ದೇವದಾಸಿ ಮಹಿಳೆಯರು ಮತ್ತು ಇತರೆ ಮಹಿಳೆಯರಿಗೆ ಪಟ್ಟಾ ನೀಡಲು ಮನವಿ.
ಕೊಟ್ಟೂರು ಸ.04

ಸೆಪ್ಟೆಂಬರ್ 4 ರಂದು ಕೊಟ್ಟೂರು ತಾಲೂಕಾ ಕಾರ್ಯಾಲಯದ ಮುಂದೆ ದೇವದಾಸಿ ಮಹಿಳೆಯರು ಹಾಗೂ ಇತರೆ ಮಹಿಳೆಯರು ಈ ಹಿಂದೆ (ಅನಿರ್ದಿಷ್ಟಾವಧಿ) ಧರಣಿ ನಿರಂತರ ನಡೆಸಿದ್ದರು. ಆ ದಿನ ಪಟ್ಟ ನೀಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಮೂರು ತಿಂಗಳಾದರೂ ಪಟ್ಟಾ ಇಲ್ಲ ದೇವದಾಸಿ ಮಹಿಳೆಯರಿಗೂ ಮತ್ತು ಇತರ ಮಹಿಳೆಯರಿಗೆ ಪಟ್ಟಾ ಇಲ್ಲದಿದ್ದರೆ ತಮ್ಮ ಕಚೇರಿ ಮುಂದೆ ಎಲ್ಲಾ ಸಂಘಟನೆ ಯೊಂದಿಗೆ ನಿರಂತರ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡಬೇಕಾಗುತ್ತದೆ.

ಗುಡಿಯಾರ ಮಲ್ಲಿಕಾರ್ಜುನ್ ದೇವದಾಸಿ ಮಹಿಳೆಯರು ಭಾರತಿ ಆರ್ ಸರಸ್ಪತಿ ಕೊಟ್ರಮ್ಮ ಹಾಲಮ್ಮ ಕೊಟ್ರುಬಸಮ್ಮ ಶಾರದಮ್ಮ ಕೊಟ್ಟೂರಿನ ಎಲ್ಲಾ ಸಂಘ ಸಂಸ್ಥೆಗಳು ಧರಣಿ ಕೂರ ಬೇಕಾಗುತ್ತದೆ ಎಂದು ಮನವಿಯನ್ನು ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು.