ಕಾಂಗ್ರೇಸ್ ಸರ್ಕಾರ ಮುತುವರ್ಜಿ ವಹಿಸಿ ಒಳ ಮೀಸಲಾತಿ ನೀಡಲಿ, ದಲಿತರಿಂದ ಬೃಹತ್ ಸಮಾವೇಶ – ಸಂಸದ ಗೋವಿಂದ ಕಾರಜೋಳ.

ಖಾನಾ ಹೊಸಹಳ್ಳಿ ಸ.24

ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಗಾಣಿಗರ ಸಮುದಾಯ ಭವನದ ಮುಂಭಾಗದಲ್ಲಿ ಚಿತ್ರದುರ್ಗದ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ಇವರು ಚಿತ್ರದುರ್ಗ ಮಾರ್ಗದಿಂದ ಸಂಚರಿಸುವ ಮಾರ್ಗದ ಮಧ್ಯ ಕಾನ ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ದಲಿತ ಮುಖಂಡರು ಭೇಟಿಯಾಗಿ ಒಳ ಮೀಸಲಾತಿ ಬಗ್ಗೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಅವರು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅಗತ್ಯ ಇದೆ. ಈ ಸಂಬಂಧ ಬೊಮ್ಮಾಯಿ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಅಡೆತಡೆಗಳೆಲ್ಲ ನಿವಾರಣೆಯಾಗಿವೆ. ಈಗಿನ ಸರ್ಕಾರ ಮುತುವರ್ಜಿ ವಹಿಸಿ ಒಳ ಮೀಸಲಾತಿ ನೀಡಬೇಕು‌. ದಲಿತ ಸಮುದಾಯದವರು ಸಾವಿರ ಸಂಖ್ಯೆಯಲ್ಲಿ ಒಳ ಮೀಸಲಿನ ಅನುಷ್ಠಾನಕ್ಕೆ ಶೀಘ್ರದಲ್ಲೇ ಸಮಾವೇಶ ನಡೆಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎನ್ ರವಿಕುಮಾರ್ ವಿಧಾನಪರಿಷತ್ ಸದಸ್ಯರು, ಚಿತ್ರದುರ್ಗ ದಲಿತ ಮುಖಂಡ ಮುರಾರ್ಜಿ ಡಿ ಓ, ಡಿಎಸ್ಎಸ್ ತಾಲೂಕ ಅಧ್ಯಕ್ಷ ಟಿ ಗಂಗಾಧರ್, ಗ್ರಾ.ಪಂ ಸದಸ್ಯ ಹೊನ್ನೂರ ಸ್ವಾಮಿ, ಕಾನಾಮಡುಗು ಎಚ್ ದುರುಗಪ್ಪ, ಡಿಎಸ್ಎಸ್ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಕಾನಮಡುಗು ದುರುಗಪ್ಪ, ಸಂಘಟನಾ ಸಂಚಾಲಕ ಎನ್. ಪಕೀರಪ್ಪ ಕಾನಮಡಗು, ನಡವಲುಮನೆ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ಹೇಮಣ್ಣ, ನೀರಗುಂಟೆ ತಿಪ್ಪೇಶ್, ಮಾದಿಗ ದಂಡೋರ ಸಂಘದ ಹೋಬಳಿ ಅಧ್ಯಕ್ಷ ಎಂ ಬಸವರಾಜ್, ಸಣ್ಣ ನಾಗರಾಜ, ಮಂಜುನಾಥ, ದುರುಗೇಶ್, ಯಂಬಳಿ ಸಿದ್ದಪ್ಪ, ಕರಿಬಸಪ್ಪ ಸೇರಿದಂತೆ ದಲಿತ ಸಮುದಾಯದ ಮುಖಂಡರು, ಗ್ರಾ.ಪಂ ಸದಸ್ಯರು, ಯುವಕರು ಇತರರು ಇದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button