ದಸರಾ ಧರ್ಮ ಸಮ್ಮೇಳನ ಯಶಸ್ಸಿ ಗೊಳಿಸಿ ಧರ್ಮ ಸಮ್ಮೇಳನದ ಪೋಸ್ಟರ್ ಬಿಡುಗಡೆ.

ನರೇಗಲ್ ಸ.20

ಜನರು ಮಾನಸಿಕ ದ್ವಂದ್ವಗಳಿಗೆ ಸಿಲುಕಿ ನೆಮ್ಮದಿ, ಶಾಂತಿ ಕಳೆದುಕೊಂಡು ಒದ್ದಾಡುತ್ತಿದ್ದಾರೆ ಅದಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರೆ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಆದ್ದರಿಂದ ದಸರಾ ಧರ್ಮ ಸಮ್ಮೇಳನ ಯಶಸ್ವಿ ಗೊಳಿಸಿ ಎಂದು ದಸರಾ ಧರ್ಮ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ ಅಕ್ಟೋಬರ್‌ 3 ರಿಂದ 12 ವರೆಗೆ ನಡೆಯುವ ದಸರಾ ಧರ್ಮ ಸಮ್ಮೇಳನದ ಪೋಸ್ಟರ್‌ ಬಿಡುಗಡೆ ಗೊಳಿಸಿ ಮಾತನಾಡಿದರು. ಧರ್ಮ ಗುರುಗಳ ಸಾನಿಧ್ಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಂದ ಗ್ರಾಮದ ಜನರಿಗೆ ಒಳ್ಳೆಯ ದಾಗುತ್ತದೆ. ಭಕ್ತಿ ಭಾವದಿಂದ ಸೇವೆ ಮಾಡುವುದರಿಂದ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದರು.

ಧರ್ಮ ಸಮ್ಮೇಳನದ ನೇತೃತ್ವ ವಹಿಸಿರುವ ಸಿದ್ದರಬೆಟ್ಟ- ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ, ಧರ್ಮ ಸಮ್ಮೇಳನವು, ಮಾನವನು ಧರ್ಮ ದಲ್ಲಿರಬೇಕು, ಧರ್ಮ ಪರಿಪಾಲನೆ ಮಾಡಬೇಕು. ಆ ಧರ್ಮವು ವಿಶ್ವದಲ್ಲಿ ಶಾಂತಿ ನೆಲೆಸುವಂತಿರ ಬೇಕು. ಇಂತಹ ಮಾನವೀಯ ಮೌಲ್ಯಗಳನ್ನು ಬಿತ್ತಲು ಧರ್ಮ ಸಮ್ಮೇಳನವು ಸೂಕ್ತ ವೇದಿಕೆಯಾಗಿದೆ ಎಂದರು.ಈ ವೇಳೆ ಪಾಲಾಕ್ಷಯ್ಯ ಅರಳೆಲೆಮಠ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಬಾಬುಗೌಡ ಪಾಟೀಲ, ಎ. ವಿ. ವೀರಾಪುರ, ಗುರಣ್ಣ ಅವರಡ್ಡಿ , ಮಂಜು ಅಂಗಡಿ, ಸಿದ್ದು ಹನುಮನಾಳ, ಮಹದೇವಪ್ಪ ಕಂಬಳಿ, ಹನುಮಂತ ದ್ವಾಸಲ, ರಾಮನಗೌಡ ಹಲಕುರ್ಕಿ, ವಿಜಯಕುಮಾರ ಹಿರೇಮಠ, ಈಶಪ್ಪ ನೀರಲೋಟಿ, ದೇವನಗೌಡ ಮುನೇನಕೊಪ್ಪ, ವಿನಾಯಕ ಜೋಶಿ ಇದ್ದರು. ನರೇಗಲ್ ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಶಾಸಕ ಜಿ. ಎಸ್.‌ ಪಾಟೀಲ ಹಾಗೂ ಶ್ರೀಗಳು ದಸರಾ ಧರ್ಮ ಸಮ್ಮೇಳನದ ಪೋಸ್ಟರ್‌ ಬಿಡುಗಡೆ ಗೊಳಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button