ನಮ್ಮ ನಡೆ ವಾರ್ಡ್ ಕಡೆ.
ತರೀಕೆರೆ ಅಕ್ಟೋಬರ್.10

ಪ್ರತಿ ವಾರ್ಡ್ ಗೆ ಭೇಟಿ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಬಗೆ ಹರಿಸುವುದಾಗಿ ಪುರ ಸಭಾ ಅಧ್ಯಕ್ಷರಾದ ಪರಮೇಶ್ ಇಂದು ಬೆಳಗ್ಗೆ 7:30ರ ಸಮಯದಲ್ಲಿ ಒಂದನೇ ವಾರ್ಡಿನ ಕೋಟೆ ಕ್ಯಾಂಪ್ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಮಾತನಾಡಿದರು. ಪ್ರಥಮ ಬಾರಿಗೆ ಒಂದನೇ ವಾರ್ಡಿಗೆ ಬಂದಿದ್ದೇನೆ, ಇಲ್ಲಿಂದ ಪ್ರಾರಂಭಿಸಿ ಪಟ್ಟಣದ ಎಲ್ಲಾ ವಾರ್ಡ್ಗಳಿಗೂ ಭೇಟಿ ನೀಡಲಿದ್ದೇನೆ. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪುರ ಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ಮಾತನಾಡಿ ತರೀಕೆರೆ ಪುರ ಸಭೆಯಿಂದ ಹೊಸ ಅಧ್ಯಾಯ ಪ್ರಾರಂಭಿಸಿದ್ದೇವೆ, ನಮ್ಮ ನಡೆ ವಾರ್ಡ್ ಕಡೆ ಎಂದು ಪುರ ಸಭಾ ಅಧ್ಯಕ್ಷರು, ಉಪಾಧ್ಯಕ್ಷರು,,ಸದಸ್ಯರು, ಹಾಗೂ ಸಿಬ್ಬಂದಿಗಳೊಂದಿಗೆ ಪ್ರತಿ ವಾರ್ಡಿಗೂ ಭೇಟಿ ನೀಡುವ ನಮ್ಮ ನಡೆ ವಾರ್ಡ್ ಕಡೆ ಎಂಬ ಕಾರ್ಯ ಕ್ರಮದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ಕ್ರಮ ಕೈಗೊಂಡು ಜಟ್ಟಿಲ ಸಮಸ್ಯೆಗಳನ್ನು ಕೌನ್ಸಿಲ್ ಸಭೆಯ ಮುಂದೆ ಮಂಡಿಸಿ ಬಗೆ ಹರಿಸುತ್ತೇವೆ. ಹಾಗೂ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲಸ ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸಲಾಗುತ್ತದೆ ಎಂದು ಹೇಳಿದರು. ಉಪಾಧ್ಯಕ್ಷರಾದ ರಿಹಾನ ಪರ್ವೀನ್ ರವರು ಮಾತನಾಡಿ ಮುಖ್ಯ ಅಧಿಕಾರಿಗಳು ಶ್ರಮ ಪಟ್ಟು ಕಾರ್ಮಿಕರೊಂದಿಗೆ ವಾರ್ಡುಗಳ ಸ್ವಚ್ಛತೆ ಮತ್ತು ಸಮಸ್ಯೆ ಬಗೆ ಹರಿಸುವ ಕೆಲಸ ಮಾಡುತ್ತಿದ್ದಾರೆ ಮೊದಲ ಬಾರಿಗೆ ನಮ್ಮ ವಾರ್ಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು. ಸ್ಥಳೀಯರಾದ ಪದ್ಮ ಚನ್ನಕೇಶವ ರವರು ಪೌರ ಕಾರ್ಮಿಕರ ವಸತಿ ಗೃಹಗಳು ಮಳೆಯಿಂದ ಸೋರುತಿದೆ ದುರಸ್ತಿ ಮಾಡಿಸ ಬೇಕು ಹಾಗೂ ಅಂಬೇಡ್ಕರ್ ನಗರ ಕೆರೆಯ ಪಕ್ಕ ದಲ್ಲಿರುವುದರಿಂದ ಹಾವುಗಳು, ನರಿಗಳು,ಕಾಡು ಪ್ರಾಣಿಗಳು ಬರುತ್ತವೆ ಗಿಡ ಗಂಟೆಗಳನ್ನು ತೆಗೆಸಿ ಸ್ವಚ್ಛತೆಯನ್ನು ಕಾಪಾಡ ಬೇಕೆಂದು ಹೇಳಿದರು. ಹಿರಿಯ ಆರೋಗ್ಯ ನಿರೀಕ್ಷಕರಾದ ಮಹೇಶ್ ರವರು ಪ್ಲಾಸ್ಟಿಕ್ ಕವರ್ ಗಳನ್ನು ಬಳಸಬೇಡಿ, ಅಂಗಡಿ ಸಮಾನು ತರಲು ಬಟ್ಟೆ ಬ್ಯಾಗುಗಳನ್ನು ಬಳಸಿರಿ ಎಂದು ಹೇಳಿದರು, ಮೇಸ್ತ್ರಿ ಪ್ರಕಾಶ್, ವಾಟರ್ ಸಪ್ಲೈ ಮೇಸ್ತ್ರಿ ಅಜೇಯ, ವಾಟರ್ ಮ್ಯಾನ್ ಭರತ್ ರವರು ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಲ್ಲಿ ವಿಚಾರಣೆ ಮಾಡಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ