ಶಾಲೆ ಕಾಲೇಜುಗಳಲ್ಲಿ ಮಕ್ಕಳ ಶಿಕ್ಷಣದ ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಕರ ಪಾತ್ರ ಬಹು ಮುಖ್ಯ – ಶಾಸಕ ಡಾ, ಶ್ರೀ ನಿವಾಸ್.ಎನ್.ಟಿ.
ಖಾನಾ ಹೊಸಹಳ್ಳಿ ಸ.06

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನ ಹೊಸಹಳ್ಳಿ ಗ್ರಾಮದ ಎನ್ ಎಚ್. 50 ಪಕ್ಕದಲ್ಲಿ ಬರುವ ಗಾಣಿಗರ ಸಮುದಾಯ ಭವನದಲ್ಲಿ ಗುರುವಾರ ರಂದು ಹಮ್ಮಿ ಕೊಳ್ಳಲಾಗಿದ್ದ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 136 ನೇ. ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ ರವರು ಉದ್ಘಾಟಿಸಿ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಾನೊಬ್ಬ ರೈತನ ಮಗನಾಗಿದ್ದು, ಕನ್ನಡ ಶಾಲೆ ಯಿಂದ ದೆಹಲಿಯ ವೈದ್ಯಕೀಯ ಶಿಕ್ಷಣ ವರೆಗೂ ಶಿಕ್ಷಕರ ಉತ್ತಮ ಶಿಕ್ಷಣವನ್ನು ಪಡೆದು ಕೊಂಡು ಬೆಳೆದಿರುವೆ. ಹಾಗೆ ಈ ಸಮಾಜಕ್ಕೆ ನನ್ನ ಕೈಲಾಗುವಷ್ಟು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಪುನ್ಹ ಸಮಾಜಕ್ಕೆ ಪಡೆದು ಕೊಂಡಿರುವಂತದ್ದನ್ನೂ, ಮತ್ತೇ ಮರಳಿ ಸಮಾಜಕ್ಕೆ ಉತ್ತಮವಾದ ಅಳಿಲು ಸೇವೆ ಕೊಡಲು ಬಂದಿರುವೆ. ತಾವುಗಳು ಶಿಕ್ಷಕರಾಗಿರುವುದರಿಂದ ನಿಮಗೆ ನಾನು ಏನೂ ಹೇಳಲಿ. ನೀವು ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮವಾದ ಗುಣಾತ್ಮಕ ಒಳ್ಳೆಯ ಶಿಕ್ಷಣವನ್ನು ಕೊಡಿ ಅಂತಹ ಅಷ್ಟೇ ಹೇಳುವೆ.

ನಿಮ್ಮಲ್ಲಿ ಸಾಕಷ್ಟು ನೋವುಗಳಿವೆ ಆದರೆ ನಿಮ್ಮ ಕಷ್ಟ ಎಂಬ ಸಮಸ್ಯೆಗಳನ್ನು ಬಗೆ ಹರಿಸಲು ನಾನು ಸಿದ್ಧನಿರುವೆ ಎಂದರು. ಈ ಸಂದರ್ಭದಲ್ಲಿ ಪ್ರತಿಭಾವಂತ ಶಿಕ್ಷಕರನ್ನು ಸನ್ಮಾಸಿ, ಬೇಡಿಕೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಬಿ.ಇ.ಓ ಅಧಿಕಾರಿಗಳಾದ ಪದ್ಮನಾಭ ಕರಣಂ , ಖಾನ ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಚೇತನ್ ಮತ್ತು ಉಪಾಧ್ಯಕ್ಷರು, ಡಿ.ಎಸ್.ಎಸ್ ತಾಲೂಕು ಸಂಚಾಲಕರು ಎಳೆನೀರು ಗಂಗಣ್ಣ ನೌಕರರ ಸಂಘದ ಅಧ್ಯಕ್ಷರು ಪಿ. ಶಿವರಾಜ್, ಸಮನ್ವಯ ಅಧಿಕಾರಿಗಳಾದ ಜಗದೀಶ್, ಮುಖಂಡರು ಶಶಿಧರ್ ಸದಸ್ಯರು, ಮುಖಂಡರು, ಶಿಕ್ಷಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ.