ವಿಶ್ವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತ ಜಗತ್ತಿಗೆ – ಮಾದರಿಯಾಗಲಿ ನಾಗಲಕೇರೆ ಗೋವಿಂದ.
ಬಳ್ಳಾರಿ ಸ.15
ಭಾರತೀಯ ಬೌದ್ಧ ಮಹಾಸಭಾ ಹಾಗೂ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ದಿನಾಂಕ 15/9/2024 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತ ಜಗತ್ತಿಗೆ ಮಾದರಿ ಯಾಗಲಿಕ್ಕೆ ಭಾರತ ರತ್ನ ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಕಾರಣರಾಗಿದ್ದರಿಂದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವಿಸಲಾಯಿತು. ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರವು ಇದೊಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವು ಬಹಳ ಮಹತ್ವದ್ದಾಗಿದ್ದು. ಜಾತಿ ಧರ್ಮ ವರ್ಗಗಳ ಭೇದವಿಲ್ಲದೆ ಎಲ್ಲಾ ಜನರು ಸೇರಿಕೊಂಡು ಒಟ್ಟಾಗಿ ಬೀದರ್ ನಿಂದ ಹಿಡಿದು ಚಾಮರಾಜನಗರದ ವರೆಗೆ ಸುಮಾರು 2.5000 ಕಿಲೋ ಮೀಟರ್ ಉದ್ದದ ವರೆಗೂ ಕೈ ಕೈ ಹಿಡಿದು ನಿಲ್ಲಲಿದ್ದಾರೆ. ಇದು ವಿಶ್ವ ದಾಖಲೆ ಯಾಗಲಿದೆ ಎಂದು ಕಾಂಗ್ರೆಸಿನ ಮುಖಂಡರಾದ ನಾಗಲಕೇರೆ ಗೋವಿಂದ ಹೇಳಿದರು.
ಅಸ್ಪೃಶ್ಯತೆ ನಿವಾರಣೆ ಮಾಡಿ ಭ್ರಾತೃತ್ವ ಬೆಳೆಯಲು ಎಲ್ಲಾರು ಒಂದಾಗಿ ಸಮಾನತೆ ಹೆಜ್ಜೆ ಹಾಕಿದ್ದಾರೆ ಈ ಸಮಯದಲ್ಲಿ ಸಂವಿಧಾನದ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆಯನ್ನು ಎಲ್ಲಾರು ನೆನಪಿಸಿ ಕೊಳ್ಳಲಾಗುವುದು ಎಂದು ಕೆ ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿದರು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷರಾದ (ಹನುಮೇಶಪ್ಪ) ಕಮಲ ರತ್ನ ಬಂತೇಜಿ ಪೂಜೆ ನೆರವೇರಿಸಿ ಪಂಚಶೀಲ ಪ್ರವಚನ ಬೋಧಿಸಿ ಹಾಗೂ ಸಂವಿಧಾನ ಪೀಠಿಕೆ ಓದಿದರು ಸ್ವರೂಪ ಪುಲೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರತೀಯ ಬೌದ್ಧ ಮಹಾಸಭಾ ಈಶ್ವರ್ ರಾವ್ ಸಂಗನಕಲ್ಲು ವಕೀಲರು ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಡಾ ರಾಜಕುಮಾರ್ ಮೋರೆ ಬೀದರ್ ವಿಲಾಸ್ ಓ.ಪಿ.ಡಿ ಶೇಖರಪ್ಪ ನಿರ್ದೇಶಕರು ಭೀಮರಾವ್ ಐಎಎಸ್ ಕೆಎಎಸ್ ತರಬೇತಿ ಕೇಂದ್ರ ಮಲ್ಲಿಕಾರ್ಜುನ ಬಿ ಗೋನಾಳ್ ದಲಿತ ಮುಖಂಡರು ರಾಜಶೇಖರ್ ಚಲವಾದಿ ನಗರ ಘಟಕ ಅಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.