ಸಾಮೂಹಿಕ ವಿವಾಹ ಇತರ ಸಮುದಾಯಕ್ಕೆ ಮಾದರಿಯಾಗಿದೆ – ಮಾಜಿ ಅಧ್ಯಕ್ಷ ಸೈಯದ್ ಸಮೀವುಲ್ಲಾ.
ಕಮಲಾಪುರ ಸ.13

ಮದುವೆಗೆ ಸಾಲ ಸೂಲಾ ಮಾಡಿ ಕಷ್ಟಕ್ಕೆ ಸಿಲುಕುವ ಬಡ ಕುಟುಂಬಗಳಿಗೆ ಹೊರೆ ಯಾಗಬಾರದು ಎನ್ನುವ ದೃಷ್ಟಿಯಿಂದ ಡಾ.ಅಂಬೇಡ್ಕರ್ ನಗರದ ಜನ ಪ್ರತಿ ವರ್ಷ ಸಾಮೂಹಿಕ ವಿವಾಹಗಳನ್ನು ಮಾಡಿಸುತ್ತಿರುವುದು ಬೇರೊಂದು ಸಮಾಜಕ್ಕೆ ಮಾದರಿಯಾಗಿದೆ. ಹೆಚ್ಚಿನ ಹಣ ಖರ್ಚು ಮಾಡಿ ಮದುವೆ ಮಾಡಿಸಿ ಇನ್ನಷ್ಟು ಕಷ್ಟ ಅನುಭವಿಸಬಾರದು ಮದುವೆಯ ನಂತರ ಸಾಲವಿಲ್ಲದೆ ಸಂತೋಷದಿಂದ ಬಾಳಬೇಕು ಎಂದು ಪ್ರತಿ ವರ್ಷ ಸಾಮೂಹಿಕ ಮದುವೆಗಳನ್ನು ಮಾಡಿಸುವ ಕಾರ್ಯಗಳನ್ನು ಮಠದ ಕಡೆಯಿಂದ ಮಾಡುತ್ತಿರುವುದು ನಮಗೆ ಅತೀವ ಸಂತಸ ತಂದಿದೆ ಇದೇ ರೀತಿ ಎಲ್ಲಾ ಸಮಾಜಗಳಲ್ಲಿ ಬಡವರಿಗೆ ಮದುವೆ ಮಾಡಿಸುವ ಕಾರ್ಯಗಳು ನಡೆಯಬೇಕು ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸೈಯದ್ ಸಮೀವುಲ್ಲಾ ಹೇಳಿದರು. ಕಮಲಾಪುರ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ನಗರದ ಶ್ರೀ ಗುರು ವೀರೇಶಪ್ಪ ಅವದೂತರ ಮಠ ಮತ್ತು ಜ್ಞಾನಶ್ರಮ ಟ್ರಸ್ಟ್ ಕಡೆಯಿಂದ ಸಾಮೂಹಿಕ ವಿವಾಹವನ್ನು ಬುದುವಾರ ಏರ್ಪಡಿಸಲಾಗಿತ್ತು. ಈ ಸಾಮೂಹಿಕ ವಿವಾಹವದಲ್ಲಿ 13 ಜೋಡಿಗಳು ಭಾಗಿಯಾಗಿ ಸಪ್ತಪದಿ ತುಳಿದರು.ಮಾಜಿ ಸಚಿವ ಆನಂದ್ ಸಿಂಗ್ ನವ ಜೋಡಿಗಳಿಗೆ ಅಕ್ಷತಾ ಹಾಕುವ ಮೂಲಕ ಆಶೀರ್ವದಿಸಿ ಉತ್ತಮ ಜೀವನದ ಬದುಕಿಗೆ ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಸಿದ್ದಾರ್ಥ್ ಸಿಂಗ್ ಮಾತನಾಡಿ ವಿರೇಶಪ್ಪ ಅವರ 50 ನೇ ಪುಣ್ಯ ಸ್ಮರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಮೂಹಿಕ ಮದುವೆಗಳು ಸಮಾಜ ಹಿಂದಿನಿಂದಲೂ ಜಾತ್ಯಾತೀತವಾಗಿ ಮಾಡಿಸುತ್ತಾ ಬಂದಿದೆ ಎಂದು ಕೇಳಿದ್ದೆ ಇಂದು ಕಣ್ಣಾರೆ ನೋಡುವ ಭಾಗ್ಯ ನನಗೆ ಸಿಕ್ಕಿದೆ. ಈ ಧಾರ್ಮಿಕ ಮದುವೆ ವ್ಯವಸ್ಥೆಗಳು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಈ ಸಂಬಂಧ ಬಡ ಕುಟುಂಬಗಳ ತಂದೆ ತಾಯಿಗಳಿಗೆ ನನ್ನ ಮಕ್ಕಳಿಗೆ ನಾನು ಮದುವೆ ಮಾಡಬಹದು ಎನ್ನುವ ಆತ್ಮ ಸ್ಥೈರ್ಯ ತಂದಿದೆ. ಹಣ ದುಬ್ಬರದಿಂದ ತತ್ತರಿಸಿರಿವಂತ ಅದೆಷ್ಟೋ ಬಡ ಕುಟುಂಬಗಳಿಗೆ ವೀರೇಶಾನಂದ ಅವಧೂತರ ಮಠ ಬಡ ಜನಗಳಿಗೆ ಮದುವೆ ಮಾಡಿ ಕೊಳ್ಳಲು ದಾರಿ ದೀಪವಾಗಿದೆ. ಇದರ ಜೊತೆಗೆ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯುವಕರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ತಮ್ಮ ಭವಿಷ್ಯವನ್ನು ಕಟ್ಟಿ ಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಕುರಿತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಾ ಹುಸೇನ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೆಚ್ ಗೋಪಾಲಕೃಷ್ಣ ಮಾತನಾಡಿದರು. ಪರಸಪ್ಪ, ಹುಲುಗಪ್ಪ, ಕೃಷ್ಣ, ಕೋಳೂರು ಹುಲಿಗೆಮ್ಮ, ಶಿವಮ್ಮ, ಇವರ ತಂಡದ ಸುಪ್ರಸಿದ್ಧ ಕಲಾವಿದರಿಂದ 5 ದಿನ ಭಜನೆ, ಮಠದಲ್ಲಿ ಪ್ರವಚನ ಹಾಗೂ ಅನ್ನ ಸಂತರ್ಪಣೆ, ಸಾಯಂಕಾಲ ಹೂವಿನ ತೇರು ಎಳೆಯುವ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾಂಪ್ರದಾಯಿಕ ಉಡುಗೆಗಳನ್ನು ಕಳಶಗಳನ್ನು ಹೊತ್ತ ನೂರಾರು ಜನ ಮಹಿಳಾ ಮಣಿಗಳು ವಿವಾಹಕ್ಕೆ ಸಾಕ್ಷಿಯಾದರು.ಡಾ, ಬಿ ಆರ್ ಅಂಬೇಡ್ಕರ್ ನಗರದ ಮುಖಂಡರಾದ, ಪೂಜಾರಿ ಕೆಂಚಪ್ಪ, ದಲ್ಲಾಳಿ ದುರುಗಪ್ಪ, ದೇವಪ್ರಿಯಾ,ಕೆ ಮಲ್ಲೇಶಪ್ಪ, ಹನುಮಂತಪ್ಪ ಬಾರೆಮರ, ಕಾಡಪ್ಪ, ಮಲ್ಲೇಶಪ್ಪ, ಮಧುಗುಣಿಕೆ ವೆಂಕಟೇಶ್, ಆರ್ ಶೇಖರ್, ವಕೀಲ ಹೆಚ್. ಸೋಮಶೇಖರ್, ಹಾಗೂ ಪಟ್ಟಣ ಪಂಚಾಯತಿ ಸದಸ್ಯರಾದ, ಹೆಚ್ ಗೋಪಾಲಕೃಷ್ಣ, ಸರಿತಾ ವೀರೇಶ್, ಕನ್ನೇಶ್ವರ ದೇವರಮನೆ, ಪಾಲಪ್ಪ, ಚಂದ್ರಣ್ಣ, ಎಮ್. ವೆಂಕಟೇಶ್, ಬ್ರಾಂದಿ ಶಾಪ್ ಕೃಷ್ಣ, ಎ. ಚಿದಾನಂದ, ಎನ್.ಶಿವರಾಮ, ವೀರಶ್ ಕೊಟ್ಟಾಲು, ಗುತ್ತಿಗೆದಾರ ಮಲ್ಲಿಕಾರ್ಜುನ, ಎನ್ ಶರಣಪ್ಪ, ಕೆಂಪು ವೀರೇಶ, ಹೆಚ್ ಆನಂದ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

