ಜಗಳೂರು ತಾಲೂಕಿನ ಕಾನನಕಟ್ಟೆ ಎತ್ತಿನ ಬಂಡಿಯಲ್ಲಿ ಕಟ್ಟಿಗೆ ತರುವ ಸಂಪ್ರದಾಯ.
ಕಾನನಕಟ್ಟೆ ಡಿಸೆಂಬರ್.10

ಕೂಡ್ಲಿಗಿ ತಾಲೂಕಿನ ಕಾನಾಮಡುಗು ಗ್ರಾಮದಲ್ಲಿ ನಡೆಯುವ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಡಿ, 21.ರಿಂದ 23.ರ ವರೆಗೆ ನಡೆಯಲಿರುವ ಶ್ರೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾ ದಾಸೋಹ ಮಹೋತ್ಸವ ಬಳಸುವ ಕಟ್ಟಿಗೆಗಳನ್ನು ಜಗಳೂರು ತಾಲ್ಲೂಕಿನ ಗಡಿಗ್ರಾಮ ಕಾನನಕಟ್ಟೆ ಗ್ರಾಮದ ಸದ್ಭಕ್ತರು ಎತ್ತಿನ ಬಂಡಿ ಮತ್ತು ಟ್ರಾಕ್ಟರ್ ಗಳ ಮೂಲಕ ತಂದು ತಮ್ಮ ಭಕ್ತಿಯ ಸೇವೆಯನ್ನು ಸಮರ್ಪಿಸಿದರು. ಹೌದು ಈ ಒಂದು ಸಂಪ್ರದಾಯ ಪುರಾತನ ತಾತ ಮುತ್ತಾತರ ಕಾಲದಿಂದಲೂ ಈ ಸಂಪ್ರದಾಯವನ್ನು ಆಚರಿಸಿ ಕೊಂಡು ಬಂದಿದ್ದಾರೆ. ಡಿ 21.ರಂದು ಗುರುವಾರ ಸಂಜೆ 6ಕ್ಕೆ ಕಾರ್ತಿಕ ಲಕ್ಷ ದೀಪೋತ್ಸವ ಹಾಗೂ 22. ಶುಕ್ರವಾರ ಸಂಜೆ 4 ಗಂಟೆಗೆ ಶ್ರೀ ಸ್ವಾಮಿಯ ರಥೋತ್ಸವ ಹಾಗೂ 23. ಸಂಜೆ 6ಕ್ಕೆ ಶ್ರೀ ಸ್ವಾಮಿಯ ಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಮೂರು ದಿನಗಳ ದಾಸೋಹ ಕಾರ್ಯಕ್ರಮ ಇದ್ದು ಈ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಲಿದ್ದು ಗ್ರಾಮದವರು, ಊರಿನವರು ಈ ಗ್ರಾಮದ ಭಕ್ತರ ಸೇವೆ ನೂರಾರು ವರ್ಷಗಳಿಂದ ನಡೆದು ಕೊಂಡು ಬಂದಿದೆ ಎನ್ನುತ್ತಾರೆ.ಈ ಜಾತ್ರೆ ಮಹೋತ್ಸವದಲ್ಲಿ ಭಜನೆ, ಕೋಲಾಟ, ಭರತ ನಾಟ್ಯ, ಯಕ್ಷಗಾನ ನಾಟಕ, ಸರ್ವ ಧರ್ಮ ಸಾಮೂಹಿಕ ವಿವಾಹಗಳು, ರಕ್ತದಾನ ಶಿಬಿರವನ್ನು ಈ ಜಾತ್ರಾ ಮಹೋತ್ಸವದಲ್ಲಿ ಜರುಗಲಿದೆ. ಸಕಲ ಭಕ್ತಾದಿಗಳು ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಶ್ರೀ ಸ್ವಾಮಿಯ ಕೃಪಾ ಆಶೀರ್ವಾದಕ್ಕೆ ಪಾತ್ರರಾಗಲು ಕೋರಿದೆ ಶ್ರೀ ದಾಸೋಹ ಮಠ ಐಮಡಿ ಶರಣಾರ್ಯರು ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ