ಶೌಚಾಲಯಕ್ಕಾಗಿ ಮೆದಿಕಿನಾಳ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ – ಮಹಿಳಾ ಮಣಿಗಳು.
ಮಸ್ಕಿ ಸ. 24

ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆದಿಕಿನಾಳ ಗ್ರಾಮದ ದ್ಯಾವಮ್ಮ ಗುಡಿಯ ಹತ್ತಿರದ ಹಳೆಯ ಸಾರ್ವಜನಿಕ ಶೌಚಾಲಯ ಕಛೇರಿ ನಿಯಮ ಪಾಲನೆ ಮಾಡದೇ ತೆರವು ಗೊಳಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಕರವೇ ಮುಂದಾಳತ್ವದಲ್ಲಿ ಗ್ರಾಮದ ಮಹಿಳೆಯರು ಮನವಿ ಮಾಡಿದರು.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ವಾರ್ಡ್ ಗಳಲ್ಲಿ ಶೌಚಾಲಯ ಕೊರತೆ ಇದ್ದು ಇದನ್ನು ನೀಗಿಸಲು ಗ್ರಾಮ ಪಂಚಾಯಿತಿ ಮುಂದಾಗುತ್ತಿಲ್ಲ ಕೆಲವು ಶೌಚಾಲಯ ಇದ್ದರೂ ಇಲ್ಲದಂತಾಗಿದೆ ಹಳೆಯ ಶೌಚಾಲಯದಲ್ಲಿ ಗೋಡೆಗಳು ಬಿದ್ದಿದ್ದು ಅದರಲ್ಲಿ ದಿನನಿತ್ಯ ಹಾಗೂ ಚೋಳು ಗೂಡಾಗಿ ಮಾರ್ಪಟ್ಟಿದೆ ಹೀಗಾಗಿ ಮಹಿಳೆಯರು ಬಯಲು ಶೌಚಾಲಯ ಹೋಗಿ ಬೇಸತ್ತು ಸೋಮವಾರ ಬೆಳಿಗ್ಗೆ ಮಹಿಳೆಯರು ಲೋಟ (ಚಂಬು) ಸಮೇತ ಮೆದಿಕಿನಾಳ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿಗೆ ಎಷ್ಟೋ ಸಾರಿ ಶೌಚಾಲಯ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು ಅಧಿಕಾರಿಗಳು ಮಾತ್ರ ಮೌನ ಮುರಿದಿದ್ದಾರೆ. ಶೌಚಾಲಯಕ್ಕಾಗಿ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಯೋಜನೆಗಳು ಬಂದರೂ ಕೂಡ ಇಲ್ಲೇ ದುರುಪಯೋಗ ಆಗುತ್ತದೆ ಎಂದು ಆರೋಪಿಸಿದರು.ಕೂಡಲೇ ಶೌಚಾಲಯ ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ತಾಲೂಕ ಪಂಚಾಯಿತಿಗೆ ಮುತ್ತಿಗೆ ಹಾಕ್ತೀವಿ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.ಯಾವುದೇ ಪರವಾನಗಿ ತೆಗೆದು ಕೊಂಡಿಲ್ಲ ಎಂದು ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದ್ದರಿಂದ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಯಾವ ವಿಚಾರಕ್ಕೆ ಹೋರಾಟ ಮಾಡುತ್ತಾ ಇದ್ದೀರಾ ಎಂದು ಕೇಳಿದಾಗ ಸಾರ್ವಜನಿಕರು ನಾವು ದಿನ ನಿತ್ಯವೂ ಬಹಿರ್ದೆಸೆಗೆ ಚಂಬು ಹಿಡಿದು ಹೋಗಬೇಕಾದ ಸಂದರ್ಭ ಬಂದೊದಗಿದೆ 20 ವರ್ಷ ದಿಂದ ಇದ್ದ ಶೌಚಾಲಯ ಯಾವುದೇ ಪುರಾವೆ ಇಲ್ಲದೆ ಸಾರ್ವಜನಿಕ ಮಾಹಿತಿಯೂ ನೀಡದೆ ಹೋಗಲಿ ಮೇಲಧಿಕಾರಿಗಳ ಡೆಮೋಲೇಶನ್ ಆರ್ಡರ್ ಸಹ ಇಲ್ಲದೆ ಏಕಾ ಏಕಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಬೀಳಿಸಿರುವುದು ಈ ಭಾಗ ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯವಾಗಿದೆ.

ಆದ್ದರಿಂದ ನಮಗೆ ಶೌಚಾಲಯ ನಿರ್ಮಾಣ ಮಾಡಿಸಿ ಕೊಡಿ ಎಂದು ನೆರೆದ ಮಹಿಳೆಯರು ಪಟ್ಟು ಹಿಡಿದರು.ವಿಷಯ ಆಲಿಸಿದ ಪೋಲಿಸ್ ಅಧಿಕಾರಿಗಳು ಸರಿ ಸರಿ ನಿಮ್ಮ ಸಮಸ್ಯೆಯನ್ನು ಸಂಭಂದಪಟ್ಟ ಮೇಲಾಧಿಕಾರಿಗಳಿಗೆ ಹೇಳಿ ಬಗೆಹರಿಸಿ ಕೊಳ್ಳಬೇಕು ನಿಮಗೆ ಹೆಚ್ಚು ಕಡಿಮೆ ಆದರೆ ಯಾರೂ ಜವಾಬ್ದಾರರು ಆದ್ದರಿಂದ ನಮಗೆ ಮತ್ತು. ಅಧಿಕಾರಿಗಳಿಗೆ ಹೋರಾಟದ ಮಾಹಿತಿ ನೀಡಿ ಎಂದು ತಿಳಿ ಹೇಳಿದರು.ನೆರೆದ ಮಹಿಳೆಯರು ನಮಗೆ ಶೌಚಾಲಯ ನಿರ್ಮಾಣ ಮಾಡಿಸಿ ಕೊಡುತ್ತೇವೆ ಎಂದು ಆಶ್ವಾಸನೆ ಅಲ್ಲಾ ಬಾಂಡ್ ನಲ್ಲಿ ಬರೆದು ಕೊಡುವ ಮೂಲಕ ನಮ್ಮ ಬೇಡಿಕೆ ಈಡೇರಿಸಿ ಆಗ ನಾವು ನಮ್ಮ ಹೋರಾಟವನ್ನು ಹಿಂಪಡೆಯುತ್ತೇವೆ ಎಂದು ಮನ ವೊಲಿಸಲು ಹೋದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರುಗಳಿಗೆ ಬೇಡಿಕೆ ಇಟ್ಟರು. ಈ ಬೇಡಿಕೆ ನಮ್ಮ ಕೈಯಿಂದ ನೆರವೇರಿಸಲು ಆದ್ರೆ ಮಾಡುತ್ತೇವೆ ಇಲ್ಲ ಅಂದ್ರೇ ಇಲ್ಲಾ ಅನ್ನುತ್ತಾ ಸ್ಥಳದಿಂದ ತೆರಳಿದರು. ನೆರೆದ ಹೋರಾಟ ನಿರತ ಮಹಿಳೆಯರು ನಮ್ಮ ಬೇಡಿಕೆ ಈಡೇರುವವರೆಗೂ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.ನಂತರ ತಾಲೂಕ ಪಂಚಾಯತ್ ಮಸ್ಕಿ ಕಾರ್ಯಾಲಯದ ಕಾರ್ಯನಿರ್ವಾಹಕ ಅಧಿಕಾರಿಯ ಪರವಾಗಿ ಆಗಮಿಸಿದ್ದ ಚಂದ್ರಶೇಖರ್ ಸಿಬ್ಬಂದಿ ಇವರಿಗೆ ಕರವೇ ಮುಂದಾಳತ್ವದಲ್ಲಿ ಗ್ರಾಮದ ಮಹಿಳೆಯರು ಮನವಿ ಪತ್ರವನ್ನು ಸಲ್ಲಿಸಿ ಸಮಸ್ಯೆ ಸರಿ ಪಡಿಸುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿಆರ್.ಕೆ ನಾಯಕ ಕರವೇ ತಾಲೂಕ ಅಧ್ಯಕ್ಷರು, ದುರುಗರಾಜ್ ವಟಗಲ್ ಕರವೇ ತಾಲೂಕ ಅಧ್ಯಕ್ಷರು,ಸಿದ್ದು ಮೇಟಿ ಹೋಬಳಿ ಮಟ್ಟದ ಅಧ್ಯಕ್ಷರು, ಯಲ್ಲಮ್ಮ, ದ್ಯಾವಮ್ಮ, ಮಲ್ಲಮ್ಮ, ನಾಗಮ್ಮ, ಪಾರ್ವತಿ, ಶರಣಮ್ಮ, ಶಿವಮ್ಮ. ಪೂಜಾರಿ, ರಸಲಮ್ಮ, ತಿಪ್ಪಮ್ಮ, ದುರುಗಮ್ಮ, ಹನುಮಮ್ಮ ನಾಯಕ, ಹನುಮಮ್ಮ ಕಂಬಾರ,ಚೆನ್ನಮ್ಮ, ವಿಜಯಲಕ್ಷ್ಮಿ ಪೂಜಾರಿ,ಶ್ಯಾವಮ್ಮ ಭೋವಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ