ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸೇವೆಯಿಂದ ನಿವೃತ್ತಿ ಹೊಂದಿದ – ಶ್ರೀ ಮತಿ ಮಂಗಲ ಎಂ. ಪಾಟೀಲ.
ಮದಭಾವಿ ಸ.01

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕದ ಕ್ಲಾರ್ಕ್ ಶ್ರೀಮತಿ ಮಂಗಲ ಮಲಗೌಡ ಪಾಟೀಲ ಅವರು ಖಿಳೆಗಾವಿ, ಅಥಣಿ, ಮೋಳೆ, ಮದಭಾವಿ ಗ್ರಾಮಗಳಲ್ಲಿ ತಮ್ಮ ಅನುಪಮ ಸೇವೆಯನ್ನು ಪ್ರಾಮಾಣಿಕವಾಗಿ ಗ್ರಾಹಕರ ಜೊತೆ 30 ವರ್ಷ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ಪಂಚಮ ಸಾಲಿ ಸಮಾಜದ, ಕೆ.ವಿ.ಜಿ ಬ್ಯಾಂಕಿನ ಸಿಬ್ಬಂದಿ, ಹರಳಯ ಸಮಾಜ, ಮಹಿಳಾ ಸ್ವಸಹಾಯ ಸಂಘ, ಶ್ರೀ ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನಿಸಿ ಮಾತನಾಡಿದ ಮುಖಂಡರಾದ ಪ್ರವೀಣ ನಾಯಿಕ ಇವತ್ತಿನ ದಿನ ಮಾನದಲ್ಲಿ ಸರಕಾರ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಅದರಂತೆ ಶ್ರೀಮತಿ ಮಂಗಲ ಪಾಟೀಲ ಅವರು ಕೆ.ವಿ.ಜಿ ಬ್ಯಾಂಕಿನಲ್ಲಿ ಕ್ಲಾರ್ಕ್ ಆಗಿ ಕಾರ್ಯ ನಿರ್ವಹಿಸಿ ಸರಕಾರಿ ಸೇವೆಯಿಂದ ನಿವೃತ್ತಿ ಆಗಿರಬಹುದು ಆದರೆ ತಾವು ತಮ್ಮ ಕರ್ತವ್ಯ ಸಮಯದಲ್ಲಿ ಗ್ರಾಹಕರಿಗೆ ಸ್ಪಂದನೆ ನೀಡಿದ್ದೀರಿ ನಿಮ್ಮ ಹೆಸರು ಜನರ ಮನಸ್ಸಿನಲ್ಲಿ ನಿವೃತ್ತಿ ಗೊಂಡಿಲ್ಲ ಶಾಶ್ವತ ವಾಗಿರುತ್ತದೆ ಎಂದು ಹೇಳಿದರು.ಬ್ಯಾಂಕಿನ ಮ್ಯಾನೇಜರ ರಾದ ಜಯಲೆಂದ್ರಸಿಂಗ ರಾಠೋಡ ಅಭಿನಂದಿಸಿ ಬೀಳ್ಕೊಟ್ಟರು ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ನಾಯಿಕ, ಉಮೇಶ ಪಾಟೀಲ, ಸಿದರಾಯ ತೋಡಕರ, ಗ್ರಾಮ ಪಂಚಾಯತ ಸದಸ್ಯ ಸಂಜಯ ಅದಾಟೆ, ಭೀಮಗೌಡಾ ನಾಯಿಕ, ಪರಗೊಂಡ ಮುದೋಳ, ಸಿದ್ದು ಪಾಟೀಲ, ಮಹೇಶ ಪಾಟೀಲ, ರಾಕೇಶ ಪಾಟೀಲ, ಜ್ಯೋತಿಬಾ ಚೌಧರಿ, ಸಂತೋಷ ನಾಯಿಕ, ಶಂಕರ ನಾಯಿಕ, ಮನೋಹರ ಗುರವ,ಮುಕುಂದ ಮೋರೆ, ಅನೀಲ ಭಂಡಾರೆ, ಮಹಾದೇವ ಖಿಲಾರೆ, ಅರುಣ ಪಾಟೀಲ, ಗುಂಡು ಜೋಷಿ,ಆನಂದ ಪೂಜಾರಿ ಸೇರಿದಂತೆ ಎಲ್ಲಾ ಗ್ರಾಹಕರು, ಮಹಿಳೆಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಂ.ಎಂ.ಶರ್ಮಾ.ಬೆಳಗಾವಿ