ಪಿ.ಎಸ್.ಎಸ್ ಕಾಲೇಜಿನಲ್ಲಿ ಎನ್.ಎಸ್.ಎಸ್ ದಿನಾಚರಣೆ.
ಬೇವೂರ ಸ.25

ಯುವಕರು ದೇಶದ ಶಕ್ತಿಯಾಗಿ ಬೆಳೆಯಬೇಕು. ಗ್ರಾಮೀಣ ಭಾಗದಲ್ಲಿ ಸೇವೆ ಮಾಡಬೇಕೆಂದು ಹಿರಿಯ ಉಪನ್ಯಾಸಕರಾದ ಶ್ರೀ ಬಿ.ಬಿ.ಬೇವೂರ ಹೇಳಿದರು. ಸಮಾಜದ ಋಣವನ್ನು ತೀರಿಸಲು ಎನ್.ಎಸ್.ಎಸ್. ಸೇವೆ ಅವಶ್ಯವಾಗಿದೆ ಎಂದು ಕಾಯ೯ಕ್ರಮದ ಮುಖ್ಯ ಅತಿಥಿಗಳಾದ ಡಿ.ವಾಯ್ ಬುಡ್ಡಿಯವರ ಹೇಳಿದರು. ಹಿರಿಯ ಉಪನ್ಯಾಸಕರಾದ ಶ್ರೀ ಎಸ್.ಎಸ್ ಆದಾಪೂರ ಎನ್.ಎಸ್.ಎಸ್ ಗೀತೆ ಹಾಡಿದರು. ನಾಗಲಿಂಗೇಶ ಬೆಣ್ಣೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಚಾರ್ಯರಾದ ಡಾ, ಜಗದೀಶ್ ಭೈರಮಟ್ಟಿ , ಎನ್.ಎಸ್.ಎಸ್ ಅಧಿಕಾರಿಗಳಾದ ಜಿ.ಎಸ್ ಗೌಡರ, ಕನ್ನಡ ಉಪನ್ಯಾಸಕರಾದ ಡಾ, ಎಸ್.ಬಿ ಹಂಚಿನಾಳ, ಇತಿಹಾಸ ಉಪನ್ಯಾಸಕರಾದ ಡಾ, ಎ. ಎಮ್. ಗೊರಚಿಕ್ಕನವರ ಸೇರಿದಂತೆ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಬಿ.ಎ 1 ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಕಾರ್ಯಕ್ರಮದ ವಿವಿಧ ಹಂತಗಳನ್ನು ನೆರವೇರಿಸಿ ಕೊಟ್ಟರು.
ವರದಿ : ಅಮರೇಶ ಮ.ಗೊರಚಿಕ್ಕನವರ.