ಶರಣ ಸಂಸ್ಕೃತಿ ಮಹೋತ್ಸವ ನಿಮಿತ್ತ ನಾಟಕಗಳ ಪ್ರದರ್ಶನ.
ಇಲಕಲ್ಲ ಆ.31

ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದ ನಿಮಿತ್ಯ ರಂಗ ಶ್ರಾವಣ ನಾಟಕಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕಲಿಯುಗದ ಕುಡುಕ ರಾಜು ತಾಳಿಕೋಟಿ ಅವರು ಸುವರ್ಣ ರಂಗ ಮಂದಿರದಲ್ಲಿ ಕರೆದ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡುತ್ತಾ ಅವರು ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಶರಣ ಸಾಂಸ್ಕ್ರತಿಕ ಮಹೋತ್ಸವದ ನಿಮಿತ್ಯ ದಿ ೨ ಮತ್ತು ೩ ರಂದು ರಕ್ತರಾತ್ರಿ, ವೀರ ಸಿಂಸಧೂರ ಲಕ್ಷ್ಮಣ, ಹತಾರ ಮೂರು ನಾಟಕಗಳ ಪ್ರದರ್ಶನ ನಡೆಯುವ ಸ್ಥಳ ಇಳಕಲ್ಲ ನಗರದ ಬಸವಣ್ಣ ದೇವಸ್ಥಾನ ಮೇನ ಬಜಾರದಲ್ಲಿ ಹಮ್ಮಿ ಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಹಾಗೂ ರಂಗಾಯಣ ಧಾರವಾಡ ಅವರ ಸಹಕಾರ ದೊಂದಿಗೆ, ಸಚಿವ ಶಿವರಾಜ ತಂಗಡಿಯವರ ಆಶೆಯದಂತೆ ಮೂರು ನಾಟಕಗಳು ಪ್ರದರ್ಶನ ಗೊಳ್ಳಲಿವೆ, ಪೂಜ್ಯ ಶ್ರೀ ಮ.ನಿ.ಪ್ರ ಗುರು ಮಹಾಂತ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ,ಉದ್ಘಾಟಕರಾಗಿ ಶಿವರಾಜ ತಂಗಡಗಿ ಹಿಂದುಳಿದ ವರ್ಗ ಕಲ್ಯಾಣ ಹಾಗೂ ಕನ್ನಡ ಸಾಂಸ್ಕ್ರುತಿಕ ಸಚಿವರು,ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರು ಶಾಸಕ ವಿಜಯಾನಂದ ಎಸ್.ಕಾಶಪ್ಪನವರು ಅಧ್ಯಕ್ಷತೆಯಲ್ಲಿ ನೆರವೆರಲಿದೆ.ಸಾರ್ವಜನಿಕರು ರತ್ತರಾತ್ರಿ, ಸಿಂಧೂರ ಲಕ್ಷ್ಮಣ ನಾಟಕ ನೋಡಲು ಮರೆಯದಿರಿ, ವೃತ್ತಿರಂಗ ಭೂಮಿ, ಹವ್ಯಾಸಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ಎಂದು ಡಾ, ರಾಜು ತಾಳಿಕೋಟಿ ನಿರ್ದೇಕರು ರಂಗಾಯಣ ಧಾರವಾಡ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಹಾಂತೇಶ ಗಜೇಂದ್ರಗಡ, ಉಮಾರಾಣಿ ಭಾರಿಗಿಡದ, ಹಫೀಜಾ ಬೇಗಂ, ವಿಶ್ವನಾಥ ಪಟೀಲ, ಮಂಜುನಾಥ ಬೆಳವಣಿಕೆ, ಪರತಗೌಡ ಪಟ್ಟಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.