ರೈತನ ಮೇಲೆ ಕರಡಿ ದಾಳಿ – ತೀವ್ರ ಗಾಯ.
ಕುರಿಹಟ್ಟಿ ಮೇ.15

ಕೂಡ್ಲಿಗಿ ತಾಲೂಕಿನ ಸಮೀಪದ ಜಮೀನಿನಲ್ಲಿ ನೀರು ಹಾಯಿಸಲು ಹೋಗಿದ್ದಾಗ ರೈತನ ಮೇಲೆ ಕರಡಿ ದಾಳಿ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆ ತಾಲೂಕಿನ ಕುರಿಹಟ್ಟಿ ಗ್ರಾಮದ ಹೊರವಲಯದಲ್ಲಿ ಭಾನುವಾರ ನಸುಕಿನಜಾವ ನಡೆದಿದೆ. ಕುರಿಹಟ್ಟಿ ಗ್ರಾಮದ ರೈತ ಸುಪುತ್ರಪ್ಪ 32ವರ್ಷದ ವ್ಯಕ್ತಿಗೆ ಕರಡಿ ದಾಳಿಯಿಂದ ಗಾಯಗೊಂಡವರು. ಮೇವು ಅರಸಿ ಕಾಡಿನಿಂದ ತನ್ನ ಮರಿಗಳೊಂದಿಗೆ ಕರಡಿಯೊಂದು ತೋಟಕ್ಕೆ ಬಂದಿದ್ದು, ಅದೇ ಸಮಯದಲ್ಲಿ ರೈತ ಸುಪುತ್ರಪ್ಪ ಅವರು ತೋಟಕ್ಕೆ ನೀರು ಹಾಯಿಸಲು ಬಂದಿದ್ದಾರೆ.

ಆಗ ತನ್ನ ಮರಿಗಳ ರಕ್ಷಣೆಗಾಗಿ ದೊಡ್ಡ ಕರಡಿ ದಾಳಿ ಮಾಡಿರಬಹುದು ಎನ್ನಲಾಗಿದೆ. ಗಾಯಾಳು ಸುಪುತ್ರಪ್ಪ ಅವರನ್ನು ತಕ್ಷಣವೇ ಚಿಕ್ಕಜೋಗಿಹಳ್ಳಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ ವರದಿಗಾರರು : ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ