ಟಿಪ್ಪು ಸುಲ್ತಾನ್ ಸಂಘದ – ಪದಾಧಿಕಾರಿಗಳ ಆಯ್ಕೆ.
ಮಾನ್ವಿ ಜ.23

ಟಿಪ್ಪು ಸುಲ್ತಾನ್ ಅವರು ಮೈಸೂರು ಹುಲಿ ಎಂದೇ ಹೆಸರು ಮಾಡುವುದರ ಜೊತೆಗೆ ಜಾತಿ ರಹಿತವಾಗಿ ಸೇವೆ ಮಾಡಿದ್ದಾರೆ. ಆದರೆ ಮಾನ್ವಿಯ ನೂತನ ಪದಾಧಿಕಾರಿಗಳು ಸಂಘದ ಬದ್ಧತೆಯಂತೆ ನಡೆದು ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಟಿಪ್ಪು ಸುಲ್ತಾನ್ ಸಂಘದ ರಾಜ್ಯ ಸಂಚಾಲಕ ಸೈಯದ್ ಹುಸೇನ್ ಸಾಹೇಬ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಿ ಮಾತನಾಡಿ, ಮಾನ್ವಿ ತಾಲೂಕ ಉಪಾಧ್ಯಕ್ಷರಾಗಿ ಫ್ರೂಟ್ ಸುಬಾನಿ, ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸೈಯದ್ ಸಾಜಿದ್ ಪಾಷ, ತಾಲೂಕ ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ ಸ್ವಾಮಿ, ಮಾನ್ವಿ ನಗರ ಘಟಕ ಅಧ್ಯಕ್ಷರಾಗಿ ಯೂಸುಫ್ ಖುರೇಷಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಟಿಪ್ಪು ಸುಲ್ತಾನ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಮಿಂಚಿದ್ದಾರೆ, ಅವರ ಹೆಸರಿನಲ್ಲಿ ಸಂಘವನ್ನು ಹುಟ್ಟಾಕಿರುವ ಸೈಯದ್ ಹುಸೇನ್ ಸಾಹೇಬ್ ಹಾಗು ಮಾನ್ವಿ ತಾಲೂಕ ಅಧ್ಯಕ್ಷ ಮಹೆಬೂಬ್ ಖುರೇಷಿ ಅವರ ಮಾರ್ಗದರ್ಶನದಲ್ಲಿ ನಡೆಯುವಂತೆ ದಲಿತ ಮುಖಂಡ ದೇವರಾಜ ನೂತನ ಪದಾಧಿಕಾರಿಗಳಿಗೆ ತಿಳಿ ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ. ನಕ್ಕುಂದಿ.ಮಾನ್ವಿ