ಮದಭಾವಿ ಗ್ರಾಮದಲ್ಲಿ ಉಜ್ವಲ ಗ್ಯಾಸ್ ವಿತರಣಾ ಸಮಾರಂಭ.
ಮದಭಾವಿ ಜೂನ್.24

ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಲಯದಲ್ಲಿ ಕೇಂದ್ರ ಸರಕಾರದ ಮೂರನೇ ಬಾರಿಗೆ ಪ್ರಧಾನ. ಮಂತ್ರಿ ಆಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮತ್ತೆ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಮಂಜೂರಾದ ಪಲಾನುಭವಿಗಳಿಗೆ ಗ್ಯಾಸ್ ಗಳನ್ನು ಕಾಂಗ್ರೇಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ವಿತರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಆಗಲಿ ಕೇಂದ್ರದಲ್ಲಿ ಆಗಲಿ ಯಾವುದೆ ಪಕ್ಷ ಅಧಿಕಾರದಲ್ಲಿ ಇರಲಿ ಅದು ಮುಖ್ಯ ಅಲ್ಲಾ ಜನ ಸಾಮಾನ್ಯರಿಗೆ ಯೋಜನೆಗಳು ತಲುಪಿಸುವುದು ಮುಖ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ನಾಯಿಕ,ಗ್ರಾಮ ಪಂಚಾಯತ ಸದಸ್ಯ ಸಂತೋಷ ಕಲ್ಲೋತ್ತಿ, ಉಮೇಶ ಪಾಟೀಲ, ಸಿದರಾಯ ತೋಡಕರ,ಪಿ ಕೆ ಪಿ ಎಸ್ ಬ್ಯಾಂಕಿನ ನಿರ್ದೇಶಕ ಭೀಮಗೌಡ ನಾಯಿಕ, ಸಂತೋಷ ನಾಯಿಕ, ಧನಂಜಯ ಹವಾಲ್ದಾರ, ದಯಾನಂದ ಇಂಡೇನ್ ಗ್ಯಾಸ್ ಮಾಲೀಕರಾದ ಸತೀಶ ಹಲ್ಲೋಳಿ, ಕೃಷ್ಣ ಸುತಾರ, ಅಶೋಕ ಬಾಡಗಿ, ಮಹಾದೇವ ನಾಯಿಕ ಪ್ರೇಮಕುಮಾರ ನಾಯಿಕ ಹಾಗೂ ಪಲಾನುಭವಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.