“ಸುಖದ ಜೀವನ ಜಗದ ಬಾಳಿಗೆ ನೀನೇ ರೂವಾರಿ”…..

ನಗು ಮುಖ ಜಗದ ಸಿರಿ
ಚಿಕ್ಕ ಕೆಲಸದ ಕ್ಷಣ ಖುಷಿ ಸವಿ
ಅನಾವಶ್ಯಕ ವಿಚಾರ ಬೇಡ ಬೇರೆಯವರ
ಅಭಿಪ್ರಾಯ ಕೇಳಿ
ನಮ್ಮ ತನದ ಗುರುತರ ವಿರಲಿ
ನಿರ್ಲಕ್ಷ್ಯ ಮಾಡವವರ ಅಲಕ್ಷ್ಯ ಮಾಡಿ
ಜಂಭ ಅಹಂಕಾರದವರ ಮುಂದೆ ಮೌನವಹಿಸಿ
ಸ್ಪಂದಿಸದವರ ಮುಂದೆ ಜಗ ಜಟ್ಟಿಯಾಗಿ ಬಾಳಿ
ಮುಂದಾಲೋಚನೆ ಬೇಡ ಈ ಕ್ಷಣದ ಖುಷಿ
ಪಡಿ
ಕೈಚಾಚುವದು ಬೇಡ ಶ್ರಮ
ದುಡಿಮೆಯಲಿ ಸ್ವಲ್ಪ ಹಂಚಿ
ಕನಿಷ್ಠ ಗರಿಷ್ಠ ಬಗ್ಗೆ ಸಣ್ಣತನದ ದಡ್ಡತನ ಬೇಡ
ದೊಡ್ಡತನವಿರಲಿ
ಹೋಲಿಕೆ ಬೇಡ ಹೊಸತನ ಇರಲಿ
ಮೆಚ್ಚಿಸುವದು ಬೇಡ ಮನ ಮೆಚ್ಚುವಂತಿರಲಿ
ಸರ್ವರ ಜೋತೆ ನಗು ನಗುತಾ ಇರ್ರಿ
ಅನುಕ್ಷಣ ಅನುದಿನವೂ ಉತ್ಸಾಹ ಭರಿತ
ವಿರಲಿ ಸುಖದ ಜೀವನ ಸಂದೇಶ ನಿನಗೆ ನೀನೇ
ಮಾದರಿ ಆದರ್ಶ ಜೀವನ ಶೈಲಿ
ಜಗದ ಬಾಳಿಗೆ ನೀನೇ ರೂವಾರಿ.
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟೆ