“ಯಾವ ಹೂವು ಯಾರ ಮುಡಿಗೋ” ಕಿರು ಚಿತ್ರ ಶೀಘ್ರದಲ್ಲೇ ಬಿಡುಗಡೆ.

ಮೈಸೂರು ಸ.18

ಎ.ಎಸ್.ಆರ್ ಫಿಲ್ಮ್ಸ್ ನಿರ್ಮಾಣದಲ್ಲಿ ಯುವ ಪ್ರತಿಭೆಗಳ “ಯಾವ ಹೂವು ಯಾರ ಮುಡಿಗ” ಕಿರುಚಿತ್ರ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದು, ಸಧ್ಯದಲ್ಲೇ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ,ಛಾಯಾಗ್ರಾಹಕ ಮೈಸೂರ್ ಸೋಮು ತಿಳಿಸಿದ್ದಾರೆ.ಸುಮಾರು ನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ಲೈಟ್‌ ಬಾಯ್ ಹಾಗೂ ಅಸಿಸ್ಟೆಂಟ್ ಕ್ಯಾಮರಾ ಮ್ಯಾನ್ ಆಗಿ ಕೆಲಸ ಮಾಡಿರುವ ಮೈಸೂರ್ ಸೋಮು ಇದೀಗ ಸ್ವತಃ ತಾವೇ “ಯಾವ ಹೂವು ಯಾರ ಮುಡಿಗೋ” ಕಿರು ಚಿತ್ರವನ್ನು ನಿರ್ದೇಶನ ಹಾಗೂ ಛಾಯಾಗ್ರಹಣ ಮಾಡಿದ್ದಾರೆ.

ಸಧ್ಯದಲ್ಲೇ ತೆರೆಗೆ ಬರಲಿರುವ ಕನ್ನಡ ಶಾಲೆಯ ಜಾಗೃತಿ ಕುರಿತ ಭೈರವಿ ಕ್ರಿಯೇಷನ್ಸ್ ನಿರ್ಮಾಣದ ಬಾಲ ನಟಿ ಭೈರವಿ ಅಭಿನಯದ ಕಾರ್ತಿಕರಾಮ್ ನಿರ್ದೇಶನದ ‘ನುಡಿಮುತ್ತು’ ಚಲನ ಚಿತ್ರಕ್ಕೆ ಪೂರ್ಣ ಪ್ರಮಾಣದ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಸೋಮು ಅವರ ಈ ಕಿರು ಚಿತ್ರದಲ್ಲಿ ನಾಯಕ ನಟ ಲೋಕೇಶ್ ಹಳೇಬೀಡು, ನಾಯಕಿಯಾಗಿ ಅನು ಶಿವಮೊಗ್ಗ, ಹಿರಿಯ ಕಲಾವಿದರಾಗಿ ಆನಂದ್ ಬಾಬು ಮಂಡ್ಯ ಹಾಗೂ ಸಂದರ್ಶ ಹುಲಿಯೂರುದುರ್ಗ ಅಭಿನಯಿಸಿದ್ದಾರೆ. ಮೈಸೂರು ಸುತ್ತ ಮುತ್ತ ಮೂರು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ರೋಲ್ ಕಟ್ ಮೀಡಿಯಾ ಹೌಸ್ ನ ವಿನಯ್ ರಾಂಪುರೆ ಸಂಕಲನ, ರಿಕಾರ್ಡಿಂಗ್ ಮ್ಯೂಸಿಕ್ ವಿಸ್ತನ್ಸ್ ಸ್ಟುಡಿಯೋದವರು ಸಂಗೀತ ನೀಡಿದ್ದು ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಅವರದಿದೆ. ಮುಖ್ಯವಾಗಿ ಯುವಕರು ಯುವತಿಯರು ನೋಡಲೇ ಬೇಕಾದಂತಹ ಕಂಟೆಂಟ್ ಈ ಕಿರು ಚಿತ್ರದಲ್ಲಿದ್ದು ಇದೇ ತಿಂಗಳಲ್ಲೇ ಎ.ಎಸ್.ಆರ್ ಕ್ರಿಯೇಷನ್ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕದ ಜನತೆ ಈ ಚಿತ್ರವನ್ನು ನೋಡಿ ಯುವ ಕಲಾವಿದರು, ತಂತ್ರಜ್ಞರನ್ನು ಪ್ರೋತ್ಸಾಹಿಸಿ ಯಶಸ್ವಿ ಮಾಡುವಂತೆ ನಿರ್ದೇಶಕ ಸೋಮು ಕೋರಿದ್ದಾರೆ.

*****

ವರದಿ:

ಡಾ.ಪ್ರಭು ಗಂಜಿಹಾಳ.

ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button