“ಕುಷ್ಠ ಈಗ ಕಷ್ಠ ಅಲ್ಲ” ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆ ಅಂಗವಿಕಲತೆ ತಡೆಯಬಹುದು.
ಗುಂಡನಪಲ್ಲೆ ಸ.20

ಬಾಗಲಕೋಟೆ ತಾಲೂಕಿನ ಬೆನಕಟ್ಪಿ ಉಪ ಕೇಂದ್ರ, ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದ ಶ್ರೀ ದುರ್ಗಾ ದೇವಿ ಗುಡಿ ಆವರಣದಲ್ಲಿ “ರಾಷ್ಟ್ರೀಯ ಸ್ಪರ್ಶ ಕುಷ್ಠರೋಗ ನಿರ್ಮೂಲನಾ ಆರೋಗ್ಯ ಅರಿವು” ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಶ್ರೀ ಎಸ್. ಎಸ್. ಅಂಗಡಿಯವರು, ಕುಷ್ಠರೋಗ ಮಾಹಿತಿ ಕರಪತ್ರ ವಿತರಿಸಿ, ಕುಷ್ಠ ಈಗ ಕಷ್ಟ ಅಲ್ಲ” ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣ ಗುಣ.”ಕುಷ್ಠರೋಗ ಮುಕ್ತ ಸಮಾಜಕ್ಕಾಗಿ ಕೈ ಕೈ ಜೋಡಿಸಿ. ಬಹು ಔಷಧಿ ಚಿಕಿತ್ಸೆ ಉಚಿತ. ತದ್ದು ಮಚ್ಛೆ ಮುಚ್ಚಿಡ ಬೇಡಿ ಮನದಲಿ ವೈದ್ಯರಲ್ಲಿ ಪರೀಕ್ಷಿಸಿ ಕೊಳ್ಳಿ. ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯಿಂದ ಕುಷ್ಠರೋಗದ ಅಂಗವಿಕಲತೆ ತಡೆಯಬಹುದು.ಕುಷ್ಠರೋಗ ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣ ಗುಣ. “ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯಿಂದ” ಅಂಗವಿಕಲತೆಯನ್ನು ತಡೆಯಬಹುದು,

ಎಂಬ ಘೋಷ ವಾಕ್ಯಯೊಂದಿಗೆ, ಕುಷ್ಠರೋಗ ದೇವರ ಶಾಪ, ಪಾಪದ ಫಲ ಅಲ್ಲ. “ಮೈಕೊಬ್ಯಾಕ್ಟೆರಿಯಂ ಲೇಪ್ರೆ” ಎಂಬ ರೋಗಾಣುಗಳಿಂದ ಚರ್ಮ, ನರಗಳಿಗೆ ಬಾಧಿತ ವಾಗುವುದು ಮಾನವ ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ತಾಮ್ರ ವರ್ಣದ ತದ್ದು ಮಚ್ಛೆ ಕಾಣಿಸುತ್ತದೆ ಯಾವುದೇ ತರಹ ನೋವು, ತುರಿಕೆ ಇರುವುದಿಲ್ಲ, ಕುಷ್ಠರೋಗ ಈಗ ಭಯ ಬೇಡ ಬಹು ಔಷಧಿಯಿಂದ ಸಂಪೂರ್ಣ ಗುಣಮುಖ ವಾಗುವುದು, ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯಿಂದ ಅಂಗವಿಕಲತೆಯನ್ನು ತಡೆಯಬಹುದು. ಕುಷ್ಠ ರೋಗಿಯನ್ನು ದೂರಿಡ ಬೇಡಿ, ಕುಷ್ಠರೋಗ ನಿರ್ಮೂಲನೆಗೆ ಕೈಜೋಡಿಸಿ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಚಿಕಿತ್ಸೆ ಉಚಿತ ವಾಗಿರುತ್ತದೆ ತಮ್ಮ ಮನೆಗಳಿಗೆ ಬರುವ ಆರೋಗ್ಯ ಅಧಿಕಾರಿಗಳಿಗೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸ್ವಯಂ ಸೇವಕರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಿ, ಕುಷ್ಠರೋಗ ಮುಕ್ತ ಭಾರತಕ್ಕಾಗಿ ಕೈಜೋಡಿಸಲು ಮನವಿ ಮುಖಾಂತರ ಮಾಹಿತಿ ನೀಡಿದರು. ರಾಷ್ಟ್ರೀಯ ಸ್ಪರ್ಶ ಕುಷ್ಠರೋಗ ನಿರ್ಮೂಲನಾ ಆರೋಗ್ಯ ಅರಿವು ಜನ ಜಾಗೃತಿ ಕಾರ್ಯಕ್ರಮದಲ್ಲಿ, ಆರೋಗ್ಯ ಇಲಾಖೆಯ ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಹನುಮಂತ ಕೊಲ್ಹಾರ, ಸಿದ್ದು ದೊಡಮನಿ, ಸಂಗಮೇಶ ದೊಡಮನಿ, ರಮೇಶ ಮಾದರ, ವಿಠ್ಠಲ ಮಾದರ, ಬಸಪ್ಪ ಮಾದರ, ಶೇಖಪ್ಪ ಮಾದರ, ಮುಖಂಡರು, ಯುವಕರು ಭಾಗವಹಿಸಿದ್ದರು