ಪಟ್ಟಣ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಶಾಸಕರ ರಾಂಪುರದ ನಿವಾಸಕ್ಕೆ ಬಂದು ಅಭಿನಂದನೆ ಸಲ್ಲಿಸಿದರು.
ರಾಂಪುರ ಸ.02

ಇಂದು ರಾಂಪುರ ಶಾಸಕರ ನಿವಾಸದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್.ವೈ.ಗೋಪಾಲಕೃಷ್ಣ ರವರನ್ನು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮುಖಂಡರುಗಳು, ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿದರು. ಅಧ್ಯಕ್ಷರು ಉಪಾಧ್ಯಕ್ಷರು ಶಾಸಕರ ಮೇಲೆ ನಂಬಿಕೆ ಇಟ್ಟು ನಾಯಕನಹಟ್ಟಿ ಪಟ್ಟಣ ಪಂಚಾಯತಿ ಎಲ್ಲಾ ಜನ ಸಾಮಾನ್ಯರಿಗೆ ಬಡವರಿಗೆ ಯೋಜನೆಗಳು ಮತ್ತು ಮನೆಗಳು ಚರಂಡಿ ವ್ಯವಸ್ಥೆ ಸ್ವಚ್ಛತೆ ವ್ಯವಸ್ಥೆ ಯಾವುದೇ ರೀತಿಯಾಗಿ ಯಾರಿಗೂ ಅನ್ಯಾಯ ಆಗದಂತೆ ಶಾಸಕರ ನಡೆತದಂತೆ ನಾವು ಮುಂದುವರಿ ಯುತ್ತೇವೆ ಏಕೆಂದರೆ ಮೊಳಕಾಲ್ಮೂರು ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರು ಈ ಕ್ಷೇತ್ರಕ್ಕೆ ಸಿಕ್ಕಿರುವುದು ನಮ್ಮ ಪುಣ್ಯ ಕೇವಲ ಒಂದು ವರ್ಷದೊಳಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಕೋಟಿ ಲಕ್ಷಗಳಷ್ಟು ಯೋಜನೆಯ ಅಭಿವೃದ್ಧಿಗಳು ಮಾಡಿಸಿದ್ದಾರೆ. ನಾಯಕನಹಟ್ಟಿ ಸುತ್ತ ಮುತ್ತ ಗ್ರಾಮಗಳಿಗೆ ರಸ್ತೆಗಳು ಸೇತುವೆಗಳು ಸಂತೆ ಮಾರ್ಕೆಟ್ ಬಿಲ್ಡಿಂಗಗಳು ಇನ್ನೂ ಅನೇಕ ಕೆಲಸಗಳು ಶಾಸಕರು ಮಾಡಿಸಿದ್ದಾರೆ ಈ ಶಾಸಕರು ಬಡವರ ಆಶಾ ಕಿರಣ ಬಡವರ ಬಂಧು ದೀನ ದಲಿತರ ಬಂಧು ಕಾನೂನು ರೀತಿಯಾಗಿ ಕೆಲಸಗಳು ಮಾಡಿಸಿರುತ್ತಾರೆ ನಾವು ಯಾವತ್ತಿಗೂ ಅವರಿಗೆ ಚಿ ರಋಣಿಯಾಗಿರುತ್ತೇವೆ. ಎಂದು ಯಾವುದೇ ತಾರತಮ್ಯ ಭೇದ ಭಾವ ಮಾಡದೆ ಶಾಸಕರ ಜೊತೆಯಲ್ಲಿ ಸರ್ಕಾರದ ಯೋಜನೆಗಳು ರೂಪಿಸುತ್ತೇವೆ ಎಂದು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ನಾಯಕನ ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಹೊಂಬಾಳೆ.ಮೊಳಕಾಲ್ಮೂರು