“ನಿಜ ನಾಯಕಿ ಸಹಧರ್ಮಿಣಿ”…..

ವಿಶ್ವಆದರ್ಶಮಯ ಧರ್ಮಪತ್ನಿ
ಬಾಳ ಪಯಣದ ನಿಜ ನಾಯಕಿ
ಅಜ್ಞಾನದ ಕತ್ತಲೆ ಕಳೆವ ಜ್ಞಾನ ಜ್ಯೋತಿ
ಜಗದ ಕಣ್ಣು ಮಮತೆಯ ಪ್ರತೀಕ
ಹೊತ್ತ ಹೊತ್ತಿಗೆ ಹಸಿವು ನಿಗಿಸಿದಾಕೆ
ಶುಚಿ ರುಚಿ ಪಾಕಶಾಸ್ತ್ರ ಪ್ರವೀಣೆ
ಮನದ ಮನೆಯ ತುಂಬೆಲ್ಲಾ ಸುಗಂಧ
ಹೂವು ನೆಗೆ ಬೀರುವ ಮನದರಸಿ
ಮನ ಕೆರಳಿಸಿ ಹೃದಯಬನ ಅರಳಿಸುವಯಜಮಾನನಿಗೆ ಯಜಮಾನಿ
ದೊರೆಸಾನಿ ಬಾಳ ಸಂಗಾತಿ
ಬಂಧು ಬಳಗ ನೆರೆಹೊರೆ ಸ್ನೇಹ ಜೀವಿ
ನೋವುಂಡು ಮಕ್ಕಳ ನಗಸಿ
ತಾನಕ್ಕು ನಲಿಯುವಾಕಿ
ನೇರ ದಿಟ್ಟತನದ ಮಾತಿನಾಕಿ
ವ್ಯಸನ ವ್ಯತ್ಯಾಸ ಸಹಿಸದ ಶ್ರೀಮತಿ
ನೈಜತೆ ಮರೆ ಮಾಚುವ ಮನಕೆ
ಸತ್ಯತೆಯ ಕೋಪ ತಾಪದ ಅಸ್ತ್ರ ಬಳಕೆ
ಧರ್ಮೋ ರಕ್ಷಿತಿ ರಕ್ಷಿತಃ ನಿಜ ಅರ್ಧಾಂಗಿ
ಬಾಳ ಪಯಣದ ಜೋತೆಗಾತಿ
ಭಾವ ಸುಂದರ ಒಡತಿ
ಬಾಳ ಪಯಣದ ನಿತ್ಯಕಾಯಕ
ನಿಜ ನಾಯಕಿ ಸಹಧರ್ಮಿಣಿ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.