ಇಂದು ರಾಂಪುರದಲ್ಲಿ ಶಿಕ್ಷಣದಲ್ಲಿ ಸಾಧನೆಗೈದು ನಿವೃತ್ತರಾದ ಶಿಕ್ಷಕರಿಗೆ – ಶಾಸಕರಿಂದ ಸನ್ಮಾನ.
ರಾಂಪುರ ಸ.05

ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ಇಂದು ಜನಪ್ರಿಯ ಶಾಸಕರಾದ ಸನ್ಮಾನ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ನಿವೃತ್ತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈತ ಶಿಕ್ಷಕರಿಗೆ ಸನ್ಮಾನಿಸಿ ಅಭಿನಂದಿಸಿದರು.

ನೀವು ನೀಡಿದ ಜ್ಞಾನ, ತೋರಿದ ಅಕ್ಕರೆ ಸದಾ ನಮ್ಮನ್ನು ಸರಿಯಾದ ಮಾರ್ಗಕ್ಕೆ ಕರೆ ದೊಯ್ಯುತ್ತದೆ, ಉತ್ತಮ ಮನುಷ್ಯರಾಗಲು ನಮಗೆ ಸ್ಫೂರ್ತಿ ನೀಡುತ್ತದೆ. ಬದುಕಿಗೆ ಅರ್ಥ ತಂದ ತಮಗೆ ಶಿಕ್ಷಕರ ಶುಭಾಶಯಗಳು ತಿಳಿಸಿದರು.ಆತ್ಮೀಯ ಶಿಕ್ಷಕ ಬಂಧುಗಳು, ತಾಲೂಕಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು.