ಬುದ್ಧನಾಗಬೇಕು ಬದಲಾವಣೆಗಾಗಿ
ಆಸೆಗೆ ತಿಲಕವಿಟ್ಟು ಅತಿ ಆಸೆಗೆ ಪೂರ್ಣ ವಿರಾಮವಿಟ್ಟು
ಅಹಂಕಾರವ ಮರೆತು ದುರಹಂಕಾರಕ್ಕೆ ಕೈಕೊಟ್ಟು
ಸೋಲಿಗೆ ಶರಣಾಗದೆ ಗೆಲುವಿಗಾಗಿ ಮನಸ್ಸು ಕೊಟ್ಟು
ಅಸೂಯೆ ಮರೆತು ನಾನು ಬುದ್ಧನಾಗಬೇಕು ಹಿಡಿದು ಪಟ್ಟು….
ಶ್ರೀಮಂತರ ಸೊಕ್ಕಡಗಿಸಿ ಬಡವರಿಗೆ ನೆರವಾಗಿ
ಹಿತ ಶತ್ರುಗಳಿಗೆ ತಲೆಬಾಗದೆ ಮಿತ್ರರಿಗೆ ಉಸಿರಾಗಿ
ಸೊಕ್ಕಿದವರನ್ನು ಸೊರಗಿಸಿ ಸ್ನೇಹಿತರಿಗೆ ಹೆಗಲಾಗಿ
ನಾ ಎಂಬುದ ಮರೆತು ನಾನು ಬುದ್ಧನಾಗಬೇಕು ನಮ್ಮವರಿಗಾಗಿ….
ಅಜ್ಞಾನವ ತೊಲಗಿಸಿ ಜ್ಞಾನ ಬೆಳಗುವ
ಅಂಧಕಾರವ ಅಳಕಿಸಿ ಬೆಳಕನು ಪಸರಿಸುವ
ಮಿತ್ಯವ ಮಣ್ಣಾಗಿಸಿ ಸತ್ಯವ ಬೆಳೆಸುವ
ಜಗಕೆ ಜ್ಯೋತಿಯಂತೆ ನಾನು ಬುದ್ಧನಾಗಬೇಕು ಅರಿತು ಜನ್ಮವ….
ತಂದೆಗೆ ಹಣ್ಣಾಗಿ ತಾಯಿಗೆ ಕಣ್ಣಾಗಿ
ಹಿರಿಯರಿಗೆ ತಲೆಬಾಗಿ ಕಿರಿಯರಿಗೆ ಮಾದರಿಯಾಗಿ
ಸಮಾಜಕ್ಕೆ ಆದರ್ಶವಾಗಿ ನಂಬಿದವರಿಗೆ ನೆರಳಾಗಿ
ನನಗೆ ನಾನು ಬುದ್ಧನಾಗಬೇಕು ಬದಲಾವಣೆಗಾಗಿ…
ರಚನೆ : ಮುತ್ತು.ಯ.ವಡ್ಡರ ಬಾಗಲಕೋಟ