ರಾಜ್ಯ ಸರ್ಕಾರದ ನಡೆ ವಿರೋಧಿಸಿ ವಾಪಸ್ ಪಡೆಯಿರಿ ಇಲ್ಲದಿದ್ದರೆ ಪ್ರತಿಭಟನೆಗೆ – ರೆಡಿ ಎಂಬ ಘೋಷ ವಾಕ್ಯ.
ಕಂಪ್ಲಿ ಸ.06

ರಾಜ್ಯ ಸರ್ಕಾರ 3677 ಎಕರೆ ಭೂಮಿಯನ್ನು ಜಿಂದಾಲ್ ಎಂಬ ಖಾಸಗಿ ಕಂಪನಿಗೆ, ಹರ್ಷಲ್ ಮಿತ್ತಲ್, ಉತ್ತಮ್ ಗಾಲ್ವ, ಏನ್.ಎಂ.ಡಿಸಿ ಸಾಯಿ ವೆಂಕಟೇಶ್ವರ ಮಿನರಲ್ಸ್, ಕಂಪನಿಗಳಿಗೆ ಭೂಮಿಗಳನ್ನು ಮಂಜೂರು ಮಾಡಿ ಕೊಟ್ಟಿರುವ ಕ್ರಮವನ್ನು ರಾಜ್ಯ ಮಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬಳ್ಳಾರಿ ಜಿಲ್ಲೆ ಘಟಕ ಮತ್ತು ತೀವ್ರವಾಗಿ ಖಂಡಿಸುತ್ತದೆ ಮತ್ತು ಆ ಭೂಮಿಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತದೆ. ರಾಜ್ಯದಲ್ಲಿ ಭೂ ರಹಿತ ಲಕ್ಷಾಂತರ ಬಡ ಜನರು ಫಾರಂ ನಂ. 50-53-57ರಲ್ಲಿ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಹಲವು ದಶಕಗಳಿಂದ ಕಾಯುತ್ತಿದ್ದರೂ ಇಲ್ಲದ ಸಬೂಬು ಹೇಳುತ್ತಲೇ ತುಂಡು ಭೂಮಿಯನ್ನೂ ಮಂಜೂರು ಮಾಡದೆ ನಯವಾಗಿ ವಂಚಿಸುತ್ತಾ ಬರಲಾಗುತ್ತಿದೆ. ಆದರೆ ಕಂಪನಿಗಳಿಗೆ ಭೂಮಿ ಕೊಡುವುದನ್ನೇ ಸರ್ಕಾರ ಅಭಿವೃದ್ದಿ ಎಂದು ಭಾವಿಸದಂತಿದೆ. ಆ ಮೂಲಕ ಕಂಪನಿಗಳ ಹಿತಾಸಕ್ತಿ ಕಾಯುತ್ತಿರುವ ಸರ್ಕಾರಗಳಿಗೆ ಬಡ ಜನರ ಬಗ್ಗೆ ಕಾಳಜಿ ಇಲ್ಲವಾಗಿದೆ. ಆಳುವವರು ಜನರಿಂದ ಆಯ್ಕೆ ಆಗಿದ್ದೀರೋ, ಕಂಪನಿಗಳು ಕೊಡುವ ಕಮೀಷನ್ ಮೇಲೆ ಆಯ್ಕೆ ಆಗಿದ್ದೀರೋ ಎಂಬ ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳುತ್ತಿದ್ದೇವೆ.ಅಭಿವೃದ್ದಿ ಹೆಸರಲ್ಲಿ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ನೀಡುವ ಸರ್ಕಾರ, ಸಾಮಾನ್ಯ ಜನರಿಗೆ ಅದರ ಹತ್ತು ಪಟ್ಟು ಬೆಲೆಗೂ ನೀಡುವುದಿಲ್ಲ. ಅಭಿವೃದ್ದಿ ಎಂದು ಖಾಸಗಿ ಕಂಪನಿಗಳಿಗೆ ಭೂಮಿ ಮಾರುವ ಬದಲು ಸರ್ಕಾರವೇ ಉದ್ಯಮ ನಡೆಸಿದರೆ ನೈಸರ್ಗಿಕ ಸಂಪತ್ತು ಸರ್ಕಾರದ ಬಳಿಯೇ ಉಳಿಯುತ್ತದೆ ಯಲ್ಲವೇ? ಹಿಂದಿನ ಸರ್ಕಾರ ಮಠ ಮಾನ್ಯಗಳಿಗೆ, ಕಾರ್ಪೋರೇಟ್ ಕಂಪನಿಗಳಿಗೆ, ಟ್ರಸ್ಟ್‌ಗಳಿಗೆ ಭೂಮಿಯನ್ನು ನೀಡುವ ಮೂಲಕ ಜನ ವಿರೋಧಿಯಾಗಿ ನಡೆದು ಕೊಂಡಿತ್ತು,

ಈಗಿನ ಸರ್ಕಾರ ಅವರಿಗಿಂತ ತಾನೇನು ಕಮ್ಮಿಯಿಲ್ಲ ಎಂಬಂತೆ ವರ್ತಿಸುತ್ತಿದೆ. ಬಡ ಜನರ ವಿರೋಧಿ ನಡಾವಳಿಕೆಯಲ್ಲಿ ಎಲ್ಲಾ ಸರ್ಕಾರಗಳೂ ಒಂದೇ ಎಂಬುದು ಸಾಭೀತಾಗುತ್ತಿದೆ.’ಉಳ್ಳುವವನೇ ಭೂಮಿಯ ಒಡೆಯ’ ನೀತಿಯ ಜಾರಿಯ ಪರಿಣಾಮ ಒಂದಷ್ಟು ಜನರು ಭೂಮಿಯ ಹಕ್ಕನ್ನು ಪಡೆದು ಕೊಂಡರು. ಆದರೆ ಈಗ ಅದೇ ಭೂಮಿಗಳನ್ನು ಕೈಗಾರಿಕೆಗಳ ಸ್ಥಾಪನೆ ಹೆಸರಲ್ಲಿ ಕಿತ್ತುಕೊಂಡು ಜನರನ್ನು ಬೀದಿಪಾಲು ಮಾಡಲಾಗುತ್ತಿದೆ. ಮತ್ತೊಂದು ಕಡೆ ತುಂಡು ಭೂಮಿಯಲ್ಲಿ ಬದುಕು ಕಟ್ಟಿ ಕೊಳ್ಳಲಾಗದೆ ರೈತ ಸಮುದಾಯ ಅತ್ಯಂತ ಸಂಕಷ್ಟದಲ್ಲಿ, ಸಾಲದ ಹೊರೆಯಲ್ಲಿ ಬದುಕುವಂತಾಗಿದೆ. ಬಡ ಜನರಿಗೆ ಭೂಮಿಯ ಹಕ್ಕು ನೀಡದೆ, ಭೂಮಿ ಇರುವ ರೈತರನ್ನು ತಮ್ಮದೇ ಭೂಮಿಗಳಲ್ಲಿ ಬದುಕಲು ಬಿಡದೆ, ಸರ್ಕಾರ-ಕಾರ್ಪೋರೇಟ್ ಕಂಪನಿಗಳು ಅಡಕತ್ತರಿಯಲ್ಲಿ ಸಿಲುಕಿಸಿ ಶೋಷಣೆ ಮಾಡುತ್ತಿವೆ. ಸರ್ಕಾರಗಳು ಇಂತಹ ರೈತ ವಿರೋಧಿ ನೀತಿಗಳನ್ನು ಕೈ ಬಿಟ್ಟು, ಬಗರ್ ಹುಕುಂ ಸಾಗುವಳಿ ದಾರರಾದ ಬಡ ಜನರಿಗೆ ಭೂಮಿಯ ಮಂಜೂರಾತಿ ನೀಡ ಬೇಕು,

ಕೈಗಾರಿಕೆಯ ಹೆಸರಲ್ಲಿ ಫಲವತ್ತಾದ ಭೂಮಿಗಳನ್ನು ಕಂಪನಿಗಳಿಗೆ ನೀಡುವುದನ್ನು ನಿಲ್ಲಿಸ ಬೇಕಲ್ಲದೆ ಕೈಗಾರಿಕೆ ಕಾರಿಡಾರ್ ಹೆಸರಲ್ಲಿ ಸಾವಿರಾರು ಎಕರೆ ಸಂಪದ್ಬರಿತ ಭೂಮಿಗಳನ್ನು ಕಾರ್ಪೋರೇಟ್ ಕಂಪನಿಗಳ ಒಡಲಿಗೆ ಹಾಕುವ ಯಾರು ಜಾರಿ ಗೊಳಿಸ ಬಾರದೆಂದು ಮತ್ತು ಸಾರ್ವಜನಿಕರಿಗೆ ರೈತರಿಗೆ ಇನ್ನಿತರ ದುರ್ಬಲ ವರ್ಗದ ಜನರಿಗೆ ನ್ಯಾಯ ಕೊಡಿಸುವಲ್ಲಿ ಸದಾ ಮಂದಿರುವ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕ ಹಾಗೂ ಇನ್ನಿತರ ಪ್ರಗತಿಪರ ಸಂಘಟನೆಗಳಾದ ಸಂಸ್ಥೆಗಳಿಗೆ ಯಾವುದೇ ನ್ಯಾಯಯುತ ಕಂಪನಿಗಳಿಗೆ ಭೂ ಮಂಜೂರು ಮಾಡುವ ಪ್ರಸ್ತಾವನೆ ಇದ್ದಲ್ಲಿ ಪ್ರತಿಶತ 10% ಭೂಮಿಯನ್ನು ತೆಗೆದಿಟ್ಟು ಕಂಪನಿಗಳಿಗೆ ನೀಡುವ ಭೂ ಮಂಜೂರಾತಿಗೆ ನಿಗದಿ ಪಡಿಸಿದ ಹಣದ ಹಾಗೆ ಇಂತಹ ಸಂಸ್ಥೆಗಳಿಗೂ ಸಹ ಭೂ ಮಂಜೂರಾತಿ ಮಾಡಿ ಅವರಿಗೆ ಪ್ರಗತಿಪರ ಯೋಜನೆಗಳಾದ ಕುಲಾಂತರಿ ತಳಿ ಮುಂತಾದ ತೋಟಗಾರಿಕೆ ಕೃಷಿ ಅಭಿವೃದ್ಧಿ ಬಲ ಪಡಿಸಲು ಹೊಸ ಹೊಸ ತಳಿಗಳ ಸಂಶೋಧನೆಗೆ ಪ್ರೋತ್ಸಾಹ ಕೊಟ್ಟು ಕೃಷಿ ಕ್ಷೇತ್ರಕ್ಕೆ ಹಾಗೂ ರೈತರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಇಂತಹ ಸಂಸ್ಥೆಗಳಿಗೆ ಸಹಕರಿಸ ಬೇಕಾಗಿ ಮತ್ತೊಮ್ಮೆ ಮನವಿ ಪತ್ರದೊಂದಿಗೆ ಪಾಲ್ಗೊಂಡವರು. ಟಿ.ಹೆಚ್.ಎಂ ರಾಜಕುಮಾರ್, ಹೆಚ್ ಶ್ರೀನಿವಾಸ್, ರಾಜ್ಯ ಮಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಅಧ್ಯಕ್ಷರು ಮತ್ತು ಕಲ್ಯಾಣ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಬಳ್ಳಾರಿ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಯುಗಂಧರ್ ನಾಯ್ಡು, ರವಿ ಮಣ್ಣೂರು, ಲಕ್ಷ್ಮಣ, ಬಸವರಾಜ, ರಾಮಾಂಜನಿ, ಇನ್ನಿತರ ಉಪಸ್ಥಿತಿಯಲ್ಲಿ ಮಾನ್ಯ ತಾಹಸಿಲ್ದಾರರಾದ ಶಿವರಾಜ ಸುರಪುರ ಇವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಟಿ.ಎಚ್.ಎಂ.ರಾಜಕುಮಾರ್.ಕಂಪ್ಲಿ.ಬಳ್ಳಾರಿ.