“ನಡೆ ನುಡಿ ಒಂದಾಗಿಸಿದವನೇ ನಿಜ ಶರಣ”…..

ಯದ್ಭಾವಂ ತದ್ಭಾವತಿ
ಸಂಧ್ಯಾ ಕಾಲದಿ ಜಪತಪಗಳಿರಲಿ
ನಿತ್ಯ ಕಾಯಕವೇ ಬದುಕಿಗೆ ಬೆಳಕು
ಪರೋಪಕಾರಂ ಇದಂ ಶರೀರಂ
ಮುಂದೆ ಹೋಗಳಿ ಹಿಂದೆ
ತೆಗಳುವವ ನಿಜ ಪಾಪಿ
ಧೈರ್ಯ ಇದ್ದಲಿ ಭಯ ಕಾಣದು
ಸಮಯಕ್ಕಾದವನೇ ಮಹಾದೇವ
ದುಡಿಮೆಯಲಿ ನಂಬಿಕೆ ಇದ್ದವ
ಉಚಿತ ಸೌಲಭ್ಯ ನಿರಾಕರಿಸುವ
ಅನಾಮತವಾಗಿ ಬಂದ ಸಿರಿತನ
ಅನಾಹುತ ಸೃಜಿಸುವುದು
ಸೌಲಭ್ಯಗಳು ಹೆಚ್ಚದಷ್ಟು
ಅನಾನೂಕೂಲಗಳು ಜಾಸ್ತಿ
ಉತ್ತಮ ಆರೋಗ್ಯಂ ಆಯುಷ್ಮಾನಂ
ಅತೀ ಯಾವುದಾದರೇನು
ಅಧಿಕ ಕೇಡುಕಂ
ಮನ ಹಸ್ತ ಶುದ್ಧತೆಯಂ
ಬಾಳು ಸುಂದರಂ
ಮದ ಅಧಿಕಂ ಗರ್ವಭಂಗಂ
ಆಧ್ಯತ್ಮಿಕ ಯೋಗಂ
ಮನ ಶರೀರ ಶುದ್ಧಂ
ಚಿನ್ನಂ ಸದಾ ಹೊಳಪಂ
ಮೊಗದಲಿ ನಗೆ ಗೆರೆ
ನಿಜ ಅನುಭವಂ
ಶುದ್ಧ ಮನದ ನಗು
ಆಯುಷ್ಯಕಾರಕಂ
ಕಾಯಕ ತೋರಿಕೆಗೆ ಇರದೆ
ನಡೆನುಡಿ ಒಂದಾಗಿಸಿದವನೇ
ನಿಜ ಶರಣ
ಸರ್ವೆಜನ ಸುಖಿನೋಭವಂತು
ಸಂಭಾಮಿ ಯುಗೇ ಯುಗೇ
ಸರ್ವಜೀವ ಸಂಕುಲದ ಏಳ್ಗೇಗಾಗಿ
ಅನುಭವ ನುಡಿಗಳು ಪಾಲನೆ
ಜಗದ ಬಾಳಿನ ಆದರ್ಶತನವು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.