ವಿದ್ಯುತ್ ತಂತಿಯಿಂದ ಆಕಸ್ಮಿಕ – ದುರ್ಗದಾಸ್ ಸಾವು.
ಮಂಗನಹಳ್ಳಿ ಡಿ.14

ಕೊಟ್ಟೂರು ತಾಲೂಕಿನ ಮಂಗನಹಳ್ಳಿ ಗ್ರಾಮದ ಹೆಚ್ ದುರ್ಗದಾಸ್ ತಂದೆ ಭೀಮಪ್ಪ 39, ವರ್ಷ ಈತನು ಬಳ್ಳಾರಿ ಜಿಲ್ಲೆಯ ಕುಡುತಿನಿ ಹತ್ತಿರ ಜಾಣನಕಟ್ಟಿ ಗ್ರಾಮದ ಬಳಿ ನೀರಿನ ಏರ್ ಟ್ಯಾಂಕ್ ಕೆಲಸ ಮಾಡುವ ಸಮಯದಲ್ಲಿ ಕಬ್ಬಿಣದ ರಾಡನ್ನು ಮೇಲೆ ಎತ್ತಿದಾಗ ಅಲ್ಲೇ ಇರುವ 11 ಕೆ.ವಿ ಲೈನ್ ತಗಲಿ ಕರೆಂಟ್ ಶಾಕ್ ನಿಂದ ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಮರಣ ಹೊಂದಿರುತ್ತಾನೆ. ಈತನ ಕುಟುಂಬಸ್ಥರು ಬಂದು ಮಿತ್ರರು ಊರಿನ ಮುಖಂಡರು ಮತ್ತು ಯುವಕರು ಇವರ ತಂದೆ ತಾಯಿ ಸೋದರ ಸಹೋದರರಿಗೆ ದುಃಖವನ್ನು ನೀಗಿಸುವ ಶಕ್ತಿ ಆ ದೇವರು ಕರುಣಿಸಲಿ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು