ಪ್ರಜಾಪ್ರಭುತ್ವ ದಿನ ವಿಶ್ವದೆಲ್ಲೆಡೆ ಸಮಾನತೆ ಸಾರಿದ ಮಾನವ ಸರಪಳಿ.
ಸಂಗಮ ಕ್ರಾಸ್ ಸ.15

ಬಾಗಲಕೋಟೆ ಸಂಗಮ ಕ್ರಾಸ್ ದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮಾನವ ಸರಪಳಿ ರಚಿಸಿ ಭಾರತದ ಪ್ರಜಾಪ್ರಭುತ್ವದ ಏಕತೆ ಸಮಾನತೆ ಅಖಂಡತೆಯ ಭಾತೃತ್ವ ಭಾವನೆಯ ಸಂಕಲ್ಪ ವಿಶ್ವದೆಲ್ಲೆಡೆ ಸಾರಿದ ಗರಿಮೆ ಹಿರಿಮೆ ಭಾರತ ಮಾತೆಯ ಹೆಮ್ಮೆ ನಮ್ಮ ಪ್ರಜಾಪ್ರಭುತ್ವ ಭಾರತ ದೇಶದ ಹೆಮ್ಮೆ ಎಂದು ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ಭಾರತ ಸಂವಿಧಾನ ಪ್ರಸ್ತಾವನೆ ಓದಿದರು.

ಸುತ್ತ ಮುತ್ತ ಗ್ರಾಮದ ಮುಖಂಡರು ಯುವಕರು ಶಾಲಾ ಮುದ್ದು ಮಕ್ಕಳು ಗುರುವೃಂದ ಸರಕಾರಿ ನೌಕರರು ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ವ್ಯಾಪಾರಸ್ಥರು ಗಣ್ಯ ಮಾನ್ಯರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮಾನವ ಸರಪಳಿ ಕಾರ್ಯಕ್ರಮ ಹಬ್ಬದ ವಾತಾವರಣ ನಿರ್ಮಿಸಿ ಖುಷಿ ಉತ್ಸಾಹ ಕ್ಷಣಗಳನ್ನಾಗಿಸಿ ಸಂಭ್ರಮಿಸಿ ಸಮಗ್ರತೆ ಏಕತೆ ಭ್ರಾತೃತ್ವ ಸೌಹಾರ್ದತೆಯ ಪ್ರಜಾಪ್ರಭುತ್ವ ದಿನ ವಿಶ್ವದೆಲ್ಲೆಡೆ ಸಾರಿದರು.