿಂ ಮುರಾರಿ ಮಸ್ಕಿ ಇವರು ಹೂವಿನ ಹಾರ ಶಾಲು ಹಾಕಿ ಸನ್ಮಾನಿಸುವ ಮೂಲಕ ಬರ ಮಾಡಿ ಕೊಂಡರು.ಈ ವೇಳೆ ಸಹಾಯಕ ನಿರ್ದೇಶಕರಾದ ಶಿವಾನಂದ ರೆಡ್ಡಿ, ಸೋಮನಗೌಡ ಪಾಟೀಲ್, ತಾಪಂ ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ, ಸಿಬ್ಬಂದಿಗಳಾದ ಚಂದ್ರಶೇಖರ್, ಬಸವರಾಜ್, ಗಿರಿಯಪ್ಪ, ದುರುಗಪ್ಪ ಯಾದವ್, ಲಕ್ಷ್ಮಣ, ತಾಂತ್ರಿಕ ಸಂಯೋಜಕರಾದ ಅಶೋಕ್, ಟಿಎಂಐಎಸ್ ಮಹ್ಮದ್ ಯಾಸೀನ್, ಎನ್‌ಆರ್‌ಎಲ್‌ಎಂ ತಾಲೂಕು ಮೇಲ್ವಿಚಾರಕರಾದ ಮೌನೇಶ್, ವಲಯ ಮೇಲ್ವಿಚಾರಕರಾದ ಪ್ರಕಾಶ್ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.