ಕಂದಗಲ್ಲ ಗ್ರಾಮದಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮ.
ಕಂದಗಲ್ಲ ಜನೇವರಿ.30

ಸರಕಾರ ತಾಯಂದಿರಿಗೆ ಮತ್ತು ಮಕ್ಕಳಿಗೆ ಸಾಕಷ್ಟು ಸೌಲಭ್ಯ ನೀಡುತ್ತಿದ್ದು ಅವುಗಳನ್ನು ಸರಿಯಾಗಿ ಉಪಯೋಗ ತೆಗೆದು ಕೊಂಡು ಬಲಿಷ್ಠ ಹಾಗೂ ವಿದ್ಯಾವಂತ ಮಕ್ಕಳನ್ನಾಗಿ ಪರಿವರ್ತಿಸಿ ಈ ನಾಡಿಗೆ ಸತ್ಪ್ರಜೆಗಳನ್ನು ನೀಡುವ ಗುರುತರ ಜವಾಬ್ದಾರಿ ನಮ್ಮಲ್ಲೆರ ಮೇಲಿದೆ ಎಂದು ಗ್ರಾಮದ ಶoಭಣ್ಣ ಡಂಬಳ ಹೇಳಿದರು.ಅವರು ಸ್ಥಳೀಯ ಅಂಗನವಾಡಿ ಕೇಂದ್ರ 4 ರಲ್ಲಿ ನಡೆದ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪತ್ರಕರ್ತ ವೀರೇಶ್ ಶಿಂಪಿ ಕಾರ್ಯಕ್ರಮ ಕುರಿತು ಸವಿಸ್ತಾರವಾಗಿ ವಿವರಿಸಿದರು.ರುದ್ರಮ್ಮ ಗಣಾಚಾರಿ ಕವಿತಾ ಹವಾಲ್ದಾರಾಮಠ ಸುಮಾ ಕುಸುಬಿ ಮು ಅತಿಥಿಗಳಾಗಿ ಆಗಮಿಸಿದ್ದರು. ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶಂಕ್ರಮ್ಮ ಗಡಿಯಣ್ಣನವರ ಸ್ವಾಗತಿಸಿ ವಂದಿಸಿದರು ರೇಣುಕಾ ಕುಶುಬಿ ನಿರೂಪಿಸಿದರು.
ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ. ಇಳಕಲ್