“ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು”…..

ಗುರು ಬ್ರಹ್ಮ ಗುರು ವಿಷ್ಣು ಗುರು ದೇವ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥವಾಗಿ ಅವರ ಜನ್ಮ ದಿನದ ಪ್ರಯುಕ್ತವಾಗಿ ಪ್ರತಿ ವರ್ಷ ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಂದೆ ವಿರಸ್ವಾಮಿ , ತಾಯಿ ಸಿತಮ್ಮ ಅವರ ಉದರದಲ್ಲಿ 1888 ಸೆಪ್ಟೆಂಬರ್ 05 ರಂದು ತಮಿಳುನಾಡಿನ ತಿರುತ್ತಣಿಯಲ್ಲಿ ಜನಿಸಿದರು. ಬಾಲ್ಯದಲ್ಲಿ ತಿರುಪತಿಯ ಹರ್ಮನ್ಸ್ ಬರ್ಗ್ ಮಿಷನರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾಭ್ಯಾಸ ಮುಗಿಸಿದ ನಂತರ ವೆಲ್ಲೂರಿನ ಮಾರ್ಕ್ಸ್ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದರು. ಅಂದು ವಿದ್ಯಾರ್ಥಿ ಜೀವನದಲ್ಲಿ ಕಲಿತ ಶಿಸ್ತಿನ ತರಬೇತಿಯಿಂದ ಅವರ ಮನಸ್ಸು ಅಧ್ಯಯನದ ಕಡೆ ವಾಲಿತು. ವಿದ್ಯಾರ್ಥಿ ಜೀವನದ ಗುರಿಯ ಅರಿವು ಅವರಿಗಾಯಿತು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ. ಮತ್ತು ಎಂ.ಎ ಪದವಿಯನ್ನು ತತ್ವಶಾಸ್ತ್ರದಲ್ಲಿ ಪಡೆದರು.ತದನಂತರ ಮದ್ರಾಸ ಶಿಕ್ಷಣ ಇಲಾಖೆಯಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಉಪನ್ಯಾಸಕರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು ಅವರ ಬೋಧನಾ ಶೈಲಿ, ನಿರರ್ಗಳತೆ, ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳಿಗೆ ಬೇಗ ಆಕರ್ಷಿಸಿತು, ಜೋತೆಗೆ ಅವರಲ್ಲಿರುವ ವ್ಯಕ್ತಿತ್ವದ ಸೌಜನ್ಯ, ಸ್ನೇಹಶಿಲತೆ ಎಲ್ಲರ ಗಮನ ಸೆಳೆಯಿತು. ಆಂಧ್ರಪ್ರದೇಶ, ದೆಹಲಿ ಬನಾರಸ್,ಮೈಸೂರು ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿದರು. ಇವರ ಸಾಧನೆಯನ್ನು ಮೆಚ್ಚಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಇವರು ಹಲವಾರು ರಾಷ್ಟ್ರಗಳಿಗೆ ಭೇಟಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ಯಶಸ್ವಿಯಾದರು. ಅವರ ಆಡಳಿತದ ಅವಧಿಯಲ್ಲಿ ಮಾಡಿದ ಅವರ ಸೇವೆ ಅನುಪಮವಾದದ್ದು. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಪ್ರಿಲ್ 16- 1975 ರಂದು ಅವರು ನಿಧನರಾದರು. ಅವರ ವಿಚಾರ ಚಿಂತನೆ ಮತ್ತು ಸ್ಪೂರ್ತಿ ಆದರ್ಶ ಶಿಕ್ಷಕರಾಗಿದ್ದ ಇವರು ಗುರುವಿನ ಸ್ಥಾನ ಗೌರವವನ್ನು ಹೆಚ್ಚಿಸಿ ಆದರ್ಶ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಗತ್ಯವೆಂಬುದನ್ನು ತೊರಿಸಿಕೊಟ್ಟರು. ಭಾರತಿಯ ಪರಂಪರೆಯಲ್ಲಿ ಗುರುವಿನ ಸ್ಥಾನ ಅತ್ಯುನ್ನತವಾಗಿದೆ. ” ನಹಿ ಜ್ಞಾನೆನ ಸದೃಶಂ ” ಎಂಬಂತೆ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಅಲ್ಲ. ಅದು ಗುರುವಿನಿಂದ ಬರಬೇಕು ಗು – ಎಂದರೆ ಕತ್ತಲೆರು – ಎಂದರೆ ನಾಶ ಎಂದರ್ಥ”ಶಿಷ್ಯರಲ್ಲಿ ಅಡಗಿರುವ ಅಜ್ಞಾನವೆಂಬ ಕತ್ತಲೆಯನ್ನು ಹೊಡೆದು ಡಿಸುವನೆ ಗುರು”ಉಪನಿಷತ್ತಿನಲ್ಲಿ ಬರುತ್ತೆ – ಅಸತ್ಯದಿಂದ ಸತ್ಯದ ಕಡೆಗೆ ಅಂಧಕಾರದಿಂದ ಪ್ರಕಾಶಮಾನವಾದ ಕಡೆಗೆ ಮೃತ್ಯುವಿನಿಂದ ಅಮೃತತ್ವದ ಕಡೆಗೆ ಕರೆದುಕೊಂಡು ಹೊಗುವವನೆ ಗುರು. ಎಂಬ ವಾಕ್ಯ ಅತ್ಯಂತ ಸೂಕ್ತ ಮತ್ತು ಸಮಂಜಸವಾದ್ದು. ಪುರಂದರದಾಸರು “ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಅಂತ ಹೆಳಿದ್ದಾರೆ. ಶಿಲ್ಪಿ ತನ್ನ ಪ್ರತಿಭೆಯಿಂದ ಕಲಾ ಶಕ್ತಿಯಿಂದ ಒಂದು ಕಲ್ಲನ್ನು ಕಡೆದು ಅಪೂರ್ವ ಕಲಾಕೃತಿಯನ್ನು ನಿರ್ಮಿಸುವಂತೆ ಶಿಕ್ಷಕ ತನ್ನ ಶಕ್ತಿ ಸಾಮರ್ಥ್ಯಗಳಿಂದ, ಪ್ರತಿಭೆಯಿಂದ, ವಿದ್ಯಾರ್ಥಿಯನ್ನು ಕಡೆದು ಅಪೂರ್ವ ಮೂರ್ತಿ ಶಿಲ್ಪವನ್ನಾಗಿ ನಿರ್ಮಾಣ ಮಾಡುತ್ತಾನೆ. ಆದ್ದರಿಂದ ಶಿಕ್ಷಕನೇ ವಿದ್ಯಾರ್ಥಿಯ ದಾರಿದೀಪ, ಮಾರ್ಗದರ್ಶಕ, ಇವನೇ ಸಮಾಜದ ನಿರ್ಮಾತೃ, ಇವನ ವ್ಯಕ್ತಿತ್ವದ ಪ್ರತಿಭೆಯಲ್ಲಿಯೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಕರು ರಾಷ್ಟ್ರ ನಿರ್ಮಾಪಕರು ರಾಷ್ಟ್ರ ರಕ್ಷಕರು ದೇಶದ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ. ಸುಂದರ ಕಟ್ಟಡವಿದ್ದರೂ, ಪ್ರಶಾಂತ ವಾತಾವರಣ ಇದ್ದರು. ಸಕಲ ಸೌಕರ್ಯಗಳಿದ್ದರೂ, ಉತ್ತಮ ವಿದ್ಯಾರ್ಥಿಗಳಿದ್ದರು, ಸಮರ್ಥ ಶಿಕ್ಷಕರಿಲ್ಲದಿದ್ದರೆ ಆ ವಿದ್ಯಾಸಂಸ್ಥೆ ಯಶಸ್ಸು ಕಾಣುವುದಿಲ್ಲ. ರಾಷ್ಟ್ರವಿರುವುದು ಸರ್ಕಾರದ ಕೈಯಲ್ಲಿ ಅಲ್ಲ, ಸೈನಿಕರ ಕೈಯಲ್ಲಿ ಅಲ್ಲ, ಅದು ಇರುವುದು ಶಿಕ್ಷಕರ ಕೈಯಲ್ಲಿ ಅನ್ನುವ ಮಾತು ಸಾವಿರಕ್ಕೆ ಸತ್ಯ.ಡಿ.ವಿ.ಜಿ ಹೇಳ್ತಾರೆ – ಪಾಠಶಾಲೆ ಅಂದರೆ ಗೋಡೆ, ಛಾವಣಿ, ಬೆಂಚು, ಹಲಗೆ, ಪುಸ್ತಕ ಅಲ್ಲ, ಅದು ಒಂದು ಶಕ್ತಿ ಪ್ರಕಾಶ ಸ್ಥಾನ. ಇಲ್ಲಿ ಸೂರ್ಯನ ಕಿರಣದಂತೆ ಹರಡಿ ಮತ್ತೊಂದು ಮಾನುಷ ಪ್ರಭಾವವನ್ನು ಬಿಳುವುದೆ ನೀಜವಾದ ಪಾಠಶಾಲೆ. ಶಿಕ್ಷಕರನ್ನು ಶಿಕ್ಷಣ ಕ್ಷೇತ್ರದ ಸೂರ್ಯ ಅನ್ನುತ್ತಾರೆ. ಶಿಕ್ಷಕ ಕೇವಲ ಶೈಕ್ಷಣಿಕ ತರಬೇತಿಯನ್ನು ಪಡೆದ ಮಾತ್ರಕ್ಕೆ ಉತ್ತಮ ಶಿಕ್ಷಕನಾಗಲಾರೆ. ವಿದ್ಯಾರ್ಥಿಯ ಮನಸ್ಸನ್ನು ಒಳಹೊಕ್ಕು ನೋಡಿ ಅವನ ಮನಸ್ಸಿನ ಭಾವನೆಗಳನ್ನು ಅರಿತು ಅದಕ್ಕೆ ತಾನು ಸ್ಪಂದಿಸಿ, ವಿದ್ಯಾರ್ಥಿಯೊಂದಿಗೆ ಸಮಾನ ಹೃದಯಿಯಾಗಿ ಮಿಡಿಯುವ ವ್ಯಕ್ತಿ ಮಾತ್ರ ಸಾರ್ಥಕ ಶಿಕ್ಷಕನಾಗಬಲ್ಲ. ಸಸಿ ಒಂದನ್ನು ತೋಟದಲ್ಲಿ ನೆಟ್ಟು ನಿತ್ಯ ಅದನ್ನು ಪೋಷಣೆ ಮಾಡಿ ಕಾವಲುಗಾರನು ಹೇಗೆ ಕಾಯ್ದು ಅದರಿಂದ ಬರುವ ಫಲವನ್ನು ರಕ್ಷಿಸುತ್ತಾನೋ ಹಾಗೆ ಆ ಎಲ್ಲ ಗಿಡಗಳಿಗೆ ಯಾವ ರೀತಿ ಕಾಳಜಿ ಮಾಡುತ್ತಾನೋ ಅದೇ ರೀತಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಬೆಳೆಸುತ್ತಾರೆ. ಶಿಕ್ಷಣ ಸಮಾಜಕ್ಕಾಗಿ ಕೊಡುಗೆ ನೀಡುತ್ತಿರುವ ಶಿಕ್ಷಕರನ್ನು ಗೌರವಿಸುವ ದಿನ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಟಿ.ಎಚ್.ಎಂ. ರಾಜಕುಮಾರ್.ಕಂಪ್ಲಿ.ಬಳ್ಳಾರಿ.