ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಎಂ.ಮುಗುಳಿ ನೇತ್ರತ್ವದಲ್ಲಿ ಪಿ.ಓ.ಪಿ ಯಿಂದ – ತಯಾರಿಸಿದ 6 ಗಣಪತಿ ಮೂರ್ತಿ ವಶಕ್ಕೆ.
ಕೂಡ್ಲಿಗಿ ಆ.20

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ 2 ನೇ. ವಾರ್ಡಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸೋಮವಾರ ರಂದು ಪಟ್ಟಣ ಪಂಚಾಯತಿ ಮುಖ್ಯಧಿಕಾರಿಗಳ ಕೆ.ಎಂ.ಮುಗುಳಿಯವರ ನೇತೃತ್ವದಲ್ಲಿ ಪಟ್ಟಣ ಪಂಚಾಯತಿಯ ಕಿರಿಯ ಆರೋಗ್ಯ ನಿರೀಕ್ಷಕರು ಗೀತಾ ಹಾಗೂ ಮೇಸ್ತ್ರೀ ಪರುಶುರಾಮ ಹಾಗೂ ಎಸ್.ಡಿ.ಎ. ರಾಜಭಕ್ಷಿ ಹಾಗೂ ತಾಂತ್ರಿಕ ಇಂಜಿನೀಯರ್ ಗೀರೀಶ್, ರಾಮ ಚoದ್ರ, ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಡಳಿತ ದಿಂದ ಬಂದಂತಹ ದೂರಿನಿಂದ ಕೂಡ್ಲಿಗಿ ಪಟ್ಟಣದಲ್ಲಿ ಗಣಪತಿ ಮೂರ್ತಿಗಳ ತಯಾರಿಸುವವರ.

ಮನೆಗಳನ್ನು ಅಥವಾ ಶೇಡ್ ಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ಗೋಪಾಲ್ ಚಿತ್ರಗಾರ ರವರ ಮನೆಯಲ್ಲಿ ನೂರಾರು ಗಣೇಶ್ ಮೂರ್ತಿಗಳಲ್ಲಿ 6 ಮೂರ್ತಿಗಳು ಪಿ.ಒ.ಪಿ ಯಿಂದ ತಯಾರಿಸಿರುವ ಮೂರ್ತಿ ಗಳು ಸಿಕ್ಕಿರುತ್ತವೆ ಎಂದು ಮುಖ್ಯಧಿಕಾರಿ ಕೆ.ಎಂ ಮುಗುಳಿ ಯವರು ತಿಳಿಸಿರುತ್ತಾರೆ, ಹಾಗೆ ಚೋರನೂರು ರಸ್ತೆಯಲ್ಲಿರುವ ಗಣಪತಿ ತಯಾರಿಸುವ ಇನ್ನೊರ್ವ ವ್ಯಾಪಾರಿ ಮನೆಯಲ್ಲಿ ಸಹ ಪರಿಶೀಲನೆ ಮಾಡಲಾಗಿದೆ ಅಲ್ಲಿ ಯಾವುದೇ ಪಿ.ಓ.ಪಿ ಯಿಂದ ಮಾಡಿರುವ ಗಣಪತಿಗಳು ಸಿಕ್ಕರುವುದಿಲ್ಲ ಈ ಪಿ.ಓ.ಪಿ ಯಿಂದ ಗಣಪತಿ ಮೂರ್ತಿಗಳನ್ನು ಮಾಡುವುದರಿಂದ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಪಿ.ಓ.ಪಿ ಯಿಂದ ಗಣಪತಿ ಮೂರ್ತಿ ಗಳನ್ನು ಮಾಡಬಾರದು ಆ ಮೂರ್ತಿಗಳನ್ನು ಬಾವಿಗಳಲ್ಲಗಲಿ ಅಥವಾ ಕೆರೆ ನೀರಿನಲ್ಲಿ ಪಿ.ಓ.ಪಿ ಯಿಂದ ಮಾಡಿರುವ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿದಾಗ ಅದು ನೀರಿನಲ್ಲಿ ಕರಗದೆ ಹಾಗೆ ಉಳಿಯುವುದರಿಂದ ಪರಿಸರ ಹಾನಿಯಾಗುತ್ತದೆ.

ಎಂಬ ಸಂದೇಶ ಇರುವುದರಿಂದ ಸರ್ಕಾರದ ಆದೇಶ ಪಾಲಿಸುವಂತೆ ಗಣಪತಿ ತಯಾರಿಸುವವರಿಗೆ ಜಾಗೃತಿ ಮಾಹಿತಿ ತಿಳಿಸುದರೊಂದಿಗೆ 6 ಗಣಪತಿ ಮೂರ್ತಿ ಗಳನ್ನು ವಶಪಡಿಸಿ ಕೊಳ್ಳಲಾಗಿದೆ, ಈ ವಶಪಡಿಸಿ ಕೊಂಡಿರುವ ಪಿ.ಓ.ಪಿ ಮೂರ್ತಿಗಳನ್ನು ಜಿಲ್ಲಾಡಳಿತಕ್ಕೆ ವಿಷಯ ತಿಳಿಸಿದ್ದು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮoಡಳಿಗೆ ಮಾಹಿತಿ ನೀಡಿದ್ದೇವೆ. ಶೀಘ್ರದಲ್ಲೆ ಪರಿಸರ ಮಾಲಿನ್ಯ ಮಂಡಳಿ ಇಲಾಖೆಯ ನೂರಿತ ತಜ್ಞರು ಬಂದು ಪರಿಶೀಲಿಸಿದ ನಂತರ ಪಿ.ಓ.ಪಿ ಯಿಂದ ತಯಾರಿಸುವವರ ವಿರುದ್ಧ ಕ್ರಮ ಜರಿಗಿಸಲಾಗುವುದು ಎಂದು ತಿಳಿಸಲಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ