ಬಾಬಾ ಸಾಹೇಬ್ರು ಸೋತ ಚುನಾವಣೆಯಲ್ಲಿ – ಕಾಂಗ್ರೆಸ್ನ ಕುತಂತ್ರವೇನು….?
ಬಾಗಲಕೋಟೆ ಮಾ.20

ಸ್ವತಂತ್ರ ಭಾರತಕ್ಕೆ ಸಂವಿಧಾನ ರೂಪಿಸುವ ಬಹುದೊಡ್ಡ ಜವಾಬ್ದಾರಿ ನಿರ್ವಹಿಸಿದ ಬಾಬಾಸಾಹೇಬರು 1951 ರಲ್ಲಿ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬಂದದ್ದು ಯಾಕೇ? ಎಂಬ ಅನುಪಯುಕ್ತ ಸಮಾಚಾರ 1951 ಅಕ್ಟೋಬರ್ 25 ರಿಂದ 1952 ಫೆಬ್ರವರಿ 21 ರ ವರಗೆ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಬಾಬಾ ಸಾಹೇಬರು ತಮ್ಮ All India Scheduled Class Federation ಪಕ್ಷದಿಂದ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು . ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದವರು ನಾರಾಯಣಸ ಡೋಬ ಕಾಜ್ರೋಲ್ಕರ್. ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬರಗೆ ಸಹಾಯಕನಾಗಿದ್ದ ಕಾಜ್ರೋಲ್ಕರ್ ಅವರನ್ನು ‘ಆರಿಸಿ’ ಕೊಂಡು ಹೋಗಿ ಅಭ್ಯರ್ಥಿ ಯಾಗಿಸಿತು. ಸ್ವತಃ ಆಗಿನ ಪ್ರಧಾನಿ ನೆಹರೂ ಮುಂಬೈ ಉತ್ತರ ಕ್ಷೇತ್ರಕ್ಕೆ ಎರಡೆರಡು ಸಲ ಬಂದು ಕಾಜ್ರೋಲ್ಕರ್ ಪರ ಪ್ರಚಾರ ಮಾಡಿದರು. ಮುಂಬೈ ಉತ್ತರ ದ್ವಿಸದಸ್ಯರನ್ನು (ಒಬ್ಬರು ಸಾಮಾನ್ಯ, ಮತ್ತೊಬ್ಬರು ಎಸ್ಸಿ) ಆಯ್ಕೆ ಮಾಡಬೇಕಾಗಿದ್ದ ಕ್ಷೇತ್ರದ್ದಲ್ಲಿ ಚುನಾವಣೆಯ ಫಲಿತಾಂಶದ ನೋಟ ನೋಡುವುದಾದರೆ ಗಾಂಧಿ ವಿಠ್ಠಲ್ ಬಾಲಕೃಷ್ಣ – ಕಾಂಗ್ರೆಸ್ – 1,49,138 ಎನ್ ಎಸ್ಕಾಜ್ರೋಲ್ಕರ್ – ಕಾಂಗ್ರೆಸ್ – 1,38,137 ಅಶೋಕ್ ಮೆಹ್ತಾ -ಸಮಾಜವಾದಿ ಪಕ್ಷ – 1,39741 ಬಿ.ಆರ್ ಅಂಬೇಡ್ಕರ್ – AISCF-1,23,576 ಶ್ರೀಪಾದ ಅಮೃತ ಡಾಂಗೆ – CPI – 96,755 ವಿಜೇತರು : 1. ಗಾಂಧಿ ವಿಠ್ಠಲ್ ಬಾಲಕೃಷ್ಣ – ಕಾಂಗ್ರೆಸ್ – ಸಾಮಾನ್ಯ 2. ಎನ್ ಎಸ್ ಕಾಜ್ರೋಲ್ಕರ್ – ಕಾಂಗ್ರೆಸ್ – ಎಸ್ಸಿ ಮೀಸಲು ಜನಸಂಘ / ಹಿಂದೂ ಮಹಾ ಸಭಾ ಸ್ಪರ್ಧಿಸಿರಲಿಲ್ಲ. ಶ್ರೀಪಾದ ಅಮೃತ ಡಾಂಗೆ CPI ನಿಂದ ಸ್ಪರ್ಧಿಸಿ ಕಾರ್ಮಿಕರ ಓಟು ಕತ್ತರಿಸದೇ ಇದ್ದರೆ ಬಾಬಾ ಸಾಹೇಬರು ಗೆಲ್ಲುವ ಸಾಧ್ಯತೆ ನಿಚ್ಚಳವಾಗಿತ್ತು ಎನ್ನುವ ಆಶಾಭಾವನೆಯನ್ನು ಅಲ್ಲಗಳೆಯುವಂತಿಲ್ಲ ಸಂವಿಧಾನ ಶಿಲ್ಪಿಯನ್ನು ಕಾಂಗ್ರೆಸ್ ಲೋಕಸಭೆ ಪ್ರವೇಶಿಸಲು ಬಿಡಲಿಲ್ಲ, ಭಾರತ ರತ್ನ ಕೊಡುವುದಂತು ದೂರವೇ ಉಳಿಯಿತು. 1970 ರಲ್ಲಿ ಅಂದಿನ ಪ್ರಧಾನಿಯಾದ ಇಂದಿರಾ ಗಾಂಧಿ ಯವರು ಬಾಬಾ ಸಾಹೇಬರನ್ನು ಸೋಲಿಸಿದ ಕಾಜ್ರೋಲ್ಕರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟೂ ಪ್ರಶಂಷೆ ಮಾಡಿದ್ದಲ್ಲದೆ 1954 ರ ಭಂಡಾರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಾಬಾ ಸಾಹೇಬರು ಮತ್ತೆ ಸ್ಪರ್ಧಿಸಿದಾಗ ಅಲ್ಲಿಯೂ ಸಹಿತ ಬೆಂಬಿಡದೆ ನೆಹರೂ ತಮ್ಮ ಕಾಂಗ್ರೆಸ್ ಹಠ ದಿಂದ ಮುಗಿಬಿದ್ದು ಬಾಬಾ ಸಾಹೇಬರನ್ನು ಸೋಲಿಸಿ. ಕ್ಷೇತ್ರದ ಉಪ ಚುನಾವಣೆಯಲ್ಲಿ ಬಾಬಾ ಸಾಹೇಬರು ಮತ್ತೆ ಸ್ಪರ್ಧಿಸಿದಾಗ ಅಲ್ಲಿಯೂ ಸಹಿತ ಬೆಂಬಿಡದೆ ನೆಹರೂ ತಮ್ಮ ಕಾಂಗ್ರೆಸ್ ಹಠ ದಿಂದ ಮುಗಿಬಿದ್ದು ಬಾಬಾ ಸಾಹೇಬರನ್ನು ಸೋಲಿಸಿ ಗರ್ವ ಮೆರೆದ ಮಹಿಮರು, ಸಂವಿಧಾನ ಪಿತಾಮಹನಿಗೆ ಕಿಂಚಿತ್ತೂ ಗೌರವ ಕೊಡದೆ ಅವಮಾಣಿಸಿ ನಿಂದಿಸಿದ್ದರು.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟೆ