ಪಂಡಿತ್ ಪುಟ್ಟರಾಜ ಗವಾಯಿಗಳವರ 14.ನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ.
ಕೊಟ್ಟೂರು ಡಿಸೆಂಬರ್.9

ಉಭಯ ಗಾನ ವಿಶಾರದರು, ತ್ರಿಭಾಷಾ ಕವಿವರ್ಯ, ಸಕಲ ವಾದ್ಯ ಕಂಠೀರವ ನಾಡೋಜ ಹಾಗೂ ಕಾಳಿದಾಸ ಪ್ರಶಸ್ತಿ ವಿಜೇತರು ಪರಮ ಪೂಜ್ಯ ಪಂಡಿತ್ ಪುಟ್ಟರಾಜ ಗವಾಯಿಗಳವರ ಹದಿನಾಲ್ಕನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ದಿನಾಂಕ 11-12-2023 ರ ಸೋಮವಾರ ದಂದು ಸಂಜೆ 6:೦೦ ಕ್ಕೆ ಸರಿಯಾಗಿ ಕೊಟ್ಟೂರಿನ ಇಂದು ಕಾಲೇಜ್‌ನಲ್ಲಿ ಆಯೋಜನೆ ಮಾಡಲಾಗಿದೆ. ಸಂಜೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಾರಾದ ಸಿದ್ಧಾರ್ಥ್ ಬೆಳ್ಮಣ್ಣು ಇವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ ಹಾಗೂ ಇವರೊಂದಿಗೆ ತಬಲ ಸಾಥಿಯಾಗಿ ಹೆಸರಾಂತ ತಬಲ ವಾದಕರಾದ ಶ್ರೀಧರ ಮಾಂಡ್ರೆ ಅವರು. ಹಾರ್ಮೋನಿಯಂ ವಾದಕರಾಗಿ ಸತೀಶ್ ಭಟ್ ಹೆಗ್ಗಾರ್ ಅವರು ತಾಳ ವಾದ್ಯದೊಂದಿಗೆ ಸಂತೋಷ್ ಅಳವಂಡಿ (ದೀಕ್ಷಿತ್) ಜೊತೆಯಾಗಲಿದ್ದಾರೆ. ಆತ್ಮೀಯ ಸಂಗೀತ ಪೋಷಕರು, ಕಲಾಭಿಮಾನಿಗಳು ಕಲಾ ಪ್ರೋತ್ಸಾಹಕರಾದ ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಪಂಡಿತ ಪುಟ್ಟರಾಜ ಗವಾಯಿಗಳವರ ಸೇವಾ ಸಮಿತಿಯ ಸುಧಾಕರ ಪಾಟೀಲ್ ಪತ್ರಿಕೆಗೆ ತಿಳಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು