“ನಿತ್ಯ ಕಾಯಕ ಜೀವನವೇ ಬಾಳಿಗೆ ಬೆಳಕು”…..

ಜಗದಲಿ ಮಾನವನ ಬದುಕು
ಬಂಗಾರವಾಗಲು ಪದವಿ ಹುದ್ಧೆಗೆ
ತಕ್ಕ ಕಾನೂನ ಪ್ರಜ್ಞೆವಿರಬೇಕು
ಮುಖ್ಯಸ್ಥ(ನಾಯಕ) ನ್ಯಾಯ
ನೀತಿವಂತನಾಗಿರಬೇಕು
ಹಿಂಬಾಲಕರು ಸುಮ್ಮನೆ ತಲೆ
ದೂಗಬಾರದು
ಬಾಲಕನಾದರೂ ಭವ್ಯ ಭಾರತ
ಸತ್ ಪ್ರಜೆಯ ಗುರಿ ಇರಬೇಕು
ಸುಮ್ನೆ ದ್ವೇಷ ಅಸೂಯೆ ಶತ್ರುಗಳ
ಜೋತೆ ಸ್ನೇಹ ಬೇಡ
ಬಹಳಷ್ಟು ಅಲ್ಲದಿದ್ದರೂ
ಅಲ್ಪವಾದರೂ ಸಕಲ
ಜೀವರಾಶಿಗಳಿಗಳ ಮನುಜ
ಕುಲಕೋಟಿಗೆ ಉಪಯೋಗದ
ನಿಜ ಕಾಯಕವಿರಲಿ ಮಾಡಿದ
ಕರ್ಮ ಯಾವುದಾದರೇನು
ನಮ್ಮನ್ನ ತಪ್ಪದೇ ಹುಡಿಕಿಕೊಂಡು
ಬಂದು ಸೇರಿ ಫಲದ ಸಿರಿ ಖಚಿತ
ಬಾಗುವದಾದರೇ ತಂದೆ ತಾಯಿ
ನಿಜ ದೇವರಗಳ ಎದುರಿಗೆ
ಬಾಗುವುದು ಕಲಿ
ನಯವಂಚಕರಿಗೆ ನಮಸ್ಕಾರ
ಹೇಳಿದರೂ ದಿಕ್ಕಾರ ಸೂಚಕವೇ
ಉತ್ತಮರಿಗೆ ಸಹಾಯ ಸಹಕಾರ
ಏಳ್ಗೆಗೆ ಶುಭಕೋರುವವರಿಗೆ
ಕೈಮುಗಿಯುವುದು
ನಿಜವಾದ ಸತ್ಕಾರ ಪುರಸ್ಕಾರವು
ಕಲಿಯುಗದಲಿ ನಮಗೆ
ನಾವೇ ಆದರ್ಶತನ ಮಹಾನ್
ವ್ಯಕ್ತಿತ್ವ ಬೆಳಸಿ ಮೆರಸುವ ಗುಣ
ನಿತ್ಯ ಕಾಯಕ ಜೀವನವೇಬಾಳಿಗೆ ಬೆಳಕು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ.