ಉಡುಪಿಯಲ್ಲಿ ರಾಜ್ಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆ.
ಹೊಸಪೇಟೆ ಸ.13

ಇದೇ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಉಡುಪಿಯ ಸಾಲಿಗ್ರಾಮದಲ್ಲಿ ರಾಜ್ಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಗೆ ವಿಜಯನಗರ ಜಿಲ್ಲೆಯಿಂದ ವಿಕ್ಟರಿ ಜಿಮ್ ವತಿಯಿಂದ ಮಹಿಳೆಯರು ಸೇರಿದಂತೆ 14 ಜನ ಕ್ರೀಡಾಪಟುಗಳು (ವಲಿಬಾಷ, ವಿಜಯವಾಣಿ, ಎ ಅರುಣ್ ಕುಮಾರ್, ಕೆ ಮಲ್ಲಿಕಾರ್ಜುನ್, ಜಿ ತನುಜಾ ಗಂಗಾಧರ್, ಜೈ ಶರಣ್, ದೀಪಕ್ ಕೆ ಎಸ್ ಅಬ್ದುಲ್ಲಾ, ಹಸೈನ್ ಕೆ ಎಸ್, ಹುಸೈನ್ ಭಾಷಾ, ಗೌಸ್ ಪೀರ್ ಎಂ, ರೋಷರ್ ಜಮೀರ್, ಅಮೀರ್ಜಾನ್,) ಭಾಗವಹಿಸಲಿದ್ದಾರೆ. ಕ್ರೀಡಾ ಪಟುಗಳಿಗೆ ಟೀಮ್ ಎಸ್.ಆರ್.ಕೆ ಕರ್ನಾಟಕ ಹಾಗೂ ಟೀಮ್ ಎಸ್.ಆರ್.ಕೆ ಹೊಸಪೇಟೆ ಇವರ ವತಿಯಿಂದ ವಿಶೇಷ ರೀತಿಯಲ್ಲಿ ಕೇಕ್ ಕಟ್ ಮಾಡಿ ಟೀ ಶರ್ಟ್ ವಿತರಿಸಿ ಪ್ರೋತ್ಸಾಹಿಸಿದರು.ಈ ಸಂದರ್ಬದಲ್ಲಿ ವಿಕ್ಟರಿ ಜಿಮ್ ನ ಮಾಲೀಕ ಮತ್ತು ಕೋಚ್ ಆದ ಅಂತಾರಾಷ್ಟ್ರೀಯ ಕ್ರೀಡಾಪಟು ವಲಿಭಾಷ ಮಾತಾಡಿ ನಮ್ಮ ವಿಜಯನಗರ ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹಿಸುವುದು ತುಂಬಾ ಕಡಿಮೆಯಾಗಿದೆ, ಕ್ರೀಡೆಯಲ್ಲಿ ಭಾಗವಹಿಸುವವರು ಹೆಚ್ಚಾಗಿ ಬಡವರೇ ಇರುತ್ತಾರೆ ಈ ರೀತಿ ಪ್ರೋತ್ಸಾಹಿಸಲು ಮುಂದು ಬಂದರೆ ಇನ್ನೂ ಹೆಚ್ಚಾಗಿ ನಮ್ಮ ಜಿಲ್ಲೆಯಿಂದ ಕ್ರೀಡಾ ಪಟುಗಳು ಬರಲು ಪ್ರೊತ್ಸಾಹ ನೀಡಿ ದಂತಾಗುತ್ತದೆ. ಇದು ಒಂದು ರೀತಿಯಲ್ಲಿ ಆರೋಗ್ಯಕ್ಕೂ ಒಳ್ಳೆಯದು ಹಾಗೂ ದುಶ್ಚಟಗಳಿಂದ ದೂರವಾಗಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದೇ ರೀತಿ ನಮ್ಮ ಜಿಲ್ಲೆಯಿಂದ ಇಂತ ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ನೀಡಬೇಕು ಆಗ ಮಾತ್ರ ಹೆಚ್ಚಿನ ಸಾಧನೆಯನ್ನು ಮಾಡಲು ಸಾದ್ಯವಾಗುತ್ತದೆ ಎಂದು ಹೇಳಿದರು.ಈ ಸಮಯದಲ್ಲಿ ಎಸ್.ಆರ್.ಕೆ ಟೀಮ್ ನ ಅಧ್ಯಕ್ಷರು ಎಂ.ಡಿ. ಖಾಸಿಂ ಉಪಾಧ್ಯಕ್ಷರು ರೋಷನ್ ಮಾತನಾಡಿ ಕ್ರೀಡಾ ಸಾಧನೆಗೆ ಯಾವಾಗಲೂ ನಮ್ಮ ಬೆಂಬಲವಿರುತ್ತದೆ. ಕ್ರೀಡಾಪಟುಗಳು ಪದಕವನ್ನು ಗೆಲ್ಲುವುದರ ಮೂಲಕ ವಿಜಯನಗರ ಜಿಲ್ಲೆಗೆ ಕೀರ್ತಿ ತರಲೆಂದು ಹಾಗೂ ಅಕ್ಟೋಬರ್ 14 ರಿಂದ 18 ರವರೆಗೆ ಗೋವಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿ ನಮ್ಮ ಕರ್ನಾಟಕಕ್ಕೆ ಕೀರ್ತಿ ತರಲೆಂದು ಶುಭ ಹಾರೈಸುತ್ತೇವೆ ಎಂದರು.ಮುಖ್ಯಸ್ಥರಾದ ಎಂ. ಡಿ. ಖಾಸಿಂ, ರೋಷನ್, ಫಿರ್ಡೋಜ್ ಬಾಷಾ, ಮತ್ತು ವಸಿಮ್, ರಿಯಾಜ್, ಶಿಹಾನ್ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ